ಬೆಂಗಳೂರು: ರಾಜಧಾನಿಯಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಇದರ ನಡುವಲ್ಲೇ ಅಕ್ರಮ ಕೊಳವೆ ಬಾವಿಗಳ ಕೊರೆತ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಾಜಧಾನಿ
ಬಿಡಬ್ಲ್ಯೂಎಸ್ಎಸ್‌ಬಿ ಅನುಮತಿ ಇಲ್ಲದೆ ಬೋರ್ವೆಲ್ ಕೊರೆಯುವಂತಿಲ್ಲ ಎಂದು ಈಗಾಗಲೇ ಆದೇಶ ಹೊರಡಿಸಿದ್ದರೂ, ಹಲವೆಡೆ ಅಧಿಕಾರಿಗಳ ಕಣ್ತಪ್ಪಿಸಿ, ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬರುತ್ತಿದೆ.
ಅನಧಿಕೃತ ಪೇಯಿಂಗ್ ಗೆಸ್ಟ್ (ಪಿಜಿ) ಕಟ್ಟಡದಲ್ಲಿ ಬೋರ್ ವೆಲ್ ಕೊರೆಯುತ್ತಿರುವುದಾಗಿ ವೈಟ್‌ಫೀಲ್ಡ್‌ನ ಅಂಬೇಡ್ಕರ್ ನಗರದ ನಿವಾಸಿಗಳು ನೀಡಿದ ಮಾಹಿತಿ ಮೇರೆಗೆ ಬಿಡಬ್ಲ್ಯೂಎಸ್ಎಸ್’ಬಿ ಅಧಿಕಾರಿಗಳು, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನು ಓದಿ : ಅಪ್ರಾಪ್ತ ಬಾಲಕಿ ವಿವಾಹ: ಬಂಧನ
ಪೌರಕಾರ್ಮಿಕ ಸಂದೀಪ್ ಅನಿರುಧನ್ ಮಾತನಾಡಿ, ಈ ವ್ಯವಹಾರದಲ್ಲಿ ತೊಡಗಿರುವ ಬಿಲ್ಡರ್‌ಗಳು ಬೋರ್‌ವೆಲ್‌ಗೆ ಅನುಮತಿ ಪಡೆಯಲು ಎಲ್ಲಾ ರೀತಿಯ ತಂತ್ರಗಳನ್ನು ನಡೆಸುತ್ತಿದ್ದಾರೆ, ಆದರೆ ಅಂತರ್ಜಲ ಕುಸಿತವನ್ನು ಉಲ್ಲೇಖಿಸಿ ಏಪ್ರಿಲ್‌ನಲ್ಲಿ ಜಲಮಂಡಳಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರನ್ನು ಮಾತ್ರ ಅನುಮತಿಸಲಾಗಿದೆ ಎಂದು BWSSB ಸ್ಪಷ್ಟವಾಗಿ ಹೇಳಿದೆ. ಆದರೆ, ಮಾಲೀಕರು ಖಾಲಿ ನಿವೇಶನಕ್ಕೆ ಅನುಮತಿ ಪಡೆದಿದ್ದು, ಬೋರ್‌ವೆಲ್ ಕೊರೆಸಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಅನುಮತಿ ಸಿಕ್ಕಿದ್ದೇ ಆದರೆ, ಬೋರ್ವೆಲ್ ಕೊರೆತಿ ಆ ನೀರನ್ನು ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡುತ್ತಾರೆಂದು ಹೇಳಿದ್ದಾರೆ. ರಾಜಧಾನಿ
ಪಿಜಿ ವ್ಯವಹಾರವು ವಾಣಿಜ್ಯ ವ್ಯವಹಾರಕ್ಕೆ ಬರುತ್ತದೆ, ಆದರೆ, ಮಾಲೀಕರು ನಿರ್ಮಾಣವನ್ನು ದೇಶೀಯವೆಂದು ಘೋಷಿಸಿ ಮೋಸದಿಂದ ಅನುಮತಿ ಪಡೆದಿದ್ದಾರೆ. ಎರಡು ವಾರಗಳ ಹಿಂದೆ ಇದೇ ಪ್ರದೇಶದಲ್ಲಿ ಅನಧಿಕೃತ ಬೋರ್‌ವೆಲ್ ಕೊರೆಯುವುದನ್ನು ಸ್ಥಳೀಯ ನಿವಾಸಿಗಳು ನಿಲ್ಲಿಸಿದ್ದರು ಎಂದು ತಿಳಿಸಿದ್ದಾರೆ.
ದೂರು ಹಿನ್ನೆಲೆಯಲ್ಲಿ ನಾವು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪೊಲೀಸರಿಗೆ ದೂರು ನೀಡಿದೆವು. ಬೋರ್‌ವೆಲ್ ಗುತ್ತಿಗೆದಾರನ ವಿರುದ್ಧವೂ ದೂರು ದಾಖಲಾಗಿದ್ದು, ವಾಹನದ ನಂಬರ್‌ಗಳನ್ನು ಪೊಲೀಸರಿಗೆ ನೀಡಲಾಗಿದೆ. ಇನ್ನು ಮುಂದೆ ಬೋರ್‌ವೆಲ್ ಗುತ್ತಿಗೆದಾರರ ವಿರುದ್ಧವೂ ದೂರು ದಾಖಲು ಮಾಡಲಾಗುವುದು ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನು ನೋಡಿ : ರೋಹಿತ್ ವೇಮುಲಾ ದಲಿತನಲ್ಲವೆ?! ರೋಹಿತ್‌ನನ್ನು ಮತ್ತೆ ಮತ್ತೆ ಕೊಲ್ಲುತ್ತಿರುವ ಮನುವಾದಿ ವ್ಯವಸ್ಥೆ