ಸಾಲ ಮರು ಪಾವತಿ ವಿಚಾರಕ್ಕೆ ಬ್ಯಾಂಕ್ ನ ಅಧ್ಯಕ್ಷ ಕಿರುಕುಳ: ವ್ಯಕ್ತಿಯೊಬ್ಬ ಆತ್ಮಹತ್ಯೆ

ಮಂಗಳೂರು : ಮಂಗಳೂರಿನ ಕ್ಯಾಥೊಲಿಕ್ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಸಾಲ ಮರು ಪಾವತಿ ವಿಚಾರಕ್ಕೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿಡಿಯೋ ಮಾಡಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ಹೊರವಲಯದ ಫೆರ್ಮಾಯಿ ಎಂಬಲ್ಲಿ ನಡೆದಿದೆ.

ಫರ್ಮಾಯಿ ನಿವಾಸಿ ಮನೋಹರ್ ಪಿರೇರಾ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ಮಂಗಳೂರಿನ ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್‌ ನಲ್ಲಿ 15 ಲಕ್ಷ ಸಾಲ ಪಡೆದಿದ್ದರು, ಬಳಿಕ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಬಂದು ಪ್ಯಾರಾಲಿಸಿಸ್ ಆಗಿ ಕಾಲು ಊನಗೊಂಡಿತ್ತು, ಬಳಿಕ ಕೋವಿಡ್ ಕಾರಣದಿಂದ ಅವರಿಗೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ : ಜಮ್ಮು ಮತ್ತು ಕಾಶ್ಮೀರ | ಅಗ್ನಿ ಅವಘಡ – ಆರು ಮಂದಿ ಸಜೀವ ದಹನ

ಈ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಮನೆಯನ್ನು ಬ್ಯಾಂಕ್ ಸೀಜ್ ಮಾಡಿತ್ತು, ಬಳಿಕ ಮನೋಹರ್ ಸಾಲ ತೀರಿಸಲು ಚಾರಿಟಿ ಸಂಸ್ಥೆಯಿಂದ 15 ಲಕ್ಷ ಮೊತ್ತವನ್ನು ಸೆಲ್ಫ್ ಚೆಕ್ ಮೂಲಕ ಬ್ಯಾಂಕಿಗೆ ನೀಡಿದ್ದರು ಎಂದು ಹೇಳಲಾಗಿದೆ.

ಆದರೆ ಈ ಸಲ ಚೆಕ್ ನಲ್ಲಿ ನೀಡಿದ್ದ ಮೊತ್ತವನ್ನು ಬ್ಯಾಂಕ್‌ ಅಧ್ಯಕ್ಷ ಅನಿಲ್ ಲೋಬೊ ಗುಳುಂ ಮಾಡಿದ್ದಾಗಿ ಆರೋಪಿಸಲಾಗಿದೆ. ಸಾವಿಗೂ ಮುನ್ನ 9 ಲಕ್ಷ ಹಣವನ್ನು ಅನಿಲ್ ಲೋಬೊ ತಿಂದಿದ್ದಾಗಿ ಮನೋಹರ್ ಹೇಳಿಕೆ ನೀಡಿದ್ದಾರೆ. ಅಲ್ಲದೆ ಮತ್ತಷ್ಟು ಹಣ ಕಟ್ಟಲು ಒತ್ತಡ ಹಾಕಿದ್ದು, ಇದರಿಂದ ಮಾನಸಿಕ ಕಿರುಕುಳ, ಜಿಗುಪ್ಪೆಯಿಂದ ಮಂಗಳೂರು ಹೊರವಲಯದ ಉಳಾಯಿಬೆಟ್ಟಿನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದೀಗ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಮಂಗಳೂರಿನ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಮನೋಹರ್ ಪಿರೇರಾ(47) ಅವರ ತಮ್ಮ ಜೀವನ್ ಪಿರೇರಾ ನೀಜಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ನೋಡಿ : ಬೆಳಗಾವಿ | ಕಬ್ಬು ಬೆಳೆಗೆ ಸೂಕ್ತ ದರ ನಿಗದಿ ಮಾಡಿ – ಕಬ್ಬು ಬೆಳೆಗಾರರ ಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *