ನಡುರಸ್ತೆಯಲ್ಲಿ ಚಲಿಸುವ ಬೈಕ್‌ನಲ್ಲಿ ನಿಂತುಕೊಂಡೇ ಯುವಕನೋರ್ವ ಸ್ಟಂಟ್

ಬಿಹಾರ: ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್ ಗಿಟ್ಟಿಸಿಕೊಂಡು ವೈರಲ್‌ ಆಗುವುದಕ್ಕಾಗಿ ಜನ ತಮ್ಮ ಜೀವದ ಜೊತೆಯೂ ಆಟ ಆಡುವುದು ಸಾಮಾನ್ಯವಾಗಿದೆ. ಕೆಲ ದಿನಗಳ ಹಿಂದಷ್ಟೇ ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವಿನೊಂದಿಗೆ ಬಾವಿಕಟ್ಟೆ ಮೇಲೆ ಕುಳಿತುಕೊಂಡು ರೀಲ್ಸ್‌ ಮಾಡಿದ್ದಳು. ಈ ವೀಡಿಯೋ ಸಾಕಷ್ಟು ವೈರಲ್ ಆಗುವುದರ ಜೊತೆ ಜನರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಯುವಕನೋರ್ವನ ಸರದಿ ನಡುರಸ್ತೆಯಲ್ಲಿ ಚಲಿಸುವ ಬೈಕ್‌ನಲ್ಲಿ ನಿಂತುಕೊಂಡೇ ಯುವಕನೋರ್ವ ಸ್ಟಂಟ್ ಮಾಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಎಷ್ಟು ವೈರಲ್ ಆಗಿದೆ ಎಂದರೆ ಈ ವೀಡಿಯೋಗೆ ಈಗ ಬಿಹಾರ ಪೊಲೀಸರು ಕೂಡ ಪ್ರತಿಕ್ರಿಯಿಸಿದ್ದಾರೆ. ಬೈಕ್‌

ಕುಳಿತು ಚಲಾಯಿಸಲು ಬೈಕ್ ಸೃಷ್ಟಿಯಾಗಿರುವುದು. ಆದರೆ ಈತ ಅದರ ಮೇಲೆ ನಿಂತುಕೊಂಡು ಹಳ್ಳಿಗಾಡಿನ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದಾನೆ. ಆತನ ಈ ಬ್ಯಾಲೆನ್ಸ್ ಮೆಚ್ಚುವಂತದ್ದೇ ಆದರೂ ಕೂಡ ಸ್ವಲ್ಪ ಹೆಚ್ಚು ಕಡಿಮೆ ಆದರೂ ಪ್ರಾಣಕ್ಕೆ ಅಪಾಯ ತಂದೊಡ್ಡುವುದು ಗ್ಯಾರಂಟಿ. ಅಲ್ಲದೇ ಇದು ರಸ್ತೆಯಲ್ಲಿ ಸಾಗುವ ಬೇರೆಯವರ ಪ್ರಾಣಕ್ಕೂ ಸಂಚಾಕಾರ ತರುವುದು. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಆತ ಹಳ್ಳಿಯ ಢಮಾರ್ ರಸ್ತೆಯಲ್ಲಿ ನಿಂತುಕೊಂಡೆ ಬೈಕ್ ಚಲಾಯಿಸಿಕೊಂಡು ಹೋಗುತ್ತಾ ಕೆಲ ಸ್ಟಂಟ್‌ಗಳನ್ನು ಮಾಡಿದ್ದಾನೆ.

ಬಿಹಾರದ ಸಮಸ್ಟಿಪುರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸ್ಥಳೀಯ ಯುವಕನೋರ್ವ ಈ ಸ್ಟಂಟ್‌ ಮಾಡಿದ್ದು, ಈತ ಅಲ್ಲಿ ದಿನವೂ ಈ ರೀತಿಯ ವೀಡಿಯೋ ಮಾಡುವ ಮೂಲಕ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾನೆ. ಬೇರೆಯವರ ಜೀವಕ್ಕೆ ಅಪಾಯವುಂಟು ಮಾಡುತ್ತಿದ್ದಾನೆ. ಸಮಸ್ಟಿಪುರದ ಪೊಲೀಸರು ಆತನ ರಕ್ಷಣೆಗೆ ಮುಂದಾಗುತ್ತಿದ್ದಾರೆ. ಪ್ರತಿದಿನವೂ ಆತ ರಸ್ತೆಯಲ್ಲಿ ಇಂತಹದ್ದೇ ಸ್ಟಂಟ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ವೀಡಿಯೋ ಅಪ್ಲೋಡ್ ಮಾಡುತ್ತಿರುತ್ತಾನೆ ಎಂದು ಬರೆದು @ChapraZila ಎಂಬ ಖಾತೆ ಹೊಂದಿರುವವರು ಟ್ವಿಟ್ಟರ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದು, ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ವೀಡಿಯೋಗೆ ನಮಸ್ತೆ ಇಂಡಿಯಾ ಎಂಬ ಟೈಟಲ್ ನೀಡಲಾಗಿದೆ.

ಇದನ್ನೂ ಓದಿ: ತಿರುಪತಿ ಲಡ್ಡು ಕಲಬೆರಕೆ: ಭಕ್ತರ ಭಾವನೆಗಳ ಜೊತೆ ಆಟವಾಡುವುದು ಬೇಡ, ನಿಜ ಏನೆಂದು ತಿಳಿಯಬೇಕಿದೆ

ರಸ್ತೆಯಲ್ಲೇ ಹೀಗೆ ಈತ ಬೈಕ್‌ನಲ್ಲಿ ಹೋಗುತ್ತಿದ್ದರೆ ಕೆಲವರು ಆತನ ನೋಡಿ ನಗುತ್ತಾ ಮುಂದೆ ಸಾಗಿದರೆ ಮತ್ತೆ ಕೆಲವರು ಅವನತ್ತ ಕೈ ಬೀಸುತ್ತಾರೆ. ಇನ್ನು ಹೀಗೆ ರಸ್ತೆಯಲ್ಲಿ ಸ್ಟಂಟ್ ಮಾಡಿದ ಯುವಕನನ್ನು ನೀರಜ್ ಯಾದವ್ ಎಂದು ಗುರುತಿಸಲಾಗಿದ್ದು, ಈತ ಇನ್ಸ್ಟಾಗ್ರಾಮ್‌ನಲ್ಲಿ ಖಾತೆ ಹೊಂದಿದ್ದು, ತನ್ನನ್ನು ತಾನು ಮೋಟಾರ್‌ವ್ಲಾಗರ್ ಎಂದು ಕರೆದುಕೊಂಡಿದ್ದಾನೆ. ಈತನಿಗೆ ಟ್ವಿಟ್ಟರ್‌ನಲ್ಲಿ ಸುಮಾರು 21,0000 ಫಾಲೋವರ್ಸ್‌ಗಳಿದ್ದಾರೆ.

ಈತನ ಖಾತೆಯ ತುಂಬಾ ಬರೀ ಮೋಟಾರ್‌ಸ್ಟಂಟ್‌ನದ್ದೇ 600 ಕ್ಕೂ ಹೆಚ್ಚು ವೀಡಿಯೋಗಳಿವೆ. ಅದರಲ್ಲಿ ಕೆಲವು ವೀಡಿಯೋಗಳಲ್ಲಿ ಆತ ಚಲಿಸುವ ಬೈಕ್‌ನಲ್ಲಿ ಸ್ಟಂಟ್ ಮಾಡುವುದನ್ನು ಕೂಡ ನೋಡಬಹುದಾಗಿದೆ.  ಈತನ ಈ ವೀಡಿಯೋ ಈಗ ವೈರಲ್ ಆದ ಹಿನ್ನೆಲೆಯಲ್ಲಿ ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಹಾರ ಪೊಲೀಸರು ಸಮಸ್ಟಿಪುರ ಪೊಲೀಸರಿಗೆ ಸೂಚಿಸಿ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಮಸ್ಟಿಪುರ ಪೊಲೀಸರು ಈತನ ಬೈಕನ್ನು ಎರಡು ತಿಂಗಳ ಹಿಂದೆಯೇ ಹಸನ್‌ಪುರದ ಪೊಲೀಸರು ಸೀಜ್ ಮಾಡಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಯಾದವ್ ಮಾತ್ರ ಸ್ಟಂಟ್ ಮಾಡೋದನ್ನ ನಿಲ್ಲಿಸಿಲ್ಲ, ಹೀಗಾಗಿ ಈತನ ವಿರುದ್ಧ ಮತ್ತೆ ಜನ ದೂರು ನೀಡಿದ್ದಾರೆ.

ಇದನ್ನೂ ನೋಡಿ: ಜೀವ ತೆಗೆದವನು ತಾನೂ ಸತ್ತ…ಸಿಕ್ಕೀತೆ ನ್ಯಾಯ…? – ಕೆ.ಎಸ್ ವಿಮಲಾ Janashakthi Media

Donate Janashakthi Media

Leave a Reply

Your email address will not be published. Required fields are marked *