ಬೆಂಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಕೆಲ ಫಲಾನುಭವಿಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ವದಂತಿಗೆ ತೆರೆಯೆಳೆದಿದ್ದಾರೆ. ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದೇ ಪರಿಷ್ಕರಣೆ ಅಥವಾ ಕಡಿತಗೊಳಿಸುವಿಕೆ ಇಲ್ಲ. ಕೆಲವು ವದಂತಿಗಳು ಫಲಾನುಭವಿಗಳ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಹಬ್ಬಿದ್ದವು, ಆದರೆ ಈ ವದಂತಿ ಸುಳ್ಳು ಎಂದು ತಳ್ಳಿಹಾಕಿದ್ದಾರೆ. ಬೆಂಗಳೂರು
ಇದನ್ನೂ ಓದಿ: 2 ವರ್ಷಗಳಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; 13 ಜನ ಆರೋಪಿ ಬಂಧನ
ಪ್ರತಿ ತಿಂಗಳು ಸರಾಸರಿ 10,000 ರಿಂದ 15,000 ಹೊಸ ಫಲಾನುಭವಿಗಳು ಈ ಯೋಜನೆಗೆ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದಾಗಿ ಯೋಜನೆಯ ವ್ಯಾಪ್ತಿಯು ಇನ್ನಷ್ಟು ವಿಸ್ತರಿಸುತ್ತಿದೆ. ಮತ್ತು ಹೆಚ್ಚಿನ ಮಹಿಳೆಯರಿಗೆ ಆರ್ಥಿಕ ಸಹಾಯ ದೊರೆಯುತ್ತಿದೆ. ಈ ಯೋಜನೆಯ ಹಣವನ್ನು ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳ ಮೂಲಕ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ನೋಡಿ: ವಚನಾನುಭವ 30| ಅಲ್ಲಮನ ವಚನ | ಅರಿವಿನ ಜಾಗೃತಿ – ಡಾ. ಮೀನಾಕ್ಷಿ ಬಾಳಿ Janashakthi Media
