ದೇವನಹಳ್ಳಿ | ಪೌರ ಕಾರ್ಮಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ – ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್

ದೇವನಹಳ್ಳಿ : ಪೌರ ಕಾರ್ಮಿಕರನ್ನು ಪ್ರತಿವರ್ಷ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ವಾಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್ ದೇಶ ಕಾಯುವ ಸೈನಿಕರಂತೆ ಪೌರ ಕಾರ್ಮಿಕರು ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವ ವೈದ್ಯರಂತೆ. ನಿತ್ಯ ಪಟ್ಟಣದ ಸ್ವಚ್ಛತೆಗಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ  ತಿಳಿಸಿದರು. ದೇವನಹಳ್ಳಿ

ಪುರಸಭೆ ಅಧ್ಯಕ್ಷೆ ಭವ್ಯಾ ಮಹೇಶ್ ಮಾತನಾಡಿ, ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಒದಗಿಸಿ ಉನ್ನತ ಹುದ್ದೆಗಳಿಗೆ ಸೇರಲು ಪ್ರೋತ್ಸಾಹಿಸಬೇಕು. ಪೌರ ಕಾರ್ಮಿಕರನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಸಿಕ ಗೌರವಧನ ಪಾವತಿಸದ 29 ಆಯುಕ್ತರ ವಿರುದ್ಧ ಪ್ರಕರಣ

ಸಾರ್ವಜನಿಕರು ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಸಾರ್ವಜನಿಕರು ಮನೆಯಲ್ಲಿಯೇ ಒಣ ಕಸ, ಹಸಿ ಕಸವನ್ನು ವಿಂಗಡಿಸಿ ಮನೆ ಮುಂದೆ ಬರುವ ಪುರಸಭೆ ವಾಹನಕ್ಕೆ ನೀಡಬೇಕು. ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.

ಇಲ್ಲಿನ ಪುರಸಭಾ ಆವರಣದಲ್ಲಿ ಮಂಗಳವಾರ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ನೀರು ಸರಬರಾಜು ನಿವೃತ್ತ ಸಿಬ್ಬಂದಿ ಮುತ್ಯಾಲಪ್ಪ, ಶಿವಕುಮಾರ್, ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಪೌರಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು. ಬೆಂಗಳೂರು ರತ್ನ ಪ್ರಶಸ್ತಿ ಪುರಸ್ಕೃತ ಅಂಬರೀಶ್ ಹಾಗೂ ಸಂದ್ಯಾ ದಂಪತಿಯನ್ನು ಸನ್ಮಾನಿಸಲಾಯಿತು.

ಪುರಸಭಾ ಉಪಾಧ್ಯಕ್ಷೆ ತಾಜ್ ವುನ್ನೀಸಾ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಸದಸ್ಯ ಬೈರೇಗೌಡ, ನಂದಕುಮಾರ್, ಕವಿತಾ, ಶಿಲ್ಪ ಅಜಿತ್, ಆಯಿಷಾ ಸೈಫುಲ್ಲಾ, ಪೌರ ಕಾರ್ಮಿಕರ ನೌಕರ ಸಂಘದ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷ ಲಕ್ಷ್ಮಣ್, ಪುರಸಭಾ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಹಾಜರಿದ್ದರು.

ಬಹುತೇಕ ಪುರಸಭಾ ಸದಸ್ಯರು ಗೈರು ಪುರಸಭೆಯಿಂದ ನಡೆಯುವ ಬಹುತೇಕ ಜಯಂತಿ ಕಾರ್ಯಕ್ರಮಗಳಿಗೆ ಪುರಸಭಾ ಚುನಾಯಿತ ಸದಸ್ಯರು ಗೈರಾಗುತ್ತಿದ್ದು ಮಂಗಳವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿಯೂ ಬಹುತೇಕ ಚುನಾಯಿತ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸದ ಕಾರಣ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು.

ಇದನ್ನೂ ನೋಡಿ : ದೂರುದಾರ ವ್ಯಕ್ತಿ ಪ್ರಾಮಾಣಿಕ, ಆತ ಹೇಳ್ತೀರೋದು ಎಲ್ಲವೂ ಸತ್ಯ – ಬಾಲನ್​Janashakthi Media

Donate Janashakthi Media

Leave a Reply

Your email address will not be published. Required fields are marked *