ತಮಿಳುನಾಡು ವಿಧಾನಸಭೆ ಚುನಾವಣೆ: ಮುಖ್ಯಮಂತ್ರಿ ಅಭ್ಯರ್ಥಿಯಾದ ‌ನಟ ವಿಜಯ್

ಚೆನ್ನೈ: ತಮಿಳುನಾಡು ಚಿತ್ರರಂಗದ ಜನಪ್ರಿಯ ನಟ ದಳಪತಿ ವಿಜಯ್​ ರಾಜಕೀಯ ಪ್ರವೇಶಕ್ಕಾಗಿ ಹೊಸ ಪಕ್ಷ ಘೋಷಿಸಿಸಿದ್ದೂ, ಅವರಿಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ವಿಜಯ್ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷವನ್ನು ಬಲಪಡಿಸುತ್ತಿದ್ದು, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

2026ರ ತಮಿಳುನಾಡು ಚುನಾವಣೆಯಲ್ಲಿ “ನಾನೇ ಮುಖ್ಯಮಂತ್ರಿ ಅಭ್ಯರ್ಥಿ” ಎಂದು ವಿಜಯ್ ಘೋಷಿಸಿದ್ದಾರೆ. 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಎಲ್ಲ 234 ಸೀಟುಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಣೆ ಮಾಡಿದ, ತಾವು ಅಧಿಕಾರ ಹಂಚಿಕೆಯ ವಿರೋಧಿ ಅಲ್ಲ ಎಂಬುದನ್ನೂ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧ : ಏನಾಯ್ತು ? ಏಕಾಯ್ತು? ಮುಂದೇನು? – ಭಾಗ 2

ಟಿವಿಕೆ ಸಂಕಲ್ಪಗಳು

ರಾಜ್ಯಪಾಲರ ಹುದ್ದೆ ರದ್ದತಿಗೆ ಬೆಂಬಲ ನೀಡುವುದು, ದ್ವಿಭಾಷಾ ನೀತಿಯ ಪರ ನಿಲ್ಲುವುದು, ಶಿಕ್ಷಣವನ್ನು ರಾಜ್ಯಗಳ ವ್ಯಾಪ್ತಿಗೆ ತರುವುದು, ಶೇ.33ರಷ್ಟು ಟಿಕೆಟ್‌ಗಳು ಮಹಿಳೆಯರಿಗೆ ನೀಡುವುದು, ಕಾಮರಾಜರ ಮಾಡೆಲ್‌ ಶಾಲೆಗಳ ಸ್ಥಾಪನೆ, ಐಟಿ ಉತ್ತೇಜನಕ್ಕಾಗಿ ರಾಜ್ಯದಲ್ಲಿ ಪ್ರತ್ಯೇಕ ಐಟಿ ವಿಶ್ವವಿದ್ಯಾಲಯ ಸ್ಥಾಪನೆ, ಮರಳು ಮಾಫಿಯಾ ಹತ್ತಿಕ್ಕಲು ವಿಶೇಷ ಕಾನೂನು ತರುತ್ತೇವೆ ಎಂದು ವಿಜಯ್ ಘೋಷಿಸಿದ್ದಾರೆ.

ಇದನ್ನೂ ನೋಡಿ: ಒತ್ತಡ ನಿವಾರಿಸಿ, ಹೃದಯದ ಆರೋಗ್ಯ ಹೆಚ್ಚಿಸಿ – ಡಾ ಭಾನು ಪ್ರಕಾಶ್‌ | Janashakthi Media

Donate Janashakthi Media

Leave a Reply

Your email address will not be published. Required fields are marked *