ತುಮಕೂರು: ಜಾತ್ರೆಯಲ್ಲಿ ನೀರು ಕುಡಿದ ಬಳಿಕ ಒಂದೇ ಗ್ರಾಮದ ಸುಮಾರು 35 ಮಂದಿ ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯಲ್ಲಿನ ಜನರು ಜಾತ್ರೆಯಲ್ಲಿ ನೀರು ಕುಡಿದು ಹೀಗೆ ಅಸ್ವಸ್ಥರಾಗಿದ್ದಾರೆ.
ಚಿನ್ನೇನಹಳ್ಳಿ ಗ್ರಾಮದಲ್ಲಿ ಸುಮಾರು 300 ಮನೆಗಳಿದ್ದು, ಬರೋಬ್ಬರಿ 29 ವರ್ಷಗಳ ಬಳಿಕ ಇಲ್ಲಿನ ಲಕ್ಕಮ್ಮ-ಕೆಂಪಮ್ಮ ದೇವರ ಜಾತ್ರೆ ನಡೆಯುತ್ತಿತ್ತು.
ಇದನ್ನೂ ಓದಿ: ಬಿಜೆಪಿಗೆ ದಲಿತರು, ಓಬಿಸಿ ಸಂಸದರ ಅಗತ್ಯವಿಲ್ಲ: ಗೃಹಸಚಿವ ಡಾ.ಜಿ. ಪರಮೇಶ್ವರ್
6 ದಿನಗಳಿಂದ ಜಾತ್ರೆ ನಡೆಯುತ್ತಿದ್ದು, ಭಾನುವಾರ ರಾತ್ರಿ ದೇವರ ಕಾರ್ಯ ಮುಗಿಸಿದ ಬಳಿಕ ಜಾತ್ರೆಯಲ್ಲಿ ನೀರು ಕುಡಿದವರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿದೆ.ಅಸ್ವಸ್ಥರಾದವರನ್ನು ಜಿಲ್ಲಾ, ತಾಲೂಕು ಹಾಗೂ ವಿಕ್ಟೋರಿಯಾ ಆಸ್ಪತ್ರೆಗೆ ಕೆಲವರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪರಿಸ್ಥಿತಿ ಗಂಭೀರವಾಗಿದ್ದ ಲಕ್ಷ್ಮಮ್ಮ ಮತ್ತು ಪೆದ್ದಣ್ಣ ಎಂಬುವವರ ಆರೋಗ್ಯದಲ್ಲಿ ಚಿಕಿತ್ಸೆ ಬಳಿಕೆ ಚೇತರಿಕೆ ಕಂಡುಬಂದಿದ್ದು, ಅಸ್ವಸ್ಥರನ್ನು ಸಚಿವ ಕೆ.ಎನ್.ರಾಜಣ್ಣ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ಬಂಡವಾಳಶಾಹಿ ಬೆಳೆದಷ್ಟು ಪ್ರತಿರೋಧ ಹೆಚ್ಚಾಗುತ್ತಲೆ ಇರುತ್ತದೆ – ರಾಜೇಂದ್ರ ಚೆನ್ನಿJanashakthi Media