ಮುರುಡೇಶ್ವರ : ಮುರುಡೇಶ್ವರದಲ್ಲಿ ಮರಣ ಹೊಂದಿದ ನಾಲ್ವರು ವಿದ್ಯಾರ್ಥಿನಿಯರ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಣೆ, ಸರ್ಕಾರಿ ಉದ್ಯೋಗ, ಮತ್ತು ಎರಡು ಎಕರೆ ಸರ್ಕಾರಿ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿ ಎಸ್ಎಫ್ಐ ಮನವಿ ಮಾಡಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೋಕಿನ ಬಾಳಸಂದ್ರ ಗ್ರಾಮದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಸುಮಾರು 46 ವಿದ್ಯಾರ್ಥಿನಿಯರನ್ನು ಶಾಲೆಯ ವತಿಯಿಂದ ಪ್ರಾಂಶುಪಾಲರು ಹಾಗೂ 6 ಜನ ಶಿಕ್ಷಕರ ತಂಡ ಪ್ರವಾಸಕ್ಕೆಂದು ಖಾಸಗಿ ಬಸ್ಸಿನಲ್ಲಿ ದಿನಾಂಕ: 08-12-2024 ರಂದು ರಾತ್ರಿ ಸುಮಾರು 10:00 ಗಂಟೆಗೆ ಬಾಳಸಂದ್ರದಿಂದ ಶೈಕ್ಷಣಿಕ ಪ್ರವಾಸ ಹೋಗಿದ್ದು, ದಿನಾಂಕ: 10-12-2024 ರಂದು ಸಂಜೆ ಅರಬ್ಬಿ ಸಮುದ್ರದ ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ಬೀಜ್ನಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಏಳು ವಿದ್ಯಾರ್ಥಿನಿಯರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರಲ್ಲಿ ನಾಲ್ಕು ಜನ ವಿದ್ಯಾರ್ಥಿನಿಯರ ಮೃತ ದೇಹ ಪತ್ತೆ ಯಾಗಿದ್ದು ಮತ್ತು ಮೂರು ವಿದ್ಯಾರ್ಥಿನಿಯರು ಗಾಯಗೊಂಡು ಮುರುಡೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದುರ್ಘಟನೆಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರ ನಿರ್ಲಕ್ಷ ಮತ್ತು ಪ್ರವಾಸೋದ್ಯಮ ಇಲಾಖೆಯೇ ನೇರ ಹೊಣೆ. ಯಾಕೆಂದರೆ ಮುರುಡೇಶ್ವರದ ಬೀಚ್ ಅಲ್ಲಿ ಲೈಫ್ ಗಾರ್ಡ್ ಗಳಿದ್ದು ಅವರಿಗೆ ಸರ್ಕಾರ ಅಗತ್ಯವಿರುವ ಸಲಕರಣೆಗಳನ್ನು ಒದಗಿಸಿರುವುದಿಲ್ಲ. ಮುರುಡೇಶ್ವರದಲ್ಲಿ ಇತರಹ ಘಟನೆಗಳು ಪದೇ ಪದೇ ಸಂಭವಿಸುತ್ತಿದ್ದರು ಸರ್ಕಾರ ಎಚ್ಚೆತ್ತುಕೊಳ್ಳದೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿರುವುದಿಲ್ಲ ಆದರಿಂದ ಈ ಘಟನೆಗೆ ಸರ್ಕಾರವೇ ಹೊಣೆಯಾಗಿದೆ. ಸರ್ಕಾರ ಈಗಾಗಲೇ ಮೃತ ಕುಟುಂಬಕ್ಕೆ ತಲಾ 5 ಲಕ್ಷ ಘೋಷಣೆ ಮಾಡಿದೆ ಆದರೆ ಆ ಕುಟುಂಬಗಳಿಗೆ 50 ಲಕ್ಷ ಪರಿಹಾರ ಘೋಷಣೆ ಮಾಡಬೇಕು. ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಸರ್ಕಾರವೆ ವೆಚ್ಚ ಬರಿಸಬೇಕು ಮತ್ತು 10 ಲಕ್ಷ ಪರಿಹಾರ ನೀಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್, ಕೋಲಾರ ಜಿಲ್ಲಾ ಸಮಿತಿ ಒತ್ತಾಯ ಮಾಡುತ್ತಿದೆ.
ಇದನ್ನೂ ಓದಿ : ಸಾಹಿತ್ಯ ಸಮ್ಮೇಳನ | ಕನ್ನಡ ಸಂಸ್ಕೃತಿಗೆ ವಿರುದ್ಧವಾದ ವೈದಿಕಶಾಹಿ ವಾಸನೆ – ಸಿಪಿಐಎಂ ಖಂಡನೆ
ಮೃತಪಟ್ಟವರ ವಿವರ:-
- ಶ್ರವಂತಿ ಬಿನ್ ಗೋಪಾಲಪ್ಪ, 9ನೇ ತರಗತಿ, 13 ವರ್ಷ, ಪರಿಶಿಷ್ಟ ಪಂಗಡ (ST)ಪೂಜಾರಹಳ್ಳಿ ಗ್ರಾಮ, ಮುಳಬಾಗಿಲು ತಾಲ್ಲೂಕು,
- ಲಾವಣ್ಯ ಬಿನ್ ಚಿನ್ನರೆಡ್ಡೆಪ್ಪ, 9 ನೇ ತರಗತಿ, 13 ವರ್ಷ, ಹೆಬ್ಬಣಿ ಗ್ರಾಮ, ಲಿಂಗಾಯುತ ಜನಾಂಗ
ಮುಳಬಾಗಿಲು ತಾಲ್ಲೂಕು. - ದೀಕ್ಷಾ ಬಿನ್ ಜಯರಾಮಪ್ಪ, 9ನೇ ತರಗತಿ, 13 ವರ್ಷ, ಎನ್.ಗದ್ದೂರು ಗ್ರಾಮ. ಬೋವಿ (SC)ಮುಳಬಾಗಿಲು ತಾಲ್ಲೂಕು.
- ವಂದನಾ ಬಿನ್ ಮುನಿರಾಜು, 9ನೇ ತರಗತಿ, 13 ವರ್ಷ, ದೊಡ್ಡಗುಟ್ಟಹಳ್ಳಿ ಗ್ರಾಮ, ಪರಿಶಿಷ್ಟ ಪಂಗಡ (SC)ಮುಳಬಾಗಿಲು ತಾಲ್ಲೂಕು.
- ಗಾಯಗೊಂಡವರ ವಿವರ:-
- ಯಶೋದ ಬಿನ್ ಆಂಜಪ್ಪ, 9ನೇ ತರಗತಿ (13
ವರ್ಷ), ತಾತಿಘಟ್ಟ ಗ್ರಾಮ, - ವೀಕ್ಷಣ ಬಿನ್ ನರಸಿಂಹ, 9ನೇ ತರಗತಿ (13 ವರ್ಷ),ಬಾಳಸಂದ್ರ ಗ್ರಾಮ, ಮುಳಬಾಗಿಲು ತಾಲ್ಲೂಕು,
- ಲಿಪಿಕ ಬಿನ್ ಮುನಿರಾಜು, 9ನೇ ತರಗತಿ (13ವರ್ಷ), ಕಲಿಕಿರಿ ಗ್ರಾಮ, ಮುಳಬಾಗಿಲು ತಾಲ್ಲೂಕು. ಈ ಮೂರು ವಿದ್ಯಾರ್ಥಿನಿಯರು ಮುರಡೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒತ್ತಾಯಗಳು
- ಸರ್ಕಾರ ಮೃತ ವಿದ್ಯಾರ್ಥಿನಿಯರ ಪ್ರತಿ ಕುಟುಂಬಕ್ಕೆ 50 ಲಕ್ಷ ರೂ ನಷ್ಟ ಪರಿಹಾರ ನೀಡಬೇಕು.
- ಸರ್ಕಾರ ಮೃತ ವಿದ್ಯಾರ್ಥಿನಿಯರ ಪ್ರತಿ ಕುಟುಂಬಕ್ಕೆ ಎರಡು ಎಕರೆ ಭೂಮಿ ಮಂಜೂರಾತಿ ಮಾಡಬೇಕು.
- ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಸರ್ಕಾರವೆ ವೆಚ್ಚ ಬರಿಸಬೇಕು ಮತ್ತು 10 ಲಕ್ಷ ಪರಿಹಾರ ನೀಡಬೇಕು.
- ವಿದ್ಯಾರ್ಥಿನಿಯರನ್ನು ಕಾಪಾಡದ ಲೈಫ್ ಗಾರ್ಡ್ ಗಳ ಮೇಲೆ ಮತ್ತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
- ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರನ್ನು ಕೆಲಸದಿಂದ ವಜಾ ಗೊಳಿಸಬೇಕು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು,
ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ನಿಯಮಗಳಾನುಸಾರ ವಾಗಿ ಪ್ರವಾಸವನ್ನು ಕೈಗೊಳ್ಳಬೇಕು.
ಭಾರತ ವಿದ್ಯಾರ್ಥಿ ಫೆಡರೇಷನ್, ಕೋಲಾರ ಜಿಲ್ಲಾ ಸಮಿತಿ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಎಸ್ ಎಫ್ ಐ ಜಿಲ್ಲಾ ಕಾರ್ಯ ದರ್ಶಿಸುರೇಶ್ ಬಾಬು ವಿ, ಎಸ್ ಎಫ್ ಐ ರಾಜ್ಯದ್ಯಕ್ಷರು ಅಂಬ್ಲಿಕಲ್ ಎನ್ ಶಿವಪ್ಪ ಜಿಲ್ಲಾ ಉಪಾಧ್ಯಕ್ಷರು ಶಶಿ ಕುಮಾರ್, ಎಸ್ ಎಫ್ ತಾಲ್ಲೂಕು ಅಧ್ಯಕ್ಷರು ಅರ್ಚನಾ, ಎಸ್ ಎಫ್ ಐ ತಾಲ್ಲೂಕು ಕಾರ್ಯದರ್ಶಿ ಅಜಯ್, ಎಸ್ ಎಫ್ ಐ ಜಿಲ್ಲಾ ಸಹ ಕಾರ್ಯದರ್ಶಿ ಹರ್ಷಿತ , ಜಿಲ್ಲಾ ಉಪಾಧ್ಯಕ್ಷರು ಲಾವಣ್ಯ, ತಾಲ್ಲೂ ಕು ಉಪಾಧ್ಯಕ್ಷರು ಸುಭಾಷ್, ತಾಲ್ಲೂಕು ಸಮಿತಿ ಸದಸ್ಯರು ನಾಗೇಶ್ ತಿಳಿಸಿದ್ದಾರೆ.
ಇದನ್ನೂ ನೋಡಿ : ಹಾಡು | ‘ಕಮಿಷನರ್ ಅನುಪಮ್ ಅಗರ್ವಾಲ್ ಹಠಾವೊ’ ಸಾಹಿತ್ಯ ಮತ್ತು ಹಾಡು : ಶ್ಯಾಮರಾಜ ಪಟ್ರೆಮೆ Janashakthi Media