ವಿಜಯಪುರ: ಎಸ್‌ಎಸ್ಎಲ್ಸಿ ಓದುತ್ತಿರುವ ಬಾಲಕಿಯರಿಬ್ಬರಿಗೆ ಬಲವಂತವಾಗಿ ತಾಳಿ ಕಟ್ಟಿದ ಯುವಕರು

Please follow and like us:
ವಿಜಯಪುರ: ಎಸ್‌ಎಸ್ಎಲ್ಸಿ ಓದುತ್ತಿರುವ ಬಾಲಕಿಯರಿಬ್ಬರಿಗೆ ಇಬ್ಬರು ಯುವಕರು ಬಲವಂತವಾಗಿ ತಾಳಿ ಕಟ್ಟಿ ವಿಡಿಯೋ ವೈರಲ್ ಮಾಡಿದ 2 ಪ್ರಕರಣಗಳು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ  ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಎರಡು ಪ್ರತ್ಯೇಕ ಪ್ರಕರಣಗಳು ನಡೆದಿದ್ದು, ಮುದ್ದೇಬಿಹಾಳ ಠಾಣೆಗೆ ಅಪ್ರಾಪ್ತ ಬಾಲಕಿಯರು ಗುರುವಾರ ರಾತ್ರಿ ದೂರು ನೀಡಿದ್ದಾರೆ. ತಲೆಮರೆಸಿಕೊಂಡಿರುವ ಯುವಕರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿಯಿಂದ ಹಿಂದಿ ಪುಟ: ಕರವೇ ಅಧ್ಯಕ್ಷ ನಾರಾಯಣಗೌಡ ಆಕ್ರೋಶ

ನವೆಂಬರ್ 24ರಂದು ಸರ್ಕಾರಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಗೆ ಶಾಲೆಯ ಕಾಂಪೌಂಡ್‌ ಬಳಿ ಮೌನೇಶ ಹನುಮಂತ ಮಾದರ ಎಂಬಾತ ಬಲವಂತವಾಗಿ ತಾಳಿ ಕಟ್ಟಿದ್ದಾನೆ. ಸೆಪ್ಟೆಂಬರ್ 1ರಂದು ಸರ್ಕಾರಿ ಆಸ್ಪತ್ರೆ ಸಮೀಪ ಖಾಸಗಿ ಶಾಲೆಯೊಂದರ ವಿದ್ಯಾರ್ಥಿನಿಗೆ ಸಂಗಮೇಶ ಬಡಪ್ಪ ಜುಂಜುವಾರ ಎಂಬಾತ ಬಲವಂತವಾಗಿ ತಾಳಿ ಕಟ್ಟಿದ್ದಾನೆ.

ಸಂಗಮೇಶ ಕೃತ್ಯ ನಡೆಸಿದ ಕೆಲವು ದಿನಗಳ ನಂತರ ಮೌನೇಶ ಇಂತಹ ಕೃತ್ಯ ಎಸಗಿದ್ದಾನೆ. ತಾಳಿ ಕಟ್ಟುವ ವಿಡಿಯೋ ಚಿತ್ರೀಕರಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಬಾಲಕಿಯರು ಒಂದೇ ಸಮುದಾಯದವರಾಗಿದ್ದು, ತಾಳಿ ಕಟ್ಟಿ ಮದುವೆಯಾಗಿದ್ದೇವೆ ಎಂದು ಹೇಳಿದಾಗ ಗಾಬರಿಯಿಂದ ತಾಳಿ ಕಿತ್ತೆಸೆದು ಸ್ಥಳದಿಂದ ಓಡಿ ಹೋಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಗುರುವಾರ ಬಾಲಕಿಯರು ದೂರು ನೀಡಿದ್ದು, ಅಪರಾಧ ವಿಭಾಗದ ಮಹಿಳಾ ಪಿಎಸ್‌ಐ ಆರ್.ಎಲ್‌. ಮನ್ನಾಭಾಯಿ ಅವರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ನೋಡಿ : ಮಂಗಳೂರು | ನಗರ ಪೊಲೀಸ್ ಕಮೀಷನರ್ ಹಟಾವೋ ಎಂದ ಯುವಜನ ಕಾರ್ಯಕರ್ತರುJanashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *