ಪರವಾನಗಿ ಇಲ್ಲದೆ ನಿರ್ಮಾಣ ಸಾಮಗ್ರಿ ಸಾಗಿಸುತ್ತಿದ್ದ 11 ಟಿಪ್ಪರ್ ಲಾರಿ ವಶ

ಗುಂಡ್ಲುಪೇಟೆ: ನೆರೆಯ ಕೇರಳ ರಾಜ್ಯಕ್ಕೆ ಪರವಾನಗಿ ಇಲ್ಲದೆ ಹಾಗೂ ಅಧಿಕ ಭಾರ ಹೊತ್ತು ಖನಿಜ ಮತ್ತು ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ 11 ಟಿಪ್ಪರ್ ಲಾರಿಗಳನ್ನೂ ಆಗಸ್ಟ್‌ 2 ಶನಿವಾರ ನಸುಕಿನ ವೇಳೆ ತೆರಕಣಾಂಬಿ ಠಾಣೆ ಪಿಎಸ್‍ಐ ಕೆ.ಎಂ.ಮಹೇಶ್ ನೇತೃತ್ವದ ತಂಡ ವಶಕ್ಕೆ ಪಡೆದಿದ್ದಾರೆ. ನಿರ್ಮಾಣ

ಕೇರಳ ರಾಜ್ಯಕ್ಕೆ ಎಂ.ಸ್ಯಾಂಡ್, ಕಪ್ಪು ಶಿಲೆ, ಬಿಳಿಕಲ್ಲು, ಬೋಡ್ರಸ್ ಸೇರಿದಂತೆ ವಿವಿಧ ಖನಿಜ ಸಾಮಗ್ರಿಗಳನ್ನು ಪರವಾನಗಿ ಇಲ್ಲದೆ , ಟಿಪ್ಪರ್ ಮೂಲಕ ಅಧಿಕ ಭಾರ ಸಾಗಣೆ ಮಾಡುತ್ತಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆದಿದೆ.

ಇದನ್ನೂ ಓದಿ: ಬಿಬಿಎಂಪಿ| ಸ್ಮೋಕಿಂಗ್ ಝೋನ್ ನಿರ್ಮಿಸದ ಹೊಟೇಲ್‌ – ಬಾರ್‌ ಪರವಾನಗಿ ರದ್ದು

ಜಿಲ್ಲಾ ಎಸ್‌ಪಿ ಬಿ.ಟಿ.ಕವಿತಾ ಆದೇಶದ ಮೇರೆಗೆ ತೆರಕಣಾಂಬಿ ಪೊಲೀಸರು 11 ಟಿಪ್ಪರ್‌ಗಳನ್ನು ಕೇರಳ ರಸ್ತೆಯ ಕನ್ನೇಗಾಲ ಟೋಲ್ ಬಳಿ ತಡೆದು ತಪಾಸಣೆಗೆ ಒಳಪಡಿಸಿದಾಗ ವಾಹನ ಪರವಾನಗಿ ಇಲ್ಲದ 5 ಹಾಗೂ 6 ಟಿಪ್ಪರ್‌ಗಳಲ್ಲಿ ನಿಗದಿಗಿಂತ ಅಧಿಕ ಭಾರದ ಸಾಮಗ್ರಿ ಹೇರಿರುವುದು ಕಂಡು ಬಂದಿದ್ದು, ಅವುಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ, ಟಿಪ್ಪರ್‌ಗಳನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆ ವಶದಲ್ಲಿ ಇರಿಸಲಾಗಿದೆ ಎಂದು ತೆರಕಣಾಂಬಿ ಠಾಣೆ ಪಿಎಸ್‍ಐ ಕೆ.ಎಂ.ಮಹೇಶ್ ಮಾಹಿತಿ ನೀಡಿದರು.

ಇದನ್ನೂ ನೋಡಿ: ವೇತನ ಹೆಚ್ಚಳದಲ್ಲಿ ತಾರತಮ್ಯ | 4 ಸಾರಿಗೆ ನಿಗಮಗಳ ಸಿಬ್ಬಂದಿಯಿಂದ ಉಪವಾಸ ಸತ್ಯಾಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *