ನೀಟ್ ಪರೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿನಿಗೆ ಅನ್ಯಾಯ

ಬೆಂಗಳೂರು: 2025ರ ಸಾಲಿನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ  ಪರೀಕ್ಷೆಯಲ್ಲಿ ಗೋಲ್ ಮಾಲ್ ನಡೆದಿರುವ ಆರೋಪ ಕೇಳಿಬಂದಿದೆ. ನೀಟ್-ಯುಜಿ ಪರೀಕ್ಷೆಯಲ್ಲಿ ಕರ್ನಾಟಕದ ವಿದ್ಯಾರ್ಥಿನಿಗೆ ಅನ್ಯಾಯವಾಗಿದೆ. ಉತ್ತರ ಪತ್ರಿಕೆ ಹಾಗೂ OMR ಶೀಟ್ ಅದಲು ಬದಲು ಆಗಿರುವುದು ಬೆಳಕಿಗೆ ಬಂದಿದೆ.

ಉತ್ತರ ಪತ್ರಿಕೆ ಹಾಗೂ OMR ಶೀಟ್ ಅದಲು ಬದಲು ಮಾಡಿದ್ದಾರೆ . ನೀಟ್​​ ನಲ್ಲಿ ನನಗೆ 633 ಅಂಕ ಬರಬೇಕಿತ್ತು. ಅದರೆ ನನಗೆ ಬಂದಿರೋದು ಕೇವಲ 469 ಅಂಕಗಳು ಬೇರೆಯವರ ಫಲಿತಾಂಶ ನನಗೆ ನೀಡಿದ್ದಾರೆಂದು ವಿದ್ಯಾರ್ಥಿನಿ ಪ್ರಿಯಾ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಬಾಲಕಿಯ ಮೇಲೆ ಅತ್ಯಾಚಾರ: ಬಿಜೆಪಿ ಶಾಸಕನ ಸೋದರಳಿಯ ಸೇರಿ ಇಬ್ಬರ ಬಂಧನ

ಉತ್ತರ ಪತ್ರಿಕೆಯ OMR ಸೀಟ್ ಬದಲಾಗಿದೆ. ನೋಂದಣಿ ಸಂಖ್ಯೆಯನ್ನ ತಿದ್ದಿ ಬರೆಯಲಾಗಿದೆ. ಸಹಿ ಕೂಡಾ ನನ್ನದಲ್ಲ. ಬೇರೆ ಯಾರದ್ದೋ ಫಲಿತಾಂಶವನ್ನ ತಮಗೆ ನೀಡಿರುವುದಾಗಿ ವಿದ್ಯಾರ್ಥಿನಿ ಪ್ರಿಯಾ ಆರೋಪಿಸಿದ್ದಾಳೆ. ಈ ಸಂಬಂಧ ರಾಜ್ಯದ ಎಂಪಿ ಹಾಗೂ ಸಚಿವರ ಗಮನಕ್ಕೆ ತಂದ್ರು ಯಾರು ರೆಸ್ಪಾನ್ಸ್ ಮಾಡುತ್ತಿಲ್ಲ ಎಂದು ಪ್ರಿಯಾ ಅಳಲು ತೋಡಿಕೊಂಡಿದ್ದಾಳೆ. ಇನ್ನು NTA ವಿರುದ್ಧ ಪೋಷಕರ ಕಿಡಿಕಾಡಿದ್ದು, ಅನ್ಯಾಯದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *