‘ಸಿದ್ದರಾಮಯ್ಯ ಸಿಎಂ ಆಗಿ 5 ವರ್ಷ ಇರ್ತಾರೋ ಇಲ್ವೋ ಗೊತ್ತಿಲ್ಲ’ – ಸಿಎಂ ಸಲಹೆಗಾರರಿಂದಲೇ ಹೇಳಿಕೆ

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಐದು ವರ್ಷ ಇರ್ತಾರೋ ಇರಲ್ವೋ ಗೊತ್ತಿಲ್ಲ ಎಂದು ಸ್ವತಃ ಸಿಎಂ ಸಲಹೆಗಾರ, ಶಾಸಕ ಬಿಆರ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಸಿಎಂ ಕುರ್ಚಿ ಬದಲಾವಣೆ ಬಗ್ಗೆ ಮತ್ತೆ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ” ಸಿಎಂ ಸಿದ್ದರಾಮಯ್ಯ ಐದು ವರ್ಷ ಇರ್ತಾರೋ ಇರಲ್ವೋ ಗೊತ್ತಿಲ್ಲ. ಸಿದ್ದರಾಮಯ್ಯ ಐದು ವರ್ಷ ಅಧಿಕಾರದಲ್ಲಿ ಇರಬೇಕು ಅಂತ ಬಯಸುತ್ತೇವೆ. ಆದರೆ, ಹೈಕಮಾಂಡ್ ಏನು ನಿರ್ಧಾರ ಮಾಡುತ್ತೆ ಗೊತ್ತಿಲ್ಲ. ಈ ವಿಚಾರವಾಗಿ ಹೈಕಮಾಂಡ್ ಬೇರೆ ನಿರ್ಧಾರ ತೆಗೆದುಕೊಂಡರೇ ನಾವೇನು ಮಾಡದಕ್ಕೆ ಆಗುತ್ತೆ ಎಂದು ಹೇಳಿದರು.

ಹೈಕಮಾಂಡ್ ಬೇರೆ ನಿರ್ಧಾರ ತೆಗೆದುಕೊಂಡರೆ ನಾವೇನು ಮಾಡುವುದಕ್ಕೆ ಆಗುತ್ತೆ? ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಇನ್ನೂ ದೊಡ್ಡ ಜವಾಬ್ದಾರಿ ನೀಡಬಹುದು. ಆದರೆ, ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕು ಅಂತಾ ಯಾವ ಶಾಸಕರ ಮನಸ್ಸಿನಲ್ಲಿ ಇಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ಇನ್ನೂ ದೊಡ್ಡ ಜವಾಬ್ದಾರಿ ನೀಡಬಹುದು. ಆದರೆ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕು ಅಂತ ಯಾವ ಶಾಸಕರ ಮನಸ್ಸಿನಲ್ಲಿ ಇಲ್ಲ ಎಂದು ಬಿ‌ಆರ್ ಪಾಟೀಲ್ ಹೇಳಿದ್ದಾರೆ.

ಮುಡಾ ಹಗರಣ ನೂರಕ್ಕೆ ನೂರರಷ್ಟು ಮುಕ್ತರಾಗಿ ಸಿಎಂ ಹೊರ ಬರ್ತಾರೆ ಎಂದ ಅವರು ಹಗರಣಗಳು ಬರೀ ನಮ್ಮ ಕಾಲದಲ್ಲಿ ಮಾತ್ರವಲ್ಲ ಎಲ್ಲಾ ಸರ್ಕಾರದಲ್ಲಿ ಆಗಿವೆ. ವಕ್ಪ್ ಬೋರ್ಡ್ ವಿಚಾರವಾಗಿ ಬಿಜೆಪಿ ಸಹ ನೋಟಿಸ್ ನೀಡಿತ್ತು. ಇದು ದುರುದ್ದೇಶದಿಂದ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುಬೇಕು, ಕೆಟ್ಟ ಹೆಸರು ತರಬೇಕು ಅಂತ ಮಾಡುತ್ತಿದ್ದಾರೆ.

ಬಿಜೆಪಿಯವರು ಒಂದಾಗಿ ವಕ್ಪ್ ಬೋರ್ಡ್ ಜನಜಾಗೃತಿ ಮಾಡಲಿ. ಅವರಲ್ಲೇ  ಒಡಕಿದ್ದು ನಮ್ಮನ್ನೇನು ನೋಡ್ತಾರೆ. ಇನ್ನೂ ಎಷ್ಟು ಬಣ ಇರುತ್ತೆ ಗೊತ್ತಿಲ್ಲ. ಯಾರು ದೆಹಲಿಯಲ್ಲಿ ಕುಳಿತು  ಯಾರಿಗೆ ಆಪರೇಟಿಂಗ್ ಮಾಡುತ್ತಿದ್ದಾರೋ. ಯಾರ್ಯಾರ  ಕೈ ಚಳಕ ಎಲ್ಲೆಲಿದೆಯೋ ಗೊತ್ತಿಲ್ಲ. ಮುರಳಿ ಮನೋಹರ ಜೋಶಿ ಅಂತಹವರನ್ನೇ ಮೂಲೆಗುಂಪು ಮಾಡಿದರು ಇವರೆಲ್ಲಾ ಯಾವ ಲೆಕ್ಕ ಎಂದು ಬಿ‌ಆರ್ ಪಾಟೀಲ್ ಬಿಜೆಪಿ ನಾಯಕರನ್ನು ಲೇವಡಿ ಮಾಡಿದರು.

 

Donate Janashakthi Media

Leave a Reply

Your email address will not be published. Required fields are marked *