ನಾಳೆ ಯಾವೆಲ್ಲಾ ಸಿನಿಮಾ ಬಿಡುಗಡೆಯಾಗಲಿವೆ: ಇಲ್ಲಿದೆ ಮಾಹಿತಿ

2024 ಭಾರತೀಯ ಸಿನಿಮಾರಂಗದ ಪಾಲಿಗೆ ಬಹುನಿರೀಕ್ಷೆಯ ವರ್ಷ. ಈ ಹಿಂದಿನ ವರ್ಷ ಬಿಡುಗಡೆಯಾದ ಸಿನಿಮಾಗಳು ಇಡೀ ಪ್ರಪಂಚವೇ ಭಾರತೀಯ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿವೆ. ಹೀಗಾಗಿ ಭಾರತೀಯ ಸಿನಿಮಾಗಳ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ನಾಳೆ ಬಿಡುಗಡೆಗಳ್ಳಲಿರುವ ಸಿನಿಮಾಗಳ ಮಾಹಿತಿ ಇಲ್ಲಿದೆ.

ಲಂಗೋಟಿ ಮ್ಯಾನ್(ಕನ್ನಡ)

ಲಂಗೋಟಿ ಮ್ಯಾನ್ ಸಿನಿಮಾವನ್ನು ಸಂಜೋತಾ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಆಕಾಶ್ ರ‍್ಯಾಂಬೋ ನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಸಂಹಿತಾ ವಿನ್ಯಾ, ಸ್ನೇಹ ಖುಷಿ, ಹುಲಿ ಕಾರ್ತಿಕ್, ಪಲ್ಟಿ ಗೋವಿಂದ್, ಸಾಯಿ ಪವನ್‌ಕುಮಾರ್, ಮಹಾಲಕ್ಷ್ಮೀ ವಿ ಮುಂತಾದವರು ತಾರಾಗಣದಲ್ಲಿದ್ದಾರೆ. ಸುಮೇದ್‌ ಸಂಗೀತ, ರವಿವರ್ಮಾ ಛಾಯಾಗ್ರಹಣ ಹಾಗೂ ಮನು & ಸ್ವರಾಕ್‌ ಪತ್ರಿಮಠ ಸಂಕಲನ ಸಿನಿಮಾಗಿದೆ.

ಇದನ್ನು ಓದಿ : ತಮ್ಮ ಮೃತ ತಂದೆಯ ಶವವನ್ನು ಮೋಟಾರ್ ಬೈಕ್ ನಲ್ಲಿ ಸಾಗಿಸಿದ ಇಬ್ಬರು ಸಹೋದರರು

ಹಗ್ಗ(ಕನ್ನಡ)

ಹಗ್ಗ ಸಿನಿಮಾವನ್ನು ಯುವ ನಿರ್ದೇಶಕ ಅವಿನಾಶ್ ಎನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅನು ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಹರ್ಷಿಕಾ ಪೂಣಚ್ಚ, ತಬಲಾ ನಾಣಿ, ಭವಾನಿ ಪ್ರಕಾಶ್, ಸಂಜು ಬಸಯ್ಯ, ಅವಿನಾಶ್, ಪ್ರಿಯಾ ಹೆಗಡೆ, ಸುಧಾ ಬೆಳವಾಡಿ ಮುಂತಾದವರು ತಾರಾಗಣದಲ್ಲಿದ್ದಾರೆ. ಮ್ಯಾಥಿವ್ಸ್ ಮನು ಸಂಗೀತ ಸಿನಿಮಾಗಿದೆ. ರಾಜ್ ಭಾರದ್ವಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಎಮರ್ಜೆನ್ಸಿ(ಹಿಂದಿ)

ಎಮರ್ಜೆನ್ಸಿಯು 2022 ರ ಬಾಲಿವುಡ್  ಚಲನಚಿತ್ರವಾಗಿದ್ದು, ಕಂಗನಾ ರನೌತ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಿತೇಶ್ ಶಾ ಬರೆದಿದ್ದಾರೆ. ‘ತುರ್ತು ಪರಿಸ್ಥಿತಿ’ಯಲ್ಲಿ ಕಂಗನಾ ರಣಾವತ್ ಅವರು ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪಾತ್ರವನ್ನು ಅಭಿನಯಿಸಿದ್ದಾರೆ.

ಈ ಸಿನಿಮಾಗಳು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿವೆ. ರಮ್ಮಿ ಆಟ (ಕನ್ನಡ), ಪಿಲಾಮ್ ಪಿಲಾಗ್(ತೆಲುಗು), ಇನ್ನು ಹಲವಾರು ಸಿನಿಮಾಗಳು ನಾಳೆ ಬಿಡುಗಡೆಯಾಗಲ್ಲಿವೆ.

ಇದನ್ನು ನೋಡಿ : ಬಿವಿ ಕಾರಂತ ನೆನಪು| ಕನಸಿಲ್ಲದೆ ಬದುಕಿಲ್ಲ Janashakthi Media

 

 

 

 

Donate Janashakthi Media

Leave a Reply

Your email address will not be published. Required fields are marked *