ನವದೆಹಲಿ: ಹತ್ತು ಕೇಂದ್ರ ಕಾರ್ಮಿಕ ಸಂಘಗಳು (CTU ಗಳು) ಮತ್ತು ಸ್ವತಂತ್ರ ಅಖಿಲ ಭಾರತ ಕ್ಷೇತ್ರವಾರು ನೌಕರರ ಒಕ್ಕೂಟಗಳು ಮತ್ತು ಸಂಘಗಳನ್ನು ಒಳಗೊಂಡಿರುವ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ಕರೆ ನೀಡಿರುವ ಜುಲೈ 9, 2025 ರ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಐದು ಎಡ ಪಕ್ಷಗಳು ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿವೆ.
ಈ ಸಾರ್ವತ್ರಿಕ ಮುಷ್ಕರವನ್ನು ಮುಖ್ಯವಾಗಿ ಕಾರ್ಮಿಕ ಸಂಹಿತೆಗಳ ಅನುಷ್ಠಾನದ ವಿರುದ್ಧ ಕರೆಯಲಾಗಿದೆ, ಈ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಸಂಘಟನಾ ಹಕ್ಕು ಮತ್ತು ಸಾಮೂಹಿಕ ಕಾರ್ಯಾಚರಣೆ ನಡೆಸುವ ಹಕ್ಕೂ ಸೇರಿದಂತೆ ಅವರ ಮೂಲಭೂತ ಪ್ರಜಾಪ್ರಭುತ್ವ ಹಕ್ಕುಗಳನ್ನು ತೀವ್ರವಾಗಿ ಮೊಟಕುಗೊಳಿಸುವ ಗುರಿಯನ್ನು ಹೊಂದಿರುವ ಕಾರ್ಪೊರೇಟ್ ಅಜೆಂಡಾದ ಪ್ರಮುಖ ಭಾಗವಾಗಿವೆ ಎಂದು ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್ )ಲಿಬರೇಷನ್ ಆರ್‍ಎಸ್‍ಪಿ ಮತ್ತು ಫಾರ್ವರ್ಡ್ ಬ್ಲಾಕ್ ನ ಪ್ರಧಾನ ಕಾರ್ಯದರ್ಶಿಗಳು ತಮ್ಮ ಜಂಟಿ ಹೇಳಿಕೆಯ್ಲಲ್ಲಿ ತಿಳಿಸಿದ್ದಾರೆ. ಮುಷ್ಕರಕ್ಕೆ
ಇದನ್ನೂ ಓದಿ: ರೈಲಿನಲ್ಲಿ ಬಿಜೆಪಿ ಶಾಸಕರಿಗೆ ಸೀಟು ಬಿಡಲು ನಿರಾಕರಿಸಿದಕ್ಕೆ ಹಿಗ್ಗಾಮುಗ್ಗಾ ಥಳಿತ
ಬಿಜೆಪಿ ನೇತೃತ್ವದ ಸರ್ಕಾರವು ಈಗ ತನ್ನ ಮೂರನೇ ಅವಧಿಯಲ್ಲಿ ತನ್ನ ನವ ಉದಾರವಾದಿ ಕಾರ್ಯಸೂಚಿಯನ್ನು ಆಕ್ರಮಣಕಾರಿಯಾಗಿ ಮುಂದೊತ್ತುತ್ತಿದೆ, ಇದರಲ್ಲಿ ಕಾರ್ಮಿಕ ಸಂಹಿತೆಗಳು ಕೇಂದ್ರ ಅಂಶವಾಗಿವೆ. ಇದು ಪ್ರಮುಖ ರಾಷ್ಟ್ರೀಯ ಸಂಪನ್ಮೂಲಗಳ ಖಾಸಗೀಕರಣದ ಕಡೆಗೆ, ವಿಶೇಷವಾಗಿ ರಕ್ಷಣೆ ಮತ್ತು ಸಂವಹನದಂತಹ ಆಯಕಟ್ಟಿನ ಕ್ಷೇತ್ರಗಳಲ್ಲಿ ಆಕ್ರಮಣಕಾರಿಯಾಗಿ ಸಾಗುತ್ತಿದೆ, ಈ ಕಾರ್ಮಿಕ ವಿರೋಧಿ ನೀತಿಗಳಿಗೆ ಎಲ್ಲಾ ವಿರೋಧವನ್ನು ನಿಗ್ರಹಿಸಲು ಸಹ ಇದು ಪ್ರಯತ್ನಿಸುತ್ತಿದೆ ದು ಈ ಎಡಪಕ್ಷಗಳ ಮುಖಂಡರು ಹೇಳಿದ್ದಾರೆ.
ಜುಲೈ 9 ರ ಸಾರ್ವತ್ರಿಕ ಮುಷ್ಕರದಲ್ಲಿ ಕಾರ್ಮಿಕ ಸಂಘಗಳು ಪುನರುಚ್ಚರಿಸಿರುವ ಬೇಡಿಕೆಗಳು ರೈತರು, ಕೃಷಿ ಕಾರ್ಮಿಕರು ಮತ್ತು ಸಾರ್ವಜನಿಕರ ಕಳವಳಗಳನ್ನು ಕೂಡ ಬಿಂಬಿಸುತ್ತವೆ. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕೃಷಿ ಕೂಲಿಕಾರರ ಸಂಘಟನೆಗಳು ಕೂಡ ಸಾರ್ವತ್ರಿಕ ಮುಷ್ಕರಕ್ಕೆ ತಮ್ಮ ಬೆಂಬಲವನ್ನು ನೀಡಿವೆ ಮತ್ತು ಆ ದಿನದಂದು ಬೃಹತ್ ಮತ ಪ್ರದರ್ಶನಗಳಿಗೆ ಕರೆ ನೀಡಿವೆ.
ಕಾರ್ಮಿಕರ ಸಾರ್ವತ್ರಿಕ ಮುಷ್ಕರವು ರೈತರ ಈ ಸೌಹಾರ್ದ ಕ್ರಮಗಳ ಜೊತೆಗೆ, ದುಡಿಯುವ ಜನರನ್ನು ವಿಭಜಿಸುವ ಮತ್ತು ದ್ವೇಷವನ್ನು ಹರಡುವ ಪ್ರಯತ್ನಗಳ ವಿರುದ್ಧ ಅವರ ಐಕ್ಯತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದಿರುವ ಎಡಪಕ್ಷಗಳು ಈ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸುವಂತೆ ಜನರಿಗೆ ಕರೆ ನೀಡಿವೆ ಮತ್ತು ಅದನ್ನು ಯಶಸ್ಚಿಗೊಳಿಸಲು ಸಕ್ರಿಯವಾಗಿ ಪ್ರಚಾರ ಮಾಡಿ ದೊಡ್ಡ ಸಂಖ್ಯೆಯಲ್ಲಿ ಸಜ್ಜುಗೊಳ್ಳುವಂತೆ ತಮ್ಮೆಲ್ಲ ಘಟಕಗಳಿಗ ಕರೆ ನೀಡಿವೆ.
ಇದನ್ನೂ ನೋಡಿ: ಘೋಷಿತ ತುರ್ತು ಪರಿಸ್ಥಿತಿ ಮತ್ತು ಅಘೋಷಿತ ತುರ್ತು ಪರಿಸ್ಥಿತಿಯ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ತೆರೆದಿಡುವ ಪುಸ್ತಕ
