ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ; ಇಬ್ಬರು‌ ಯುವಕರು ಅರೆಸ್ಟ್

Please follow and like us:
ಬೆಂಗಳೂರು: ಇಬ್ಬರು ಯುವಕರು ಪಕ್ಕದ ಮನೆಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ದಾರುಣ ಘಟನೆ  ಬೆಂಗಳೂರಿನ ಹೆಬ್ಬಗೋಡಿಯಲ್ಲಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕಿಯ ಪಕ್ಕದ ಮನೆಯ ಶ್ರೀಕಂಠ ಹಾಗೂ ವಿಜಯ್ ಎಂಬ ಇಬ್ಬರು ಯುವಕರು 15 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿ ರಾತ್ರಿ ಊಟ ಮಾಡಿ ಮನೆಯಿಂದ ಹೊರಬಂದಿದ್ದಳು. ಆಕೆಗೆ ಪಕ್ಕದ ಮನೆ ಯುವಕರು ಚಾಕೊಲೇಟ್ ಕೊಡುವುದಾಗಿ ಪುಸಲಾಯಿಸಿದ್ದಾರೆ. ಆಗ ಆ ಬಾಲಕಿ ಒಪ್ಪದಿದ್ದಾಗ ದೇವಸ್ಥಾನದ ಬಳಿ ಎಳೆದೊಯ್ದು ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಬಾಲಕಿಯ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಟ್ಟೆ ಬಿಚ್ಚಲು ಯತ್ನಿಸಿದಾಗಿ ಬಾಲಕಿಯು ಜೋರಾಗಿ ಕಿರುಚಿಕೊಂಡಿದ್ದಾಳೆ.

ಇದನ್ನೂ ಓದಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿತ; 30 ಜನರಿಗೆ ಗಾಯ

ಬಾಲಕಿ ಕಿರುಚುತ್ತಿದ್ದಂತೆ ದೇವಸ್ಥಾನದ ಆವರಣದಲ್ಲಿದ್ದ ಜನರು ಬಂದಿದ್ದು, ಇದರಿಂದ ಭಯಗೊಂಡ ಆರೋಪಿಗಳು ಬಾಲಕಿಯನ್ನು ಅಲ್ಲೇ ಬಿಟ್ಟು ಎಸ್ಕೆಪ್ ಆಗಿದ್ದಾರೆ. ಬಳಿಕ ಬಾಲಕಿ ನೇರವಾಗಿ ಮನೆಗೆ ಬಂದು ತಾಯಿಯ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.

ಕೂಡಲೇ ಬಾಲಕಿಯ ತಾಯಿ ಈ ಪ್ರಕರಣದ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳಾದ ಶ್ರೀಕಂಠ ಹಾಗೂ ವಿಜಯ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಇದನ್ನೂ ನೋಡಿ: ಪ್ರತ್ಯೇಕ ‘ಆದಿವಾಸಿ ನಿಗಮ’ ಸ್ಥಾಪನೆಗೆ ಶೀಘ್ರವೇ ಕ್ರಮ : ಸಿಎಂ ಸಿದ್ದರಾಮಯ್ಯ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *