ಒಕ್ಕೂಟ ಅಥವಾ ಕೇಂದ್ರ ಸರಕಾರವು ದೆಹಲಿಯಿಂದ ಕೋಲ್ಕತ್ತೆಯವರೆಗೆ, ಕೋಲ್ಕತ್ತೆಯಿಂದ ಚನ್ನೈ ವರೆಗೆ, ಚನ್ನೈನಿಂದ ಬೆಂಗಳೂರು, ಬೆಂಗಳೂರಿನಿಂದ ಮುಂಬೈವರೆಗೆ, ಮುಂಬೈನಿಂದ ಅಹಮದಾಬಾದ್ ಹಾಗು ನವದೆಹಲಿಗೆ ಸಂಪರ್ಕಿಸುವ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿಯೆ, ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೇ ಯೋಜನೆಗೆ ಕ್ರಮವಹಿಸುತ್ತಿದೆ. ಈ ಯೋಜನೆಯ ಇಕ್ಕೆಲಗಳಲ್ಲಿ ಒಂದು ಕಿ.ಮೀ ಭೂ ಸ್ವಾಧೀನಕ್ಕೆ ಕ್ರಮವಹಿಸಲಿದೆ. ಪಟ್ಟಣಗಳ ನಿರ್ಮಾಣಕ್ಕು ಕ್ರಮವಹಿಸಲಿದೆ. ಇದರಿಂದಾಗಿ, ದೇಶದ ಕೋಟ್ಯಾಂತರ ಎಕರೆ ಕೃಷಿ ಭೂಮಿ, ಹಾಗು ರಾಜ್ಯದ ದಶ ಲಕ್ಷಾಂತರ ಕೃಷಿ ಭೂಮಿ ಸ್ವಾಧೀನಕ್ಕೊಳಪಡಲಿದೆ. ಬಲವಂತದ
ಯು. ಬಸವರಾಜ
ಈ ಕೈಗಾರಿಕಾ ಕಾರಿಡಾರ್ ಚನ್ನೈನಿಂದ ಬೆಂಗಳೂರಿನ ಮೂಲಕ ಮುಂಬೈ ಕಡೆ ಸಾಗಲಿದೆ. ಇದರ ಭಾಗವಾಗಿಯೇ ಬೃಹತ್ ಬೆಂಗಳೂರನ್ನು, ಗ್ರೇಟರ್ ಬೆಂಗಳೂರಾಗಿಸಲಾಗುತ್ತದೆ. ಬೆಂಗಳೂರು ಕೇಂದ್ರದಿಂದ ಅದರ ಸುತ್ತಲೂ ಸುಮಾರು 200 ಕಿ.ಮೀ ವರೆಗೆ ಭೂ ಸ್ವಾಧೀನ ಮಾಡುವ ಇಂಗಿತ ಬಿದ್ದಿದೆ. ಬಲವಂತ
ಹೀಗಾಗಿ, ಈ ಎಲ್ಲ ಯೋಜನೆಗಳು ಜಾರಿ ಮಾಡುವಾಗ, ಬೆಳೆಯುತ್ತಿರುವ ವ್ಯಾಪಕ ಬಡತನದ ಪರಿಣಾಮವಾಗಿ, ಮಾರುಕಟ್ಟೆಯ ಗಂಭೀರ ಕೊರತೆಯ ಕಾರಣದಿಂದ ಜಾಗತಿಕ ಹಾಗು ದೇಶದ ಆರ್ಥಿಕ ಬಿಕ್ಕಟ್ಟಿನ ಕಾಲದಲ್ಲಿ ಕೈಗಾರಿಕೆಗಳು ಬರಲಿವೆಯೆ ಎಂಬುದು ನೈಜ ಪ್ರಶ್ನೆಯಾಗಿದ್ದರೂ ಯೋಜನೆಯ ಹೆಸರಿನಲ್ಲಿ ಭೂಮಿಯನ್ನು ಸ್ವಾಧೀನ ಮಾಡಲಾಗುತ್ತದೆ. ಕೈಗಾರಿಕೆಗಳನ್ನು ಕೂಡಾ ಅಥವಾ ಬಂಡವಾಳ ಹೂಡಿಕೆದಾರರಿಗೆ ಹೆಚ್ಚು ಕಡಿಮೆ ಶೇ 100 ರಷ್ಠು ರಿಯಾಯಿತಿ ನೀಡುತ್ತಾ ಬಹುದೊಡ್ಡ ರೀತಿಯ ರತ್ನ ಗಂಬಳಿಯ ಹಾಸನ್ನು ಹಾಸಿ ಸ್ವಾಗತಿಸಲಾಗುತ್ತದೆ. ಕೇಂದ್ರ ಹಾಗು ಕರ್ನಾಟಕ ರಾಜ್ಯ ಸರಕಾರಗಳು ಬಂಡವಾಳ ಹೂಡಿಕೆದಾರರು ಕೇಳಿದ ಭೂಮಿಯನ್ನು ಕೊಡಲಾಗುತ್ತದೆ ಎಂದು ಘೋಷಿಸಿವೆ. ಬಲವಂತ
ಇದನ್ನೂ ಓದಿ: ಕರ್ನಾಟಕದಲ್ಲಿ ಬಲವಂತದ ಭೂ ಸ್ವಾಧೀನ – ಭಾಗ 1
ಬಂಡವಾಳ ಹೂಡಿಕೆದಾರರಿಗೆ, ರಾಜ್ಯ ಸರಕಾರ, ನೂರಾರು ಎಕರೆ ಸರಕಾರಿ ಜಮೀನು ಲಭ್ಯವಿರುವ ( ಬೆಂಗಳೂರು- ಮೈಸೂರು ದಶಪಥ ನಿರ್ಮಾಣದ ನೈಸ್ ರಸ್ತೆಗೆಂದು ಸುಮಾರು 7000 ಎಕರೆ ಸರಕಾರಿ ಜಮೀನನ್ನು ಉಚಿತವಾಗಿ ನೀಡಲಾಗಿದೆ) ಕಡೆ, ರೈತರಿಂದ ಬಲವಂತವಾಗಿ ಭೂ ಸ್ವಾಧೀನ ಮಾಡಿ ಮೋಸದ ಭೂ ಬೆಲೆ ನಿಗದಿಸಿ ( ಅಂದರೆ, ಉದಾಹರಣೆಗೆ, ಬಳ್ಳಾರಿ ಜಿಲ್ಲೆಯ ಮಿತ್ತೆಲ್ ಕಂಪನಿಗಾಗಿ ಖರೀದಿಸಿದ ಮಾರುಕಟ್ಟೆ ಬೆಲೆ 50 ಲಕ್ಷ ರೂಗಳೆಂದು ಆನಂತರ ಜಿಲ್ಲಾ ನ್ಯಾಯಾಲಯ ನಿಗದಿಸಿದವುಗಳಿಗೆ ಕೆಐಏಡಿಬಿ 8, 12 ಲಕ್ಷವೆಂದು ನಿಗದಿಸಿ ಬಲವಂತವಾಗಿ ಸ್ವಾಧೀನ ಮಾಡಿದೆ. ಅದರ ಜೊತೆ ಅಂಟಿ ಕೊಂಡ ಬ್ರಾಹ್ಮಿಣಿ ಸ್ಟೀಲ್ಸ ಕಂಪನಿಗೆ 5,6-8 ಲಕ್ಷರೂಗಳ ನಿಗದಿಸಿ ವಂಚಿಸಿದೆ) ಸಾವಿರಾರು ಎಕರೆ ವಶಪಡಿಸಿಕೊಂಡು ಕಂಪನಿಗಳಿಗೆ ಕೇವಲ ಒಂದು ವರ್ಷಕ್ಕೆ ಒಂದು ಎಕರೆಗೆ 100 ರೂಗಳಂತೆ ಗುತ್ತಿಗೆಗೆ ನೀಡಲಾಗುತ್ತದೆ.
ಆದರೆ, ರಾಜ್ಯದ ಸಂಕಷ್ಠದಲ್ಲಿರುವ ದಲಿತರಿಗಾಗಲಿ, ಕೂಲಿಕಾರ, ಬಡ ರೈತರಿಗಾಗಲಿ , ದೊಡ್ಡ ಭೂಮಾಲೀಕರಿಂದ ಭೂ ಸ್ವಾಧೀನ ಮಾಡಿ ಹೀಗೆ 100 ರೂ ಗುತ್ತಿಗೆಗೆ ಜಮೀನು ನೀಡುವ ಕೆಲಸವನ್ನು ಸರಕಾರ ಮಾಡುತ್ತಿಲ್ಲ. ಬಂಡವಾಳ ಹೂಡಿಕೆಯ ಹೆಸರಿನಲ್ಲಿ ಬೆಂಗಳೂರು ಸುತ್ತಲಿನ ಬಡ ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಿ ಸಾವಿರಾರು ಎಕರೆ ಜಮೀನನ್ನು ಬಂಡವಾಳಿಗರಿಗೆ ಉಚಿತವಾಗಿ ನೀಡುವ ಇದೇ ಸರಕಾರ ಬಡ ನಿವೇಶನ ಹಾಗುಚ ವಸತಿ ಹೀನರಿಗೆ ನಿವೇಶನ ನೀಡಲು ನಿರಾಕರಿಸುತ್ತಿದೆ.

ಅಂಗನವಾಡಿ, ಆಶಾ, ಅಕ್ಷರ ದಾಸೋಹ, ಸಂಜೀವಿನಿ ನೌಕರರಿಗೆ ವೇತನ ನಿಗದಿಸಿ ಕನಿಷ್ಠ ವೇತನ ನೀಡುವುದನ್ನು ಮತ್ತು ವಯೋವೃದ್ಧರು, ದೇವದಾಸಿ ಮಹಿಳೆಯರು, ಅಂಗವಿಕಲರು, ಗಂಡ ಸತ್ತ ಮತ್ತು ಬಿಟ್ಟ ಹಾಗು ಮದುವೆಯಾಗದ ಒಂಟಿ ಮಹಿಳೆಯರಿಗೆ ಪಿಂಚಣಿ ಅಥವಾ ಮಾಸಿಕ ಸಹಾಯಧನ 5000 ರೂಗಳಿಗೆ ಹೆಚ್ಚಿಸುವುದನ್ನು ನಿರಾಕರಿಸುವ ಕೇಂದ್ರ ಹಾಗು ರಾಜ್ಯ ಸರಕಾರಗಳು ಈ ಬಂಡವಾಳ ಹೂಡಿಕೆದಾರರನ್ನು ಓಲೈಸಲು ಶೇ 80 ರಷ್ಠು ಸಹಾಯಧನ ನೀಡಲಾಗುತ್ತದೆ. ಕೇಂದ್ರದ ಪಾಲು ಶೇ 50 ಆದರೆ, ರಾಜ್ಯದ ಪಾಲು ಶೇ 30 ಎನ್ನಲಾಗಿದೆ.
ಅಂದರೆ, ಕಳೆದ ವರ್ಷ ನಡೆದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 1.20 ಲಕ್ಷ ಕೋಟಿ ಬಂಡವಾಳ ಹೂಡುವುದಾಗಿ ಮುಂದೆ ಬಂದ ಜಿಂದಾಲ್ ಕಂಪನಿಯು ಅದರಂತೆ ಸುಮಾರು 96,000 ಕೋಟಿ ರೂ ಸಹಾಯಧನ ಪಡೆಯಲಿದೆ. ಮಾತ್ರವಲ್ಲಾ ! ಅದು ಸಾರ್ವಜನಿಕ ಬ್ಯಾಂಕ್ ಗಳಲ್ಲಿ ಸಾಲ ಎತ್ತಲು ಎರಡೂ ಸರಕಾರಗಳು ಕಂಪನಿ ಪರವಾಗಿ ಗ್ಯಾರಂಟಿ ಹಾಗು ಕೌಂಟರ್ ಗ್ಯಾರಂಟಿ ನೀಡಲಿವೆ. ಮಾತ್ರವಲ್ಲಾ ಇವರು ಪಡೆಯುವ ಲಕ್ಷಾಂತರ ಕೋಟಿ ರೂಗಳಿಗೆ ಐದು ವರ್ಷಗಳ ಬಡ್ಡಿ ರಿಯಾಯಿತಿ ಘೋಷಿಸಿವೆ. ದೇವದಾಸಿ ಮಹಿಳೆಯರು ಸಾಲ ಕಟ್ಟಲು ಅಸಮರ್ಥರೆಂದು ಮತ್ತು ಅವರಿಗೆ ಗ್ಯಾರಂಟಿ ನೀಡುವವರಾರು ಇಲ್ಲವೆಂದು ಸಾಲ ನೀಡುವುದನ್ನೆ ನಿರಾಕರಿಸಲಾಗಿದೆ.
ಇದನ್ನೂ ನೋಡಿ: ಯುದ್ಧವೂ ಉದ್ಯಮವಾದಾಗ….! -ಡಾ.ಸಿದ್ದನಗೌಡ ಪಾಟೀಲ ವಿಶ್ಲೇಷಣೆಯಲ್ಲಿ Janashakthi Media
