ರಿಯಲ್ ಎಸ್ಟೇಟ್ ದಲ್ಲಾಳಿಗಳು ರೈತರಲ್ಲ

ಭೂ ಸ್ವಾಧೀನದ ರದ್ದುಪಡಿಸುವ ರೈತರ ಆಗ್ರಹ, ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಸಂಕಟ ತರುತ್ತಿರುವುದು ಏಕೆ? ದಲ್ಲಾಳಿ
ಈ ಪೋಟೋಗಳಲ್ಲಿ ಕಾಣುತ್ತಿರುವವರು ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಕಾಂಗ್ರೆಸ್ ಪಕ್ಷದ ಸಕ್ರಿಯ ಮುಖಂಡರಗಳು ಹಾಗೂ ಪೂರ್ಣ ಪ್ರಮಾಣದಲ್ಲಿ ರಿಯಲ್ ಎಸ್ಟೇಟ್ ವೃತ್ತಿಯಲ್ಲಿ ತೊಡಗಿಸಿಕೊಂಡವರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಲೇಪುರ ಗ್ರಾಮದ ಲಕ್ಷ್ಮಿ ನಾರಾಯಣ ರವರ ನೇತೃತ್ವದಲ್ಲಿ ನೆನ್ನೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೆಐಎಡಿಬಿ ಭೂ ಸ್ವಾಧೀನಕ್ಕೆ ಭೂಮಿ ನೀಡಲು ನಮ್ಮ ಒಪ್ಪಿಗೆ ಇದೆ ಎಂದು ತಿಳಿಸಿದ್ದಾರೆ.

-ಟಿ. ಯಶವಂತ

ಇವರ್ಯಾರೂ ಭೂ ಸ್ವಾಧೀನ ವಿರೋಧಿ ರೈತರ ಹೋರಾಟಗಳಲ್ಲಿ ಮೊದಲಿನಿಂದಲೂ ಭಾಗವಹಿಸಿದವರು ಅಲ್ಲ; ಬದಲಾಗಿ ಭೂ ಸ್ವಾಧೀನ ನಡೆಯುವಂತಹ ಸಂದರ್ಭಗಳಲ್ಲಿ ಹೀಗೆ ಬಡ ರೈತರ ಅದರಲ್ಲೂ ಪರಿಶಿಷ್ಟ ಜಾತಿ ಸಮುದಾಯದ ಜಮೀನುಗಳ ಪರಿಹಾರ ಹಣವನ್ನು ಕಬಳಿಸಬೇಕು ಎಂದು ಸಾಕಷ್ಟು ಲೆಕ್ಕ ಹಾಕಿ, ಅದಕ್ಕಾಗಿ ದರಖಾಸ್ತ್ ಮೂಲಕ ಜಮೀನು ಪಡೆದಿದ್ದ ಪರಿಶಿಷ್ಟ ಜಾತಿ ರೈತರು ಸೇರಿದಂತೆ ಬಡ ರೈತರಿಗೆ 5 ಲಕ್ಷ,10 ಲಕ್ಷ ರೂಗಳನ್ನು ಅಡ್ವಾನ್ಸ್ (ಮುಂಗಡ) ಹೆಸರಿನಲ್ಲಿ ಸಾಲ ನೀಡಿ ಬಡ ರೈತರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುವ ಕರಾಳ ದಂಧೆ ನಡೆಸುತ್ತಿರುವವರು. ದಲ್ಲಾಳಿ

ಗ್ರಾಮಗಳು ಮತ್ತು ರೈತ ಕುಟುಂಬಗಳ ಅದರಲ್ಲೂ ತಳಸಮುದಾಯದ ರೈತ ಕುಟುಂಬಗಳ ಪರಿಸ್ಥಿತಿ ಗೊತ್ತಿದ್ದವರಿಗೆ ಇವೆಲ್ಲವೂ ಚನ್ನಾಗಿ ತಿಳಿಯುತ್ತವೆ. ದಲ್ಲಾಳಿ

ಇದನ್ನೂ ಓದಿ: 4 ಲಕ್ಷ ಬಡ, ಮಧ್ಯಮ ವರ್ಗದವರ ಮನೆ, ಕಟ್ಟಡಗಳಿಗೆ ವಿದ್ಯುತ್ ನೀಡಲು ಶಿಫಾರಸು

ಸುಮಾರು ಐವತ್ತು ಅರವತ್ತು ವರ್ಷಗಳ ಹಿಂದೆಯೇ ದರಖಾಸ್ತು ಮೂಲಕ ಜಮೀನು ಪಡೆದಿರುವ ಬಹುತೇಕ ಪರಿಶಿಷ್ಟ ಜಾತಿ ಸಮುದಾಯದ ಈ ಬಡರೈತರ ಭೂಮಿಗಳು ಫೋಡಿ (ದುರಸ್ತು) ಆಗದೆ ಉಳಿದುಕೊಂಡಿವೆ. ದಲ್ಲಾಳಿ

ಕೆಐಎಡಿಬಿ ಒಂದು ರಿಯಲ್ ಎಸ್ಟೇಟ್ ಕರಾಳ ಸಂಸ್ಥೆ. ರಿಯಲ್ ಎಸ್ಟೇಟ್ ದಲ್ಲಾಳಿಗಳು, ಭ್ರಷ್ಟ ಕಂದಾಯ ಇಲಾಖೆಯ ಅಧಿಕಾರಿಗಳು, ಅಧಿಕಾರಸ್ಥ ರಾಜಕಾರಣಿಗಳು ಹಾಗೂ ಕೆಐಎಡಿಬಿ ಅಧಿಕಾರಿಗಳ ನಡುವೆ ಸೇತುವೆಯಂತೆ ವರ್ತಿಸುತ್ತಿರುತ್ತಾರೆ. ಎಲ್ಲೆಲ್ಲಿ ಈ ದುರಸ್ತು ಆಗದೆ ಇರುವ ಭೂಮಿ ಪ್ರಮಾಣ ಹೆಚ್ಚು ಇದೆಯೋ ಎಲ್ಲೆಲ್ಲಿ ಬಗರ್ ಹುಕುಂ ಸಾಗುವಳಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಇರುವರೋ ಅಂತಹ ಜಾಗಗಳನ್ನು ಗುರುತಿಸಿ ಭೂಸ್ವಾಧೀನ ಪ್ರಕಟಣೆ ಹೊರಬೀಳುವಂತೆ ನೋಡಿಕೊಳ್ಳುವುದು, ಭೂಸ್ವಾಧಿನ ಪ್ರಕಟಣೆಯಿಂದ, ಕಂದಾಯ ದಾಖಲೆಗಳು ಸಮರ್ಪಕವಾಗಿ ಇಲ್ಲದ ಬಡ ರೈತರ ಆತಂಕವನ್ನು ಬಳಸಿ ಹೇರಳವಾದ ಹಣ ಮಾಡಿಕೊಳ್ಳುವುದು ಇವರುಗಳ ವೃತ್ತಿಯಾಗಿದೆ. ದಲ್ಲಾಳಿ

ಇವರು ಭೂಸ್ವಾಧೀನ ಪ್ರದೇಶದಲ್ಲಿ ಎರಡು ರೀತಿಯ ಅಪಪ್ರಚಾರಗಳನ್ನು ಮಾಡುತ್ತಾರೆ ಮತ್ತು ಮಾಡಿಸುತ್ತಾರೆ. ಸರಕಾರದ ಹತ್ತಿರ ಪೋಲಿಸ್- ಮಿಲ್ಟ್ರಿ ಇದೆ , ಕಾಗದದ ಮೇಲೆ ಸಹಿ ಮಾಡಿದ ಮೇಲೆ ಮುಗಿಯಿತು ಯಾರೂ ಏನು ಮಾಡಲು ಸಾಧ್ಯವಿಲ್ಲ .ಆದ್ದರಿಂದ ಹೋರಾಟ ಮಾಡುವುದು ಎಲ್ಲವೂ ವ್ಯರ್ಥ ಹಾಗೂ ನಿರರ್ಥಕ ಎಂಬುದು ಒಂದು ಅಪಪ್ರಚಾರವಾದರೆ, ಪರಿಹಾರ ನೀಡುವ ಭೂಸ್ವಾಧೀನ ಕಚೇರಿ ತಾತ್ಕಾಲಿಕವಾಗಿ ಇರುತ್ತದೆ ಅದು ಮುಚ್ಚಿ ಹೋದ ಮೇಲೆ ಕೋರ್ಟ್ ಗಳಲ್ಲಿ ಹತ್ತಾರು ವರ್ಷ ಅಲೆಯಬೇಕಾಗುತ್ತದೆ ಎಂಬುದು ಮತ್ತೊಂದು ಅಪಪ್ರಚಾರ. ದಲ್ಲಾಳಿ

ಈ ರೀತಿ ಅಪಪ್ರಚಾರಗಳು ಎಲ್ಲಿ ದಾಖಲಾತಿಗಳನ್ನು ಹೊಂದಿಸಿಕೊಳ್ಳದೇ ಇತ್ತ ಪರಿಹಾರವೂ ಸಿಗದೇ ,ಭೂಮಿಯು ಉಳಿಯದೇ ಇರುವ ಪರಿಸ್ಥಿತಿ ಬರುತ್ತದೆ ಎಂಬ ಆತಂಕ ಉಂಟು ಮಾಡುತ್ತವೆ.

ಕಂದಾಯ ದಾಖಲೆಗಳು ಹಾಗೂ ಪರಿಹಾರ ಹಣವನ್ನು ಯಾವುದೇ ಅಡ್ಡಿಯಿಲ್ಲದಂತೆ ಪಡೆಯಲು ಕಂದಾಯ ಇಲಾಖೆ ಮತ್ತು ಕೆಐಎಡಿಬಿ ಭೂಸ್ವಾಧೀನ ಅಧಿಕಾರಿ- ಸಿಬ್ಬಂದಿ ಗಳಿಗೆ ಲಂಚ ಹಾಗೂ ಕಮಿಷನ್ ನೀಡಲೇಬೇಕು. ಇದಕ್ಕಾಗಿ ಬೇಕಾಗುವ ವೆಚ್ಚಕ್ಕಾಗಿ ,ನಿಮ್ಮ ಭೂಮಿಯನ್ನು ಒತ್ತೆಯಿಟ್ಟು ನಮ್ಮ ಹತ್ತಿರ ಹಣ ಪಡೆಯಿರಿ . ಪರಿಹಾರ ಬಂದ ನಂತರ ಎರಡು ಪಟ್ಟು ಹಣ ವಾಪಾಸು ನೀಡಿ. ಅಥವಾ ನಾವೇ ಶುದ್ಧ ಕ್ರಯ ಮಾಡಿಸಿಕೊಳ್ಳುತ್ತೇವೆ. ಕೆಐಎಡಿಬಿ ನಿಗದಿಪಡಿಸಬಹುದಾದ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಕೊಳ್ಳುತ್ತೇವೆ ಎಂದು ವಿವಿಧ ರೀತಿಯಲ್ಲಿ ಒತ್ತಡ ಹಾಕಿ ಅಸಹಾಯಕರು, ಕೋರ್ಟು- ಕಚೇರಿ ಒಡನಾಟ ತಿಳಿಯದಿರುವ ಕುಟುಂಬಗಳನ್ನು ಹಾಗೂ ಕಂದಾಯ ದಾಖಲೆಗಳು ಸಮರ್ಪಕವಾಗಿ ಇಲ್ಲದ ತಂಟೆ- ತಕರಾರು ಇರುವ ಬಡ ರೈತರನ್ನು ಸುಲಭವಾಗಿ ತಮ್ಮ ಖೆಡ್ಡಾಕ್ಕೆ ಕೆಡವಿಕೊಳ್ಳುತ್ತಾರೆ.

ಕೆಐಎಡಿಬಿ ಪರ ಪತ್ರಿಕಾ ಗೋಷ್ಠಿ ಮಾಡಿರುವವರು ಈ ರೀತಿಯ ರಿಯಲ್ ಎಸ್ಟೇಟ್ ಕಾರ್ಯಾಚರಣೆ ಯ ಪರಿಣಿತರು.

ಒಟ್ಟು ಭೂಸ್ವಾಧೀನ ಕ್ಕೆ ಒಳಪಟ್ಟವರಲ್ಲಿ ಇವರ ಕಪಿಮುಷ್ಠಿಗೆ ಸಿಲುಕಿರುವ ಬಡ ರೈತರ ಪ್ರಮಾಣ ಕೇವಲ ಶೇ.15-20 ರಷ್ಟು ಪ್ರಮಾಣ ಮಾತ್ರ. ಭೂಸ್ವಾಧೀನ ವಿರೋಧಿ ಹೋರಾಟವು, ಭೂಸ್ವಾಧೀನ ಪ್ರಕಟಣೆಯ ಆರಂಭದಲ್ಲಿಯೇ ಶುರುವಾದ್ದರಿಂದ ಇವರ ಬಲೆಗೆ ಬೀಳುವುದರಿಂದ ಬಹುತೇಕ ರೈತರು ಬಚಾವಾಗಿದ್ದಾರೆ.

ರೈತರ ಹೋರಾಟ ಮನ್ನಣೆ ಪಡೆದು ಸರಕಾರವು ಭೂ ಸ್ವಾಧೀನ ರದ್ಧುಪಡಿಸಲೇಬೇಕಾದ ಒತ್ತಡದ ಸಂದರ್ಭ ಉಂಟಾಗಿರುವ ಈಗ ಇವರು ಮತ್ತೊಂದು ಹೊಸ ಅಪಪ್ರಚಾರದ ಷಡ್ಯಂತ್ರ ಹೆಣೆದಿದ್ದಾರೆ. ಅದೇ ಹಸಿರು ವಲಯದ ಗುಮ್ಮ.

ಪಡೆದುಕೊಂಡ ಹಣವನ್ನು ಬಡ್ಡಿಸಹಿತ ವಾಪಾಸು ಕೊಡಿ ,ಇಲ್ಲ ಭೂಸ್ವಾಧೀನಕ್ಕೆ ಒಳಪಡಿಸಿ ಪರಿಹಾರ ಸಿಗುವಂತೆ ನಮ್ಮ ಜೊತೆ ಪ್ರತಿಭಟನೆಗೆ ಬನ್ನಿ ಎಂದು ಕಾನೂನುಬಾಹಿರ ಒತ್ತಡ ಹಾಕುತ್ತಿದ್ದಾರೆ.

ಭೂ ಸ್ವಾಧೀನ ಪ್ರಕಟಣೆ ರದ್ದುಗೊಂಡ ನಂತರ ನಮ್ಮ ಜಮೀನಿನ ಒಂದು ಗುಂಟೆ ಅಥವಾ ಎರಡು ಗುಂಟೆ ಜಮೀನು ಮಾರಿ ನಿಮ್ಮ ಹಣ ವಾಪಾಸ್ಸು ಮಾಡುತ್ತೇವೆ ಎಂದು ಹೇಳಲು ಈ ಬಡ ರೈತರಿಗೆ ಅವಕಾಶ ಇಲ್ಲದಂತೆ , ಇನ್ನು ಮುಂದೆ 20-25 ವರ್ಷಗಳ ಕಾಲ ಯಾರಿಗೂ ಮಾರಾಟ ಆಗದಂತೆ ಸರಕಾರ ಹಸಿರು ವಲಯ ಎಂದು ಘೋಷಿಸುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.

ವಾಸ್ತವವಾಗಿ ಈ ಭೂಮಿಗಳು ಹಸಿರು ವಲಯದಲ್ಲಿ ಇವೆ. ಇದೆಲ್ಲವೂ ರಿಯಲ್ ಎಸ್ಟೇಟ್ ಜೊತೆ ಕರಳು ಬಳ್ಳಿ ಸಂಬಂಧ ಹೊಂದಿರುವ ಈ ಭಾಗದ ರಾಜಕಾರಣಿಗಳ, ಕೈಗಾರಿಕಾ ಮಂತ್ರಿ, ಉಸ್ತುವಾರಿ ಮಂತ್ರಿಗಳ ಕೃಪಕಟಾಕ್ಷದಲ್ಲಿ ನಡೆಯುತ್ತಿದೆ.

ಇಂತಹ ಕರಾಳ ಕೃತ್ಯ ನಡೆಸುವುದಕ್ಕಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹತ್ತು ದಿನಗಳ ಕಾಲಾವಕಾಶ ಪಡೆದರೇ?

ಇದೇನಾ ಕಾನುನು ತೊಡಕು?

ಉತ್ತರಿಸಲಿ…

ಇದನ್ನೂ ನೋಡಿ: ಎದೆಗೆ ನಾಟುವ ಸಿನಿಮಾ – ಹೆಬ್ಬುಲಿ ಕಟ್ – ಚಂದ್ರಪ್ರಭ ಕಠಾರಿ Janashakthi Media

Donate Janashakthi Media

Leave a Reply

Your email address will not be published. Required fields are marked *