ಹಿರಿಯ ಸಾಹಿತಿ ಬಂಜಗೆರೆ, ಪ್ರಾಧ್ಯಾಪಕ ಡಾ.ಡಿ.ಡೊಮಿನಿಕ್, ಲೇಖಕ ಪ್ರೊ. ಆರ್.ಕೆ. ಹುಡಗಿ ಸೇರಿ 15 ಮಂದಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ‘ವಾರ್ಷಿಕ’ ಪ್ರಶಸ್ತಿ, ‘ಸಾಹಿತ್ಯ’ ಪ್ರಶಸ್ತಿ ಮತ್ತು 2021ನೇ ಸಾಲಿನ ಪುಸ್ತಕ ಪ್ರಶಸ್ತಿಗಳು ಪುಕಟಗೊಂಡಿದ್ದು, ಅಕಾಡೆಮಿ ಪ್ರಶಸ್ತಿಗೆ ಅಗ್ರಹಾರ ಕೃಷ್ಣಮೂರ್ತಿ, ರಂಜಾನ್ ದರ್ಗಾ, ಬಂಜಗರ ಜಯಪುಕಾಶ್ ಸೇರಿದಂತೆ 15 ಸಾಹಿತಿಗಳು ಆಯ್ಕೆಯಾಗಿದ್ದಾರೆ. ವಾರ್ಷಿಕ

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್,  ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.  2022ನೇ ಸಾಲಿನ ವರ್ಷದ ಗೌರವ ಪ್ರಶಸ್ತಿಗೆ ಆರ್.ಕೆ.ಹುಡಗಿ, ಅಗ್ರಹಾರ ಕೃಷ್ಣಮೂರ್ತಿ, ಇಂದಿರಾ ಹೆಗಡೆ, ರಂಜಾನ್‌ದರ್ಗಾ ಮತ್ತು ತುಂಬಾಡಿ ರಾಮಯ್ಯ ಅವರು ಆಯ್ಕೆಗೊಂಡಿದ್ದಾರೆ. ಪ್ರಶಸ್ತಿಯು ತಲಾ 50 ಸಾವಿರ ರು. ನಗದು, ಪ್ರಶಸ್ತಿ ಫಲಕ, ಪುಮಾಣ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದರು. ವಾರ್ಷಿಕ

“2022ನೇ ಸಾಲಿನ ‘ಸಾಹಿತ್ಯ ಶ್ರೀ’ ಪ್ರಶಸ್ತಿಗೆ ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 5 ಪ್ರಶಸ್ತಿ ಮತ್ತು ಸೃಜನೇತರ ಸಾಹಿತ್ಯ ಕ್ಷೇತ್ರದ ಸಾಧಕರಿಗೆ 4 ಮತ್ತು ಸಾಹಿತ್ಯ ಪರಿಚಾರಿಕೆಗೆ 1 ಪ್ರಶಸ್ತಿ ಸೇರಿದಂತೆ ಒಟ್ಟು 10 ಸಾಧಕರಿಗೆ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಿರಿಯ ಸಾಹಿತಿ ಬಂಜಗೆರೆ ಜಯಪಕಾಶ್‌, ರೂಮಿ ಹರೀಶ್, ಡಾ.ಎಂ.ಜಿ.ಮಂಜುನಾಥ, ದಾಸನೂರು ಕೂಸಣ್ಣ, ಡಾ.ರಾಜಶೇಖರ ಹತಗುಂದಿ, ಎಚ್.ಎನ್.ಆರತಿ, ಡಾ.ಸಾರಿಕಾ ದೇವಿ ಕಾಳಗಿ, ಮಹೇಶ್ ಹರವೆ, ಅನಸೂಯ ಕಾಂಬ್ಳೆ, ಚಲಂ ಹಾಡಹಳ್ಳಿ ಅವರನ್ನು ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಈ ಪಶಸ್ತಿಯು ತಲಾ 25 ಸಾವಿರ ರು.ನಗದು, ಪ್ರಶಸ್ತಿ ಫಲಕ, ಪುಮಾಣ ಪತ್ರವನ್ನು ಒಳಗೊಂಡಿದೆ” ಎಂದು ಹೇಳಿದರು. ವಾರ್ಷಿಕ

ಇದನ್ನೂ ಓದಿ: ಪ್ಯಾಲೆಸ್ತೀನ್ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಎಫ್‌ಐಆರ್ – ಪೊಲೀಸರ ಕ್ರಮಕ್ಕೆ ಆಕ್ರೋಶ

ಪುಸ್ತಕ ಬಹುಮಾನ: 2021ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ವಿವಿಧ 19 ಸಾಹಿತ್ಯ ಪುಕಾರಗಳ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಚೇಮನಹಳ್ಳಿ ರಮೇಶ್‌ಬಾಬು-ರಾಗಿ ಕಾಳು(ಕಾವ್ಯ), ಡಾ.ಶೈಲೇಶ್ ಕುಮಾರ್ – ದಡ ಸೇರಿದ ಕನಸು (ನವ ಕವಿಗಳ ಪ್ರಥಮ ಸಂಕಲನ), ಡಾ.ಗಜಾನನ ಶರ್ಮ- ಚನ್ನ ಭೈರಾದೇವಿ ಕರಿಮೆಣಸಿನ ರಾಣಿಯ ಅಕಳಂಕ ಚರಿತೆ (ಕಾದಂಬರಿ), ಜಿ.ವಿ.ಆನಂದಮೂರ್ತಿ- ಗುಣಸಾಗರಿ ಮತ್ತು ಇತರ ಕತೆಗಳು (ಸಣ್ಣಕತೆ), ಮಹಾ ಬಿ.ಆರ್.ಪೊಲೀಸಪಾಟೀಲ- ಮಹಿಮ ಎಡೆಯೂರು ಸಿದ್ದಲಿಂಗ ಶಿವಯೋಗಿ (ನಾಟಕ), ಬಿ.ವಿ.ಭಾರತಿ- ಎಲ್ಲಿಂದಲೋ ಬಂದವರು (ಲಲಿತ ಪ್ರಬಂಧ), ಡಾ.ಎಸ್.ಬಿ. ಪದ್ಮಪುಸಾದ್- ಬುದ್ಧ ಭಕ್ತರ ನಾಡಿನಲ್ಲಿ (ಪವಾಸ ಸಾಹಿತ್ಯ), ಡಾ.ಡಿ.ಡೊಮಿನಿಕ್- ಅಕ್ಕಮ್ (ಜೀವನ ಚರಿತ್ರೆ/ಆತ್ಮಕಥ) ಆಯ್ಕೆ ಮಾಡಲಾಗಿದೆ.

ಡಾ.ಎಚ್.ಎಸ್.ಸತ್ಯನಾರಾಯಣ – ಕಣೋಟ (ಸಾಹಿತ್ಯ ವಿಮರ್ಶ),ಸಿ.ವಿ.ಶೇಷಾದ್ರಿ ಹೊಳವನಹಳ್ಳಿ ವಜ್ರದ ಕಿರೀಟ (ಮಕ್ಕಳ ಸಾಹಿತ್ಯ), ಡಾ.ವಿ.ಎಸ್.ಕಿರಣ್ – ಸರಂಡಿಪಿಟಿ ವೈದ್ಯಲೋಕದ ಅದ್ಭುತ ಆಕಸ್ಮಿಕಗಳು (ವಿಜ್ಞಾನ ಸಾಹಿತ್ಯ), ಡಾ.ಕೆ.ಎಸ್.ನಾಗರಾಜ- ಸಂಕೇತ ವ್ಯಾಕರಣ ಮತ್ತು ಪದಕೋಶ (ಮಾನವಿಕ), ಡಾ.ಎ.ಎಸ್.ಪುಭಾಕರ್- ಚಹರೆಗಳೆಂದರೆ ಗಾಯಗಳೂ ಹೌದು (ಸಂಶೋಧನೆ), ದಾದಾಪೀರ್ ಜೈಮನ್ – ಪರ್ದಾ ಮತ್ತು ಪಾಲಿಗಮಿ (ಅನುವಾದ 1 ಭಾರತೀಯ ಭಾಷೆ ಯಿಂದ ಕನ್ನಡಕ್ಕೆ), ಮುಜಾಫರ್ ಅಸಾದಿ- ಅಲ್ಪಸಂಖ್ಯಾತರುಮತ್ತು ಜಾತಿವ್ಯವಸ್ಥೆ (ಅಂಕಣ ಬರಹ/ ವೈಚಾರಿಕ ಬರಹ), ಡಾ.ಜಿ.ಕೃಷ್ಣಪ್ಪ-ವಚನ ದೀಪಿಕೆ (ಸಂಕೀರ್ಣ) ಮತ್ತು ಯಶಸ್ವಿನಿ ಕದ್ರಿ – ಊರು ಹೇಳದ ಕತೆ (ಲೇಖಕರ ಮೊದಲ ಸ್ವತಂತ್ರ ಕೃತಿ ಬಹುಮಾನಕ್ಕೆ ಆಯ್ಕೆಯಾಗಿವೆ. ಈ ಪುಸ್ತಕ ಪ್ರಶಸ್ತಿಯು ತಲಾ 25 ಸಾವಿರ ರು.ನಗದು, ಫಲಕ, ಪ್ರಮಾಣ ಪತ್ರ ಒಳಗೊಂಡಿದೆ ಎಂದು ತಿಳಿಸಿದರು.

ವಿವಿಧ ದತ್ತಿ ಪ್ರಶಸ್ತಿಗಳು

ಅಕ್ಷಯ ಕಾಂತ ಬೈಲು- ಹದಿನೆಂಟರಿಂದ ಇಪ್ಪತ್ತೆಂಟರ ಕವಿತೆ ಗಳು (ಜಿ.ಶ್ರೀನಿವಾಸರಾಜುದತ್ತಿ ಬಹುಮಾನ), ಡಾ.ಎಚ್.ಜಿ.ಶ್ರೀಧರ್ – ಚಪಡ ಇದು ಅಕ್ಷರದ ಪಯಣ (ಚದುರಂಗ ದತ್ತಿ), ಸಹನಾ ಕಾಂತಬೈಲು ಇದು ಬರಿ ಮಣ್ಣಲ್ಲ (ವಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ), ಡಾ.ನಾಗ ಎಚ್.ಹುಬ್ಬಿ ಹಾಕಿಮಾಂತ್ರಿಕ ಮೇಜರ್ ಧ್ಯಾನಚಂದ್ (ಸಿಂಪಿ ಲಿಂಗಣ್ಣ ದತ್ತಿ), ಡಾ.ಎಸ್.ಪುಸಾದಸ್ವಾಮಿ- ಬಡಗು ಬಿನ್ನಾಣ (ಜಿ.ಶ್ರೀನಿವಾಸರಾಜು ದತಿ), ಸುಮಂ ಗಲಾ- ಸಬಾಸ್ಟಿಯನ್ ಆಯಂಡ್ ಸನ್ಸ್ ಗುಂಡಪ್ಪ ಮತ್ತು ಶಾರದಮ್ಮ ದತ್ತಿ), ಅಕ್ಷಯ ಪಂಡಿತ್‌ – ಬಯಲಲಿ ತೇಲುವ ತಾನು (ಮಧು ರಚೆನ್ನ ದತ್ತಿ), ಡಾ.ಸುಶಿ ಕಾಡನಕುಪ್ಪೆ- ಅಸತ್ಯ ದ ಕೇಡು (ಬಿ.ವಿ.ವೀರಭದ್ರಪ್ಪ ದತ್ತಿ ಬಹು ಮಾನ) ಕೃತಿ ಆಯ್ಕೆಯಾಗಿದೆ.

ಈ ಎಲ್ಲ ದತ್ತಿ ಪ್ರಶಸ್ತಿಗಳಿಗೆ ತಲಾ 10000 ರು.ನಗದು ಮತ್ತು ಪ್ರಶಸ್ತಿ ಫಲಕ, ಪುಮಾಣ ಪತ್ರ ಇರಲಿದೆ.

ಇದನ್ನೂ ನೋಡಿ: ಮೋದಿಯವರೇ ಹತ್ತು ವರ್ಷದಲ್ಲಿ ಎಷ್ಟು ಆಶ್ವಾಸನೆ ಈಡೇರಿಸಿದ್ದಿರಿ ಸ್ಪಷ್ಟಪಡಿಸಿ – ವಿ ಎಸ್ ಉಗ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *