ಪ್ರಜಾಧ್ವನಿ ಕರ್ನಾಟಕ ನೇತೃತ್ವದಲ್ಲಿ ರಾಷ್ಟ್ರ ಧ್ವಜ ಗೌರವ ಯಾತ್ರೆಗೆ ಚಾಲನೆ

ಸುಳ್ಯ : ಪ್ರಜಾಧ್ವನಿ ಕರ್ನಾಟಕ ನೇತೃತ್ವದಲ್ಲಿ ರಾಷ್ಟ್ರ ಧ್ವಜ ಗೌರವ ಯಾತ್ರೆಗೆ ಚಾಲನೆ ನೀಡಲಾಯಿತು.

ಪ್ರಜಾಧ್ವನಿ ಕರ್ನಾಟಕ ವತಿಯಿಂದ ಸಂವಿಧಾನದ ಸಮರ್ಪಣಾ ದಿನ ನೆನಪಿನ ಪ್ರಯುಕ್ತ ರಾಷ್ಟ್ರ ಧ್ವಜ ಗೌರವ ಯಾತ್ರೆ ಸುಳ್ಯ ತಾಲೂಕಿನಾದ್ಯಂತ ನಡೆಯಲಿದ್ದು ಸಂಪಾಜೆ ಗೇಟ್ ಬಳಿಯಿಂದ ನ.27 ರಂದು ಚಾಲನೆ ನೀಡಲಾಯಿತು. ಸುಳ್ಯ ತಹಶೀಲ್ದಾರ್ ಮಂಜುಳಾ ಎಮ್. ರಾಷ್ಟ್ರ ಧ್ವಜಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿ ಶುಭಹಾರೈಸಿದರು.

ಇದನ್ನೂ ಓದಿ : ಸುಳ್ಯ| ಸಂವಿಧಾನದ ಸಮರ್ಪಣಾ ದಿನದ ಸ್ಮರಣೆಗಾಗಿ ರಾಷ್ಟ್ರಧ್ವಜ ಗೌರವ ಯಾತ್ರೆ

ಈ ವೇಳೆ ಸಂಚಾಲಕರಾದ ಗೋಪಾಲ ಪೆರಾಜೆ, ಪಿ.ಎಸ್ ಗಂಗಾಧರ, ಪಿ.ಸಿ ಜಯರಾಮ, ಸಂಪಾಜೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಅಶೋಕ್‌ ಎಡಮಲೆ, ಭವಾನಿ ಶಂಕರ್ ಕಲ್ಮಡ್ಕ ,ಭರತ್‌ ಕುಕ್ಕುಜಡ್ಕ, ರೈತ ಸಂಘ ಜಿಲ್ಲಾ ಪದಾಧಿಕಾರಿ ದಿವಾಕರ ಪೈ, ಅಶ್ರಫ್, ಕರ್ನಾಟಕ ಸರಕಾರ ಕಟ್ಟಡ & ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಂಘದ ಸದಸ್ಯ ಕೆ. ಪಿ.ಜಾನಿ, ಸುಳ್ಯ ಕಂದಾಯ ನಿರೀಕ್ಷಕ ಅವಿನ್ ರಂಗತ್ತ ಮಲೆ, ಲಕ್ಷ್ಮೀಶ ಗಬಲಡ್ಕ, ಆನಂದ ಬೆಳ್ಳಾರೆ, ಅಚ್ಚುತಾ ಮಲ್ಕಜೆ, ಮಾಧವ ಗೌಡ ಸುಳ್ಯಕೋಡಿ, ಮಹೇಶ್ ಬೆಳ್ಳಾಲ್ಕರ್, ಬಿಟ್ಟಿ ನೆಡು ನಿಲಂ, ಕೇಶವ ಮೊರಂಗಲ್ಲು, ನಂದ ರಾಜ್ ಸಂಕೇಶ್, ಬೆಟ್ಟ ಜಯರಾಮ್ ಭಟ್, ಸುಳ್ಯ ನಗರ ಪಂಚಾಯತ್‌ ಸದಸ್ಯ ಕೆ.ಎಸ್ ಉಮ್ಮರ್, ಮಹಮ್ಮದ್ ಕುಂಞ ಗೂನಡ್ಕ, ಅಬುಶಾಲಿ, ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು, ಯು. ಬಿ ಚಕ್ರಪಾಣಿ, ಕೊಡಗು ಸಂಪಾಜೆ ವಲಯ ಕಾಂಗ್ರೆಸ್‌ ಅಧ್ಯಕ್ಷ ಸುರೇಶ್ ಪಿ.ಎಲ್, ರಿತಿನ್ ಡೆಮ್ಮಲೆ, ವಸಂತ ಪೆಲ್ಲ ಡ್ರೈ, ಸಂಪಾಜೆ ಗ್ರಾ.ಪಂ ಸದಸ್ಯರಾದ ಲಿ ಮೊನಾಲಿಸಾ, ಸುಶೀಲ, ಪ್ರಮೀಳಾ ಪೆಲ್ಲಡ್ಕ ಸೌಮ್ಯ ಕಡೆ ಪಾಲ, ಮೊದಲಾದವರು ಉಪಸ್ಥಿತರಿದ್ದರು.

ಶೌವಾದ್‌ ಗೂನಡ್ಕ ಸಂವಿಧಾನ ಪೀಠಿಕೆಯನ್ನು ವಾಚಿಸಿದರು. ಕಾಂತಿ ಬಿ. ಎಸ್ ಸ್ವಾಗತಿಸಿ, ಲೂಕಾಸ್‌ ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ನೋಡಿ : ಕೇಂದ್ರ ರಾಜ್ಯ ಸರ್ಕಾರಗಳ ರೈತ – ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಐತಿಹಾಸಿಕ ಹೋರಾಟಕ್ಕೆ ಸಿದ್ದತೆ

Donate Janashakthi Media

Leave a Reply

Your email address will not be published. Required fields are marked *