ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಟ್ರಿಪ್ ಹೋದ ಮಗ, ಹಸಿವಿನಿಂದ ಸಾವು

ಭೋಪಾಲ್‌: ತನ್ನ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಟ್ರಿಪ್ ಹೋಗಿದ್ದ ಮಗ ವಾಪಸಾಗುವಷ್ಟರಲ್ಲಿ ತಾಯಿ ಹಸಿವಿನಿಂದ ಸಾವನ್ನಪ್ಪಿರುವ ಘಟನೆ ಭೋಪಾಲ್‌ನ ನಿಶಾತ್‌ಪುರ ಪ್ರದೇಶದಲ್ಲಿ ನಡೆದಿದೆ.

ಲಲಿತಾ ದುಬೆ ಎಂಬ ಮಹಿಳೆ ತನ್ನ ಮಗ ಅರುಣ್‌ನೊಂದಿಗೆ ವಾಸಿಸುತ್ತಿದ್ದರು. ಲಲಿತಾ ದುಬೆಯನ್ನ ಮನೆಯೊಳಗೆ ಕೂಡಿ ಹಾಕಿ ಅರುಣ್ ತನ್ನ ಪತ್ನಿಯೊಂದಿಗೆ ಉಜ್ಜಯಿನಿಯ ಮನೆಗೆ ಹೋಗಿದ್ದ. ಬಳಿಕ ಅರುಣ್ ಇಂದೋರ್‌ನಲ್ಲಿರುವ ತನ್ನ ಸಹೋದರನಿಗೆ ಕರೆ ಮಾಡಿ ಫ್ಯಾಮಿಲಿ ಸಮೇತ ಉಜ್ಜಿವಿಗೆ ಹೋಗುತ್ತಿರುವುದಾಗಿ ತಿಳಿಸಿದೆ.

ಕೆಲವು ದಿನಗಳ ಬಳಿಕ ಮತ್ತೊಬ್ಬ ಮಗ ಅಜಯ್ ದುಬೆಗೆ ಅನುಮಾನ ಬಂದು ಒಮ್ಮೆ ಮನೆಯ ಹತ್ತಿರ ಹೋಗಿ ಅಮ್ಮ ಇದ್ದಾರಾ ನೋಡು ಎಂದು ಹೇಳಿ ಸ್ನೇಹಿತರೊಬ್ಬರನ್ನು ಕಳುಹಿಸಿದ್ದರು. ಆದರೆ ಸ್ನೇಹಿತ ಮನೆಗೆ ತಲುಪುವಷ್ಟರಲ್ಲಿ ಅವರು ಶವವಾಗಿದ್ದರು.

ಇದನ್ನೂ ಓದಿ: ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ – ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ

ಘಟನೆ ಬಗ್ಗೆ ಮಾಹಿತಿ ತಿಳಿದು ಪೊಲೀಸ್ ತಂಡ ಸ್ಥಳಕ್ಕೆ ಬಂದಿತ್ತು, ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅವರ ಸಾವಿಗೆ ಊಟ, ನೀರು ಇಲ್ಲದಿರುವುದೇ ಕಾರಣ, ಹಸಿವಿನಿಂದ ಅವರು ಸಾವನ್ನಪ್ಪಿರುವುದಾಗಿ ತಿಳಿಸಿದರು. ಅಜಯ್ ನೀಡಿದ ದೂರನ್ನು ಸ್ವೀಕರಿಸಿದ ನಂತರ, ಆರೋಪಿ ಪುತ್ರ ಅರುಣ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭೋಪಾಲ್ ಪೊಲೀಸ್ ಇನ್ಸಪೆಕ್ಟರ್ ರೂಪೇಶ್ ದುಬೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಲಲಿತಾ ದುಬೆ ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ, ಅನಾರೋಗ್ಯದ ಕಾರಣ ಅವರಿಗೆ ಎದ್ದು ತಿನ್ನಲು ಅಥವಾ ಔಷಧಿ ತೆಗೆದುಕೊಳ್ಳಲು ಹಾಸಿಗೆಯಿಂದ ಎದ್ದೇಳಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಆರೋಪಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಯಸ್ಸಾದ ಮಹಿಳೆಗೆ ಮೂವರು ಗಂಡು ಮಕ್ಕಳಿದ್ದರು. ಅವರಲ್ಲಿ ಒಬ್ಬರು ಸಾವನ್ನಪ್ಪಿದ್ದರು, ಇನ್ನೊಬ್ಬರು ಉಜ್ಜಯಿನಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ಉಜ್ಜಯಿನಿಯಲ್ಲಿಯೇ ಇರುತ್ತಿದ್ದರು ಮಗನ ವೃತ್ತಿಜೀವನವು ಸ್ಥಿರವಾಗಿಲ್ಲದ ಕಾರಣ ತನ್ನ ಮಗನನ್ನು ಬೆಂಬಲಿಸಲು ಭೋಪಾಲ್‌ ಸ್ಥಳಾಂತರಗೊಂಡಿದ್ದರು.

ಇದನ್ನೂ ನೋಡಿ: ಎನ್ನ ಕಣ್ಣೊಳಗಣ ಕಟ್ಟಿಗೆಯ ಮುರಿವವರನಾರನೂ ಕಾಣೆ. ಎನ್ನ ಕಾಲೊಳಗಣ ಮುಳ್ಳ ತೆಗೆವವರನಾರನೂ ಕಾಣೆ. ಎನ್ನ ಅಂಗದಲ್ಲಿದ್ದ

Donate Janashakthi Media

Leave a Reply

Your email address will not be published. Required fields are marked *