ಬಾಂಗ್ಲಾದೇಶ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿರುವ ಶೇಖ್ ಹಸೀನಾ ಅತಂತ್ರ ಸ್ಥಿತಿಗೆ ಒಳಗಾಗಿದ್ದಾರೆ.
ರಾಜಾಶ್ರಯ ಅಥವಾ ತಾತ್ಕಾಲಿಕ ಆಶ್ರಯ ನೀಡಲು ಮಾಡಿದ್ದ ಮನವಿಯನ್ನು ಬ್ರಿಟನ್ ಸರ್ಕಾರ ತಳ್ಳಿ ಹಾಕಿದ್ದು, ವೈಯಕ್ತಿಕವಾಗಿ ಯಾವುದೇ ವ್ಯಕ್ತಿಗೆ ರಾಜಾಶ್ರಯ ಅಥವಾ ತಾತ್ಕಾಲಿಕ ಆಶ್ರಯ ನೀಡಲು ವಲಸೆ ನಿಯಮ ಒಪ್ಪುವುದಿಲ್ಲ ಎಂದು ಹೇಳಿದೆ.
ಬ್ರಿಟನ್ ನಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರಸ್ತುತ ವಲಸಿಗರ ಸಮಸ್ಯೆಯಿಂದ ಗಲಭೆ ಸ್ಥಿತಿಯನ್ನು ಬ್ರಿಟನ್ ಎದುರಿಸುತ್ತಿದ್ದು, ಅಕ್ರಮ ವಲಸಿಗರ ತಡೆಗೆ 8000 ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಿದೆ.
ಇದೇ ವೇಳೆ ಶೇಖ್ ಹಸೀನಾ ಅವರ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಇದರಿಂದ ಅಮೆರಿಕಕ್ಕೆ ವಲಸೆ ಹೋಗುವ ಸಾಧ್ಯತೆಯೂ ಇಲ್ಲದಂತಾಗಿದೆ.