ದೊಡ್ಡಬಳ್ಳಾಪುರ | ಕೊಚ್ಚೆ ನೀರು ರಸ್ತೆಗೆ ; ದಲಿತರ ಕಾಲೋನಿಯನ್ನು ನಿರ್ಲಕ್ಷಿಸುತ್ತಿರುವ ಗ್ರಾಮ ಪಂಚಾಯಿತಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ ಹದ್ರಿಪುರ ಗ್ರಾಮದಲ್ಲಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಗ್ರಾಮದಲ್ಲಿ ಅನಾರೋಗ್ಯ ಸೃಷ್ಠಿಗೆ ಕಾರಣವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾದ ಹದ್ರಿಪುರ ಗ್ರಾಮದಲ್ಲಿ ಚರಂಡಿ ನಿರ್ಮಿಸಿ ಎರಡೂವರೆ ದಶಕಕ್ಕೂ ಹೆಚ್ಚಿನ ಕಾಲವಾಗಿದ್ದು, ಅಧಿಕಾರಿಗಳು ಮತ್ತು ಸ್ಥಳೀಯ ಸದಸ್ಯರ ನಿರ್ಲಕ್ಷ್ಯದಿಂದ ದಲಿತರು ವಾಸಿಸುವ ಪ್ರದೇಶದಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ, ದಲಿತರು ವಾಸಿಸುವ ಪ್ರದೇಶ ಎಂಬ ಕಾರಣಕ್ಕೆ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ದಲಿತ ನಿವಾಸಿಗಳು ಆರೋಪವಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಹಾದ್ರಿಪುರ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದ ಸುಮಾರು 150ಕ್ಕೂ ಹೆಚ್ಚು ಮನೆಗಳಿವೆ. 25 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ತಾತ್ಕಾಲಿಕವಾಗಿ ‘ವಿ’ ಆಕಾರದಲ್ಲಿ ಚರಂಡಿ ನಿರ್ಮಿಸಲಾಗಿತ್ತು. ಗ್ರಾಮ ಪಂಚಾಯಿತಿಯಿಂದ ಸೂಕ್ತ ನಿರ್ವಹಣೆ ಇಲ್ಲದ ಕಾರಣಕ್ಕೆ ಬಹುತೇಕ ಕಡೆ ಹೂಳು ತುಂಬಿಕೊಂಡಿದೆ. ಇದರಿಂದಾಗಿ, ಚರಂಡಿಗಳು ಕಟ್ಟಿಕೊಂಡು ಸೊಳ್ಳೆಗಳ ಹೆಚ್ಳಳಕ್ಕೆ ಕಾರಣವಾಗಿದೆ. ಕೆಲವೆಡೆ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ನಿವಾಸಿಗಳು ಮೂಗು ಮುಚ್ಚಿಕೊಂಡು ಸಹಿಸಿಕೊಳ್ಳಬೇಕಾಗಿದೆ. ಕೊಳಚೆ

ಳಚೆ

ಇದನ್ನೂ ಓದಿ: ಮಣಿಪುರ| ಬಿಜೆಪಿಗೆ ನೀಡಿದ ಬೆಂಬಲ ಹಿಂಪಡೆದ ನ್ಯಾಷನಲ್ ಜನತಾ ಪಕ್ಷ

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಗ್ರಾಮದ ನಿವಾಸಿ ರವಿಕುಮಾರ್, “ಕಳೆದ ಒಂದು ವರ್ಷದಿಂದ ನಮ್ಮ ಮನೆ ಮುಂದೆ ಚರಂಡಿ ನೀರು ಕಟ್ಟಿಕೊಂಡು ರಸ್ತೆಗೆ ಬರುತ್ತಿದೆ. ಹಲವರು ತಾವು ಮನೆ ನಿರ್ಮಿಸುವ ಸಮಯದಲ್ಲಿ ಚರಂಡಿಯನ್ನು ನೆಲಸಮ ಮಾಡಿದ್ದಾರೆ. ಮಳೆ ಬಂದರೆ ಮೊಳಕಾಲುದ್ದ ನೀರು ನಿಲ್ಲುತ್ತದೆ. ಇದೇ ಪ್ರದೇಶದಲ್ಲಿ ಸುಮಾರು 10ಕ್ಕೂ ಹೆಚ್ಚು ಜನ ಸಣ್ಣಸಣ್ಣ ಮಕ್ಕಳು ಹಾಗೂ ವೃದ್ಧರಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿದ್ದು, ವಾಟ್ಸಾಪ್ ಮೂಲಕ ಸಮಸ್ಯೆಯ ಫೋಟೋ ಕಳುಹಿಸಿದ್ದೇನೆ. ಇಬ್ಬರೂ ಸಹ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಗ್ರಾಮ ಪಂಚಾಯಿಯಲ್ಲಿ ‘ಇ’ ಖಾತೆ ಹಾಗೂ ಕಂದಾಯ ಸಂಗ್ರಹ ಬಿಟ್ಟು ಬೇರೆ ಕೆಲಸಗಳೇ ಆಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಧ್ಯಕ್ಷರು ‘ನಮ್ಮ ಬಳಿ ಚರಂಡಿ ನಿರ್ಮಿಸುವಷ್ಟು ಅನುದಾನ ಇಲ್ಲ’ ಎಂದು ಗದರಿಸಿ ಕಳುಹಿಸುತ್ತಾರೆ” ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು. ಕೊಳಚೆ

“ನಮ್ಮದೇ ಪಂಚಾಯಿತಿಯ ಬೇರೆ ಊರಿನ ಸದಸ್ಯರು ಅನುದಾನ ಬಿಡುಗಡೆ ಮಾಡಿಸಿಕೊಂಡು ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ನಮ್ಮ ಊರಿನ ಮೂವರು ಸದಸ್ಯರಿಗೆ ಗ್ರಾಮದ ಮೇಲೆ ಕಾಳಜಿ ಇಲ್ಲ. ನಮ್ಮ ಊರಿನ ಸದಸ್ಯರೇ ಈಗ ಅಧ್ಯಕ್ಷರಾಗಿದ್ದರೂ ಪ್ರಯೋಜನವಾಗುತ್ತಿಲ್ಲ. ಮುಖ್ಯವಾಗಿ, ಪ್ರಬಲ ಜಾತಿಗೆ ಸೇರಿದ ಸದಸ್ಯರು ದಲಿತರ ಪ್ರದೇಶವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ” ಎಂದು ಹೇಳಿದರು.

ಈ ಘಟನೆ ಕುರಿತು ಪಿಡಿಒ ಶಿವಾನಂದ್ ಪ್ರತಿಕ್ರಿಯಿಸಿದ್ದು,  ”ಅಲ್ಲಿ ಚರಂಡಿ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತದೆ. ಈಗಿರುವ ಚರಂಡಿ ಮೇಲೆ ಕೆಲ ನಿವಾಸಿಗಳು ಕಲ್ಲಿನ ಚಪ್ಪಡಿ ಕಲ್ಲು ಹಾಕಿದ್ದಾರೆ. ಅಲ್ಲಿ ಸ್ವಚ್ಛತೆ ಮಾಡಲು ನಮಗೆ ಅವಕಾಶ ಸಿಗುವುದಿಲ್ಲ. ಅವರವರ ಮನೆ ಮುಂದಿನ ಚಪ್ಪಡಿ ತೆರವುಗೊಳಿಸಕೊಟ್ಟರೆ ನಾವು ಕೆಲಸ ಮಾಡಲು ಸಾಧ್ಯ. ಚಪ್ಪಡಿ ಇಲ್ಲದಿರುವ ಕಡೆ ನಾವು ಸ್ವಚ್ಛ ಮಾಡುತ್ತಿದ್ದೇವೆ. ಚಪ್ಪಡಿ ಇರುವ ಕಡೆ ನಿವಾಸಿಗಳೆ ನಮಗೆ ಸಹಾಯ ಮಾಡಬೇಕು” ಎಂದು ಹೇಳಿದರು.

“ಸಮಸ್ಯೆ ನಮಗೆ ಮನವರಿಕೆ ಆಗಿದೆ. ಮುಂದೆ ಅಲ್ಲಿ ಸಿಸಿ ಚರಂಡಿ ನಿರ್ಮಿಸಬೇಕು. ಮುಂದಿನ ದಿನಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಆದರೆ, ರಸ್ರೆಗಳು ಅಲ್ಲಿ ಕಿರಿದಾಗಿದ್ದು ಸಿಸಿ ಚರಂಡಿ ನಿರ್ಮಿಸುವಷ್ಟು ಸ್ಥಳಾವಕಾಶವಿಲ್ಲ. ಸಮಸ್ಯೆ ಇರುವ ಜಾಗದಲ್ಲಿ ಚರಂಡಿ ನಿರ್ಮಿಸಬಹುದು. ಈ ಬಗ್ಗೆ ಸ್ಥಳೀಯ ನಿವಾಸಿಗಳ ಗಮನಕ್ಕೆ ತಂದಿದ್ದೇನೆ. ದಲಿತರ ಪ್ರದೇಶ ಎನ್ನುವ ಕಾರಣಕ್ಕೆ ನಿರ್ಲಕ್ಷ್ಯ ಮಾಡುತ್ತಿಲ್ಲ” ಎಂದು ಅವರು ಹೇಳಿದರು.

ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್‌ ಮಾತನಾಡಿ, “ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿವೆ. ಚರಂಡಿ ಮೇಲೆ ಚಪ್ಪಡಿ ಹಾಕಿರುವುದಕ್ಕೆ ಅದು ಬ್ಲಾಕ್ ಆಗಿದೆ. ನಾವು ಸ್ಕ್ಯಾವೆಜಿಂಗ್ ಮಿಷನ್ ಮೂಲಕ ಅದನ್ನು ಸ್ವಚ್ಛ ಮಾಡಲು ಯೋಜಿಸುತ್ತಾ ಇದ್ದೇವೆ. ಆದಷ್ಟು ಬೇಗನೆ ಸಮಸ್ಯೆಯನ್ನು ಬಗೆಹರಿಸುತ್ತೇವೆ. ನಮ್ಮದು ‘ಸಿ’ ಗ್ರೇಡ್ ಪಂಚಾಯತಿಯಾಗಿದ್ದು, ಸರ್ಕಾರದಿಂದ ಅನುದಾನ ಬರುತ್ತಿಲ್ಲ. ಅನುದಾನಗಳು ಬಂದರೆ ಹೊಸದಾಗಿ ಚರಂಡಿ ನಿರ್ಮಿಸಿ ಶಾಸ್ವತ ಪರಿಹಾರ ಮಾಡುತ್ತೇವೆ” ಎಂದು ಹೇಳಿದರು. ದಲಿತರು ವಾಸಿಸುವ ಪ್ರದೇಶ ಎನ್ನುವ ಕಾರಣಕ್ಕೆ ಯಾವುದೆ ನಿರ್ಲಕ್ಷ್ಯ ಮಾಡುತ್ತಿಲ್ಲ, ಅಂತಹ ಆರೋಪಗಳು ಸತ್ಯಕ್ಕೆ ದೂರವಾದ ಮಾತುಗಳಾಗಿವೆ ಎಂದು ಅವರು ಹೇಳಿದರು.

ಇದನ್ನೂ ನೋಡಿ: ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ : ಆರೋಪಗಳಿಗೆ ಸಿಕ್ಕಿದ್ದು ತಾತ್ಕಾಲಿಕ ಜಾಮೀನು Janashakthi Media

Donate Janashakthi Media

Leave a Reply

Your email address will not be published. Required fields are marked *