ಯಾದಗಿರಿ| ವಿಕಲಚೇತನ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; ಪ್ರಕರಣ ದಾಖಲು

Please follow and like us:
ಯಾದಗಿರಿ: ಶಹಾಪುರಃ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ವಿಕಲಚೇತನ ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ. ಗೋಗಿ ಠಾಣೆ ವ್ಯಾಪ್ತಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅದೇ ಗ್ರಾಮದ ಯುವಕ ಸಂತೋಷ (29) ಅತ್ಯಾಚಾರ ಎಸಗಿದ ವ್ಯಕ್ತಿ. ಮನೆಯಲ್ಲಿ ಯಾರು ಇಲ್ಲದ ವೇಳೆ ಯುವಕ ಮನೆಗೆ ನುಗ್ಗಿ ವಿಕಲಚೇತನ ಬಾಲೆಗೆ ಬೆದರಿಕೆಯೊಡ್ಡಿ ಅತ್ಯಾಚಾರ ಎಸಗಿರುತ್ತಾನೆಂದು ಸಂತ್ರಸ್ತೆಯ ತಾಯಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನ ಕಾಲದ ಖರೀದಿ ಹಗರಣ: ‘ಬೆಂದ ಮನೆಯಲ್ಲಿ ಗಳ ಇರಿ’ದಿರುವ ಬಿಜೆಪಿ ನಾಯಕ ಗಣ

ಘಟನೆ ಕುರಿತು ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿಕೊಂಡು ತನಿಖೆಕೈಗೊಳ್ಳಲಾಗಿದೆ ಎಂದು ಗೋಗಿಠಾಣೆ ಪಿಎಸ್ಐ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ನೋಡಿ: ವಿಕ್ರಂಗೌಡ ಶೂಟೌಟ್ ಪ್ರಕರಣ – ನ್ಯಾಯಾಂಗ ತನಿಖೆಗೆ ಒಪ್ಪಿಸಿ – ಮಾಜಿ ನಕ್ಸಲರ ಆಗ್ರಹJanashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *