2026 ರ ಆರ್ಥಿಕ ಸಮೀಕ್ಷೆ ಅತೀ–ರಾಷ್ಟ್ರವಾದ, ತಮ್ಮದೇ ಶ್ರೆಷ್ಟವೆಂಬ ಭಾವನೆ, ವಲಸಿಗ-ವಿರೋಧಿ ನಿಲುವು ಮುಂತಾದ ಅನೇಕ ಜಾಗತಿಕ- ಭೌಗೋಳಿಕ ರಾಜಕೀಯ ಸವಾಲುಗಳು ಮತ್ತು ಅವುಗಳ ಪರಿಣಾಮಗಳನ್ನು ವಿವರಿಸಿದ್ದರೂ, , ಭಾರತದೊಳಗೆ ಮಾತ್ರ ಎಲ್ಲವೂ ಚೆನ್ನಾಗಿದೆ ಎಂದು ಒತ್ತಿ ಹೇಳುತ್ತ, ಸಹಜವಾಗಿಯೇ ದೇಶದೊಳಗಿನ ಅರ್ಥವ್ಯವಸ್ಥೆಯಲ್ಲಿ ಸ್ಥಿರತೆ ಇರುತ್ತದೆ ಎಂದು ಭಾರೀ ಭರವಸೆ ನೀಡುತ್ತದೆ. ವಿಶ್ವಾಸ
(ಸಂಗ್ರಹಾನುವಾದ: ಜಿ ಎಸ್ ಮಣಿ
ಆಧಾರ: ದಿ ವೈರ್ ಜಾಲತಾಣ ಪತ್ರಿಕೆಯಲ್ಲಿ ಕವಿತಾ ಕಬೀರ್ ಅವರ ಲೇಖನ)
ಈ ವರ್ಷದ, ಅಂದರೆ 2026 ರ, ಆರ್ಥಿಕ ಸಮೀಕ್ಷೆ ಹೊರಬಿದ್ದಿದೆ. ಜಗತ್ತಿನ ಎಲ್ಲೆಡೆ ಇರುವ ತಲ್ಲಣಗಳು ಮತ್ತು ರಾಜಕೀಯ ಸಂಘರ್ಷ, ವ್ಯಾಪಾರ ವೈಷಮ್ಯ ಇತ್ಯಾದಿಗಳನ್ನು ಅದು ದಾಖಲಿಸುತ್ತದೆ. ಇಂದು ಜಾಗತಿಕ ವ್ಯಾಪಾರ ಇಂಧನ ಮತ್ತು ಹಣಕಾಸಿನ ಸುತ್ತ ಗಿರಕಿ ಹೊಡೆಯುತ್ತಿದೆ ಎಂದೆಲ್ಲ ಹೇಳುತ್ತದೆ. ಇದಲ್ಲದೆ ಇನ್ನೂ ಹಲವು ಜಾಗತಿಕ ವಿದ್ಯಮಾನಗಳನ್ನು ಅದು ಗಮನಿಸುತ್ತದೆ. ಆದರೆ ಆಂತರಿಕವಾಗಿ ದೇಶದೊಳಗೆ ಇರುವ ತುಮುಲ ತಲ್ಲಣಗಳನ್ನು ಅದು ಕಡೆಗಣಿಸುತ್ತದೆ. ಬಹುಶಃ ದೇಶದೊಳಗಿನ ವಿದ್ಯಮಾನಗಳನ್ನು ಸರಿಯಾಗಿ ದಾಖಲಿಸಿದರೆ ಬಜೆಟ್ಟಿನಲ್ಲಿ ಅವುಗಳಿಗೆ ಉತ್ತರ ನೀಡುವ ದಾಯಿತ್ವ ಬರುತ್ತದೆ ಎಂಬ ಕಾರಣವಿರಬಹುದು. ಜಾಗತಿಕವಾಗಿ ಕಾಣುವ ಅತೀ-ರಾಷ್ಟ್ರವಾದ, ತಮ್ಮದೇ ಶ್ರೆಷ್ಟವೆಂಬ ಭಾವನೆ, ವಲಸಿಗ-ವಿರೋಧಿ ನಿಲುವು ಇತ್ಯಾದಿಗಳೇ ರಾಜಕೀಯ ವಿಚಾರಗಳನ್ನು ರೂಪಿಸುವ ಪರಿ ಇತ್ಯಾದಿಗಳು ಅಲ್ಲಿ ಕಾಣುತ್ತವೆ. ಇವುಗಳ ನಡುವೆ ಬಹುಮುಖ ಸಹಕಾರ ಮತ್ತು ನಿಯಮಬದ್ಧ ವ್ಯಾಪಾರ ಕಳೆದು ಹೋಗಿದೆ.
ಪ್ರಶ್ನೆ ಏನೆಂದರೆ ಜಗತ್ತು ಹೀಗೆಲ್ಲ ಇದ್ದರೆ ದೇಶದೊಳಗೆ ಎಲ್ಲವೂ ಸರಿಯಾಗಿದೆಯೆ? ಇಲ್ಲದಿದ್ದರೆ ಸರಿ ಮಾಡಲು ಕ್ರಮ ತೆಗೆದುಕೊಳ್ಳಬೇಡವೆ? ಇಂತಹ ನಿಜ ಪ್ರಶ್ನೆಗಳಿಗೆ ಅವಕಾಶವನ್ನೇ ನೀಡದ ಈ ಸಮೀಕ್ಷೆ ವಿಶ್ವಾಸ ಮೂಡಿಸುವುದಿಲ್ಲ. ದೇಶದ ಒಟ್ಟು ಉತ್ಪಾದನೆ ಶೇ7.4 ರಷ್ಟಿರುತ್ತದೆ ಎಂದು ಅದು ಹೆಳುತ್ತದೆ. ಜಾಗತಿಕ ಒತ್ತಡ ಹೆಚ್ಚಾದರೆ ಈ ಸಂಖ್ಯೆಗಳು ಬದಲಾಗುವುದು ಖಂಡಿತ. ಈ ಬೆಳವಣಿಗೆ ಸ್ಥಿರವಾದದ್ದಲ್ಲ. ಬಂಡವಾಳ ಶೇಖರಣೆ ಮತ್ತು ಆಂತರಿಕೆ ಬೇಡಿಕೆ ಎರಡೂ ಚೆನ್ನಾಗಿಯೇ ಇವೆ ಎಂಬುದು ಈ ಸಮೀಕ್ಷೆಯ ನಿಲುವು. ಉತ್ಪಾದನಾ ಕ್ರಿಯೆಯೂ ವೇಗ ಪಡೆಯುತ್ತಿದ್ದು ಸೇವೆಗಳು ವಿಸ್ತಾರವಾಗುತ್ತಿವೆ ಮತ್ತು ಅದರಿಂದ ಬೆಳವಣಿಗೆಗೆ ಇಂಬು ದೊರೆಯುತ್ತಿದೆ ಎಂದು ಅದು ಹೇಳುತ್ತದೆ. ವ್ಯಾಪಾರ, ಸಾಗಾಣಿಕೆ, ಹಣಕಾಸು ಮತ್ತು ವೃತ್ತಿ ಸೇವೆಗಳು ಉತ್ತಮ ಬೆಳವಣಿಗೆ ತೋರುತ್ತಿವೆ ಎಂದು ಅದು ಹೇಳುತ್ತದೆ. ವಿಶ್ವಾಸ
“ಎಲ್ಲವೂ ಚೆನ್ನಾಗಿದೆ”
ಅಂತಿಮವಾಗಿ, ಆರ್ಥಿಕ ಸಮೀಕ್ಷೆಯು ಎಲ್ಲವೂ ಚೆನ್ನಾಗಿದೆ ಎಂದು ಒತ್ತಿ ಹೇಳುತ್ತದೆ. ಅನೇಕ ಭೌಗೋಳಿಕ ರಾಜಕೀಯ ಸವಾಲುಗಳು ಮತ್ತು ಅವುಗಳ ಪರಿಣಾಮಗಳನ್ನು ವಿವರಿಸಿದ್ದರೂ ಸಹ, ದೇಶದೊಳಗಿನ ಆರ್ಥಿಕತೆಯ ಸ್ಥಿರತೆಯ ಬಗ್ಗೆ ಇದು ಅಸಾಧಾರಣ ಭರವಸೆ ನೀಡುತ್ತದೆ.
ವಿವರವಾಗಿ ನೋಡಿದರೆ, ಗಣಿಗಾರಿಕೆ, ಉತ್ಪಾದನೆ, ವಿದ್ಯುತ್, ಅನಿಲ ಮತ್ತು ಇತರೆ ಬಳಕೆ ಸೇವಾ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಸೇವಾ ಕ್ಷೇತ್ರವೇ ಬೆಳವೆಣಿಗೆಯ ಚಾಲಕ ಶಕ್ತಿಯಾಗಿ ಹೊರಹೊಮ್ಮುತ್ತದೆ. ಸೇವಾ ರಫ್ತು 387.5 ಶತಕೋಟಿ ಡಾಲರುಗಳ ಮಟ್ಟಕ್ಕೆ ಏರಿದೆ. ಸೇವಾ ಕ್ಷೇತ್ರದ 2025-26 ರ, ವರ್ಷದಿಂದ ವರ್ಷದ ಬೆಳವಣಿಗೆ ಶೇ13.6 ರಷ್ಟು ಇದೆ. ಒಟ್ಟಾರೆ ಸಮೀಕ್ಷೆ ಒಟ್ಟು ಮೌಲ್ಯ ವರ್ಧನೆಯ ಮಾತನಾಡುತ್ತದೆ. ಮೌಲ್ಯ ವರ್ಧನೆ ಬಿಗಿಯಾಗಿರುವುದು ಬೆಲೆಗಳ ಇಳಿಕೆಯಿಂದ ಎನ್ನುತ್ತದೆ. ಹೀಗಿರುವಾಗ ಒಟ್ಟು ಉತ್ಪಾದನೆ ಕಡಿಮೆ ಆಗಿದೆಯೆ ಅಥವಾ ಉತ್ಪನ್ನದ ಬೆಲೆ ಕಡಿಮೆ ಆಗಿದೆಯೆ ಅಥವಾ ನಾವು ಕಳಪೆ ವಸ್ತುಗಳನ್ನು ಉತ್ಪಾದಿಸುತ್ತಿದ್ದೆವೆಯೆ ಎಂಬ ಪ್ರಶ್ನೆಗಳು ಕಾಡತೊಡಗುತ್ತವೆ.
ಸ್ವದೇಶಿ ಅನಿವಾರ್ಯ ಮತ್ತು ಅವಶ್ಯ ಎನ್ನುವ ಈ ಸಮೀಕ್ಷೆ ಆಮದು ಪರ್ಯಾಯದ ಬಗ್ಗೆ ಮಾತೆತ್ತುವುದಿಲ್ಲ.
ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಜನರ ಪ್ರಮುಖ ಕಾಳಜಿಯೆಂದರೆ ಹಣದುಬ್ಬರ. ಜನರ ಜೀವನ ಅನುಭವದಲ್ಲಿ ಹಣದುಬ್ಬರ ಏರಿಕೆಯಾದರೂ ಅಧಿಕೃತ ಅಂಕಿಅಂಶಗಳಲ್ಲಿ ಅದು ಹೇಗೆ ಕಡಿಮೆಯಾಗುತ್ತದೆ? ಆರ್ಥಿಕ ಸಮೀಕ್ಷೆಯು “ಹಣದುಬ್ಬರದಲ್ಲಿ ಗಮನಾರ್ಹ ಇಳಿಕೆ, ಇದು ನಿಜವಾದ ಖರೀದಿ ಶಕ್ತಿಯನ್ನು ಸುಧಾರಿಸಿದೆ ಮತ್ತು ಬಳಕೆಯನ್ನು ಬೆಂಬಲಿಸಿದೆ” ಎಂದು ಹೇಳುತ್ತದೆ.
“ಸರ್, ಎಲ್ಲವೂ ದುಬಾರಿ,ರೂಪಾಯಿ ಬೆಲೆ ಕುಸೀತಿದೆ”
“ಆರಾಮ, ದೆಲ್ಲಾ ಅವರಿಂದಾಗಿ… 5ರೂ ಕೇಳಿದರೆ ಅವರಿಗೆ 4 ರೂ. ಮಾತ್ರ ಕೊಡಿ.”

ವ್ಯಂಗ್ಯಚಿತ್ರ ಕೃಪೆ: ಸಂದೀಪ ಅಧ್ವರ್ಯು. ಫೇಸ್‍ಬುಕ್
ಇದನ್ನೂ ಓದಿ : “ಆಳುವವರ ಆರ್ಥಿಕ ಧೋರಣೆಗಳ ಮತ್ತು ಆಳ್ವಿಕೆಯ ವೈಫಲ್ಯವನ್ನು ಕಾರ್ಮಿಕ ಸಂಘಗಳ ತಲೆಗೆ ಕಟ್ಟಬೇಡಿ” ವಿಶ್ವಾಸ
ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ದಿ: ಸದ್ದು ಹೆಚ್ಚು ಕೆಲಸ ಕಡಿಮೆ
ಸಮೀಕ್ಷೆಯು ಉದ್ಯೋಗ ಕ್ಷೇತ್ರದಲ್ಲಿ ಸರ್ಕಾರದ ಬೆನ್ನು ತಟ್ಟುತ್ತದೆ. ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು, ಇ-ಶ್ರಮ್ ಪೋರ್ಟಲ್ ಮತ್ತು ನಾಲ್ಕು ಕಾರ್ಮಿಕ ಸಂಹಿತೆಗಳಂತಹ ಸರ್ಕಾರದ ವಿವಿಧ ಯೋಜನೆಗಳನ್ನು ಯಾವುದೇ ಆಳವಾದ ವಿಶ್ಲೇಷಣೆ ಇಲ್ಲದೆ ಸಮೀಕ್ಷೆಯು ಶ್ಲಾಘಿಸುತ್ತದೆ. “ಇತ್ತೀಚೆಗೆ ಜಾರಿಗೆ ತಂದ ಕಾರ್ಮಿಕ ಸಂಹಿತೆಗಳು ನಮ್ಯತೆ ಮತ್ತು ಕಾರ್ಮಿಕರ ಹಕ್ಕುಗಳ ನಡುವೆ ಸಮತೋಲನವನ್ನು ಸಾಧಿಸುವ ಗುರಿಯನ್ನು ಹೊಂದಿವೆ. ಕಾರ್ಮಿಕರ ಕಲ್ಯಾಣವನ್ನು ಉತ್ತೇಜಿಸುವಾಗ ಉದ್ಯಮ ಸ್ಪರ್ಧಾತ್ಮಕತೆಯನ್ನು ಖಚಿತಪಡಿಸಿಕೊಳ್ಳುವತ್ತ ಗಮನಹರಿಸುತ್ತವೆ” ಎಂದು ಅದು ಹೇಳುತ್ತದೆ. ನಾಲ್ಕು ಕಾರ್ಮಿಕ ಸಂಹಿತೆಗಳು ಉದ್ಯೋಗದಾತರಿಗೆ ಹೆಚ್ಚಿನ ನಮ್ಯತೆಯನ್ನು ನೀಡುವಾಗ ಕಾರ್ಮಿಕರ ಭದ್ರತೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ತೀವ್ರ ಟೀಕೆಗಳು ಬರುತ್ತಿರುವ ಸಮಯದಲ್ಲಿ, ಸಮೀಕ್ಷೆಯು ಅವುಗಳನ್ನು ಕೈಗಾರಿಕೆ ಮತ್ತು ಸೇವೆಗಳಲ್ಲಿ ಕಾರ್ಮಿಕ ಬಲದ ಭಾಗವಹಿಸುವಿಕೆ ಮತ್ತು ಉದ್ಯೋಗ ಬೆಳವಣಿಗೆಯನ್ನು ಹೆಚ್ಚಿಸಲು ಸಾಧ್ಯವಾಗುವ ಉತ್ತಮ ಸುಧಾರಣೆಯೆಂದು ಅಲಂಕರಿಸುತ್ತದೆ. ವಿಶ್ವಾಸ
ಸರ್ಕಾರ ಸಿದ್ಧಪಡಿಸಿದ ಡಿಜಿಟಲ್ ವ್ಯವಸ್ಥೆಗಳಿಗೆ ಕಾರ್ಮಿಕರನ್ನು ತರುವ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ವಾಸ್ತವವಾಗಿ, ಆರಂಭದಲ್ಲಿ ತರಬೇತಿ ಪಡೆಯುವವರು ಮತ್ತು ವ್ಯವಸ್ಥೆಗೆ ಹೊಸದಾಗಿ ಸೇರಿಸಲಾದ ಜನರ ಉದ್ಯೋಗವನ್ನು ‘ಅಳತೆ’ ಮತ್ತು ‘ಟ್ರ್ಯಾಕ್’ ಮಾಡಲು UAN ID (EPFO ವ್ಯವಸ್ಥೆಯಲ್ಲಿ ಬಳಸಲಾಗಿದೆ) ಬಳಸುವ ಯೋಜನೆಗಳಿವೆ ಎಂದು ತೋರುತ್ತದೆ. ಆದರೆ ಇವು ಇತರರ ಉದ್ಯೋಗದ ಮೇಲೂ ಗಂಭೀರ ಪರಿಣಾಮ ಬೀರಬಹುದು ಎಂಬ ವಾಸ್ತವದ ಅರಿವು ಅಗತ್ಯ.
ಅಂತಿಮವಾಗಿ, ಹೇಳುವುದಾದರೆ, ಆರ್ಥಿಕ ಸಮೀಕ್ಷೆಯು ಎಲ್ಲವೂ ಚೆನ್ನಾಗಿದೆ ಎಂದು ಒತ್ತಿ ಹೇಳುತ್ತದೆ. ಅನೇಕ ಭೌಗೋಳಿಕ ರಾಜಕೀಯ ಸವಾಲುಗಳು ಮತ್ತು ಅವುಗಳ ಪರಿಣಾಮಗಳನ್ನು ವಿವರಿಸಿದ್ದರೂ ಸಹ, ದೇಶದೊಳಗಿನ ಅರ್ಥವ್ಯವಸ್ಥೆಯ ಸ್ಥಿರತೆಯ ಬಗ್ಗೆ ಇದು ಭಾರೀ ಭರವಸೆ ನೀಡುತ್ತದೆ. ವಿಶ್ವಾಸ
ಇದನ್ನೂ ನೋಡಿ : Union Budget 2026: ಕೇಂದ್ರ ಬಜೆಟ್ ನೇರ ಪ್ರಸಾರ ವಿಶ್ವಾಸ
