2ನೇ ಮತ್ತು 4ನೇ ಶನಿವಾರ ಮತ್ತೆ ಕೆಲಸದ ದಿನಗಳು: ಸುಪ್ರೀಂ ಕೋರ್ಟ್

ವದೆಹಲಿ: ಕಾನೂನು ಮತ್ತು ನ್ಯಾಯ ಸಚಿವಾಲಯವು ಪ್ರಮುಖ ಆಡಳಿತಾತ್ಮಕ ಬದಲಾವಣೆಯಲ್ಲಿ ಸುಪ್ರೀಂ ಕೋರ್ಟ್ (ತಿದ್ದುಪಡಿ) ನಿಯಮಗಳು 2025 ಪ್ರಕಾರ 2ನೇ ಮತ್ತು 4ನೇ ಶನಿವಾರ ಸುಪ್ರೀಂ ಕೋರ್ಟ್ ನ ನೋಂದಾವಣೆ ಮತ್ತು ಕಚೇರಿಗಳ ಕೆಲಸದ ದಿನಗಳ ಪಟ್ಟಿಗೆ ಮರಳಿ ಸೇರಿಸಿದೆ.

ಗೆಜೆಟ್‌ನಲ್ಲಿ ಪ್ರಕಟವಾದ ಅಧಿಸೂಚನೆಯ ಪ್ರಕಾರ, ಜುಲೈ 14 ರಿಂದ ಸುಪ್ರೀಂ ಕೋರ್ಟ್ ನ ನೋಂದಾವಣೆ ಮತ್ತು ಕಚೇರಿ ಸಿಬಂದಿಗಳಿಗೆ ಈ ತಿದ್ದುಪಡಿ ಜಾರಿಗೆ ಬರಲಿದೆ.

ಈ ಬದಲಾವಣೆ ಸುಪ್ರೀಂ ಕೋರ್ಟ್ ನಿಯಮಗಳ ಆದೇಶ II, ನಿಯಮಗಳು 1 ರಿಂದ 3 ರ ಅಡಿಯಲ್ಲಿದ್ದು, ಕೆಲಸದ ದಿನಗಳು ಮತ್ತು ಕಚೇರಿ ಸಮಯಗಳಿಗೆ ಪರಿಷ್ಕೃತ ಚೌಕಟ್ಟನ್ನು ಪರಿಚಯಿಸಿವೆ. ಹೊಸ ಅಧಿಸೂಚನೆಯ ಪ್ರಕಾರ, ಸುಪ್ರೀಂ ಕೋರ್ಟ್‌ನ ಕಚೇರಿಗಳು ಈಗ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಲಿವೆ.

ಇದನ್ನೂ ಓದಿ: ಸಹಾನುಭೂತಿಯ ತನ್ಮಯತೆ

ಗೊತ್ತುಪಡಿಸಿದ ರಜಾದಿನಗಳು ಮತ್ತು ಭಾಗಶಃ ಕೆಲಸದ ದಿನಗಳನ್ನು ಹೊರತುಪಡಿಸಿ. ನಿಯಮಿತ ವಾರದ ದಿನಗಳಲ್ಲಿ ಸಂಜೆ 4.30 ರ ನಂತರ ತುರ್ತು ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.

ನ್ಯಾಯಾಲಯದ ಕಚೇರಿಯು ಇನ್ನು ಸಾಂಪ್ರದಾಯಿಕವಾಗಿ ರಜೆ ಇದ್ದ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸೇರಿದಂತೆ ಎಲ್ಲಾ ಶನಿವಾರ ತೆರೆದಿರುತ್ತದೆ, ಶನಿವಾರ ಕಚೇರಿ ಸಮಯ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಇರುತ್ತದೆ ಮತ್ತು ತುರ್ತು ವಿಷಯಗಳನ್ನು ಮಧ್ಯಾಹ್ನ 12 ಗಂಟೆಯ ಮೊದಲು ಸಲ್ಲಿಸಬೇಕು.

ಕ್ರಿಸ್‌ಮಸ್/ ಹೊಸ ವರ್ಷದಂತಹ ವಿಶೇಷ ರಜಾದಿನಗಳಿಗಾಗಿ, ಕೆಲಸದ ಸಮಯವನ್ನು ಭಾರತದ ಮುಖ್ಯ ನ್ಯಾಯಾಧೀಶರು ಪ್ರಕರಣದಿಂದ ಪ್ರಕರಣಕ್ಕೆ ಅನುಗುಣವಾಗಿ ನಿರ್ಧರಿಸಿ ಘೋಷಿಸಲಿದ್ದಾರೆ.

ಇದನ್ನೂ ನೋಡಿ: ಜಾತಿ ಗಣತಿ ವಿರೋಧಿಸಿದ ಮೋದಿಯವರ ಯು ಟರ್ನ್… ಸಮರ್ಥಿಸಿದ‌ ಸಿದ್ದರಾಮಯ್ಯನವರು ಕವಲು ದಾರಿಯಲ್ಲಿ….

Donate Janashakthi Media

Leave a Reply

Your email address will not be published. Required fields are marked *