ಹಟ್ಟಿ ಚಿನ್ನದಗಣಿ ಛೇರ್ಮನ್, ಎಂ.ಡಿ.ಯನ್ನು ಭೇಟಿಯಾದ ನೂತನ ಅಧ್ಯಕ್ಷ ಕೆ. ಮಹಾಂತೇಶ

ಮಡಿಕಲ್ ಅನ್ ಫಿಟ್ ಸೇರಿ ಹಲವು ವಿಷಯಗಳು ಚರ್ಚೆ
ಬೆಂಗಳೂರು: ಇತ್ತೀಚೆಗೆ ನಡೆದ ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ಮಹಾಂತೇಶ ಜುಲೈ 1ರಂದು ಬೆಂಗಳೂರಿನಲ್ಲಿರುವ ಹಟ್ಟಿ ಚಿನ್ನದ ಗಣಿ ಕಂಪನಿಯ ಕೇಂದ್ರ ಕಚೇರಿಗೆ ಬೇಟಿ ನೀಡಿ ಅಧ್ಯಕ್ಷ, ಬೀಳಗಿ ಕ್ಷೇತ್ರದ ಶಾಸಕ ಜಿ.ಟಿ.ಪಾಟೀಲ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಆರ್. ಶಿಲ್ಪಾ ಅವರೊಂದಿಗೆ ಮಾತುಕತೆ ನಡೆಸಿದರು. ನೂತನ

ಅಧ್ಯಕ್ಷರು ಹಾಗೂ ವ್ಯವಸ್ಥಾಪಕರೊಂದಿಗಿನ ಈ ಸೌಹಾರ್ದ ಮಾತುಕತೆಯಲ್ಲಿ ಕಂಪನಿಯ ಉತ್ಪಾದಕತೆ ಹೆಚ್ಚಳ ಹಾಗೂ ಸಿಬ್ಬಂದಿ ಮತ್ತು ಕಾರ್ಮಿಕರ ಬಹುಮುಖ್ಯ ಬೇಡಿಕೆಗಳಾದ ಮೆಡಿಕಲ್ ಅನ್ ಫಿಟ್, ಬಡ್ತಿ, ಖಾಲಿ ಹುದ್ದೆಗಳ ಭರ್ತಿ, ಬಾಕಿಯಿರುವ ಮನೆ ಬಾಡಿಗೆ ಭತ್ಯೆ, ಕ್ಯಾಂಟೀನ್ ಇತರೆಡೆ ಮೂಲಭೂತ ಸೌಕರ್ಯ ಹಾಗೂ ಶುದ್ಧ ಕುಡಿಯುವ ನೀರು ಸೇರಿದಂತೆ ಅನೇಕ ಸೌಕರ್ಯಗಳನ್ನು ಒದಗಿಸಬೇಕು. 1000 ಮನೆಗಳ ನಿರ್ಮಾಣ ಹಾಗೂ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಯೋಜನೆ ಜಾರಿಗಾಗಿ ತ್ವರಿತಗತಿಯ ಕ್ರಮಗಳನ್ನು ವಹಿಸಬೇಕೆಂದು ಕೋರಿದರು. ನೂತನ

ಇದನ್ನೂ ಓದಿ: ತೆಲಂಗಾಣ| ರಾಸಾಯನಿಕ ಉದ್ಯಮದಲ್ಲಿ ಬೆಂಕಿ; 5 ಜನರು ಸಾವು

ಅಧ್ಯಕ್ಷರು ಪ್ರಸ್ತಾಪಿಸಿದ ವೀಶೇಷವಾಗಿ ಮೆಡಿಕಲ್ ಅನ್ ಫಿಟ್, ಹೆಚ್ ಆರ್ ಎ.ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಸಕರಾತ್ಮಕವಾಗಿ ಸ್ಪಂದನೆ ನೀಡಿದರು. ಖಾಲಿ ಭರ್ತಿ ಹಾಗೂ ಬಡ್ತಿ ವಿಚಾರಕ್ಕೆ ಸಂಬಂಧಿಸಿ ಸರ್ಕಾರ ಒಳ ಮೀಸಲಾತಿ ಕುರಿತು ಕ್ರಮವಹಸಿದ ಬಳಿಕ ಭರ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದಲ್ಲದೇ ಕಾರ್ಮಿಕ ಸಂಘವು ಮಂಡಿಸಿರುವ ಹಲವು ಬೇಡಿಕೆಗಳು ಮತ್ತು ಕಂಪನಿಯ ಉತ್ಪಾದಕತೆ ಗುರಿಯನ್ನು ತಲುಪುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚುನಾಯಿತ ಕಾರ್ಮಿಕ ಸಂಘದೊಂದಿಗೆ ಜೊತೆ ಜುಲೈ 9 ರಂದು ಹಟ್ಟಿಗೆ ಭೇಟಿ ನೀಡಿ ಸಭೆ ನಡೆಸಿ ಚರ್ಚಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ರಮೇಶ ವೀರಾಪೂರು ಉಪಸ್ಥಿತರಿದ್ದರು.

ಇದನ್ನೂ ನೋಡಿ: ‘ಪ್ರಾಣ ಕೊಟ್ಟೇವು, ಭೂಮಿ ಬಿಡೆವು’ ಚನ್ನರಾಯಪಟ್ಟಣ ರೈತರ ಸಂಕಲ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *