ರಾಮೇಶ್ವರಂ ಬೀಚಿನ ಡ್ರೆಸ್ ಬದಲಾಯಿಸುವ ಕೊಠಡಿಯೊಳಗೆ ರಹಸ್ಯ ಕ್ಯಾಮೆರಾ ಪತ್ತೆ

Please follow and like us:
ರಾಮೇಶ್ವರಂ: ರಾಮೇಶ್ವರಂನ ರಾಮನಾಥಸ್ವಾಮಿ ದೇವಾಲಯದ ಅಗ್ನಿ ತೀರ್ಥಂ ಬೀಚ್‌ನಲ್ಲಿ ಡ್ರೆಸ್ ಬದಲಾಯಿಸುವ ಕೊಠಡಿಯೊಳಗೆ ರಹಸ್ಯ ಕ್ಯಾಮೆರಾ ಬಳಸಿ ಮಹಿಳೆಯರನ್ನು ಚಿತ್ರೀಕರಿಸಿದ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಇಬ್ಬರನ್ನು ರಾಜೇಶ್ ಕಣ್ಣನ್ ಮತ್ತು ಆತನ ಸ್ನೇಹಿತ ಮೀರಾನ್  ಎಂದು ಗುರುತಿಸಲಾಗಿದೆ. ಡ್ರೆಸ್

ಸೋಮವಾರ ಪುದುಕೊಟ್ಟೆ ಮೂಲದ ಮಹಿಳೆಯೊಬ್ಬರು ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾವನ್ನು ಪತ್ತೆ ಹಚ್ಚಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನು ಕಂಡು ಬೆಚ್ಚಿ ಬಿದ್ದ ಮಹಿಳ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಪೊಲೀಸರು ಹುಡುಕಾಟ ನಡೆಸಿದಾಗ ಹಿಡನ್ ಕ್ಯಾಮರಾ ಪತ್ತೆಯಾಗಿದೆ.

ಇದನ್ನೂ ಓದಿ: ಪಾರ್ಟಿಯಲ್ಲಿ ಬಟ್ಟೆ ಬಿಚ್ಚಿಸಿ ಥಳಿತ, ಮನನೊಂದು ಆತ್ಮಹತ್ಯೆಗೆ ಶರಣಾದ ಬಾಲಕ

ರಾಮೇಶ್ವರಂ ಪಟ್ಟಣವು ಅರವತ್ತನಾಲ್ಕು ಜಲಮೂಲಗಳನ್ನು ಒಳಗೊಂಡಿದೆ. ಇವುಗಳಲ್ಲಿ 22 ರಾಮನಾಥಸ್ವಾಮಿ ದೇವಸ್ಥಾನದ ವ್ಯಾಪ್ತಿಯಲ್ಲಿವೆ. ಅಗ್ನಿ ತೀರ್ಥಂ ಬೀಚ್ ರಾಮೇಶ್ವರಂನ ಪ್ರಮುಖ ಯಾತ್ರಾ ಕ್ಷೇತ್ರಗಳಲ್ಲಿ ಒಂದಾಗಿದೆ.

ಇದನ್ನೂ ನೋಡಿ: “ಕರ್ನಾಟಕದ ಕೃಷಿ, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ” ಸಮಾವೇಶ

Please follow and like us:
Donate Janashakthi Media

Leave a Reply

Your email address will not be published. Required fields are marked *