ಜೀವರಕ್ಷಣೆಯ ಹೊರತು ಅನ್ಯಕಾರಣಕ್ಕೆ “ಪೆಪ್ಪರ್ ಸ್ಪ್ರೇ” ಬಳಸುವಂತಿಲ್ಲ: ಹೈಕೋರ್ಟ್ ಸೂಚನೆ

ಬೆಂಗಳೂರು: “ಪೆಪ್ಪರ್ ಸ್ಪ್ರೇ” ಅನ್ನು ಜೀವರಕ್ಷಣೆಯ ಹೊರತು ಅನ್ಯಕಾರಣಕ್ಕಾಗಿ ಬಳಸುವಂತಿಲ್ಲ ಎಂದು ರಾಜ್ಯ ಉಚ್ಛ ನ್ಯಾಯಾಲಯ ಸೂಚಿಸಿದೆ.

ಪೆಪ್ಪರ್ ಸ್ಪ್ರೇ ಅಪಾಯಕಾರಿಯಾಗಿದ್ದು, ಜೀವರಕ್ಷಣೆಯ ಹೊರತಾಗಿ ಅನ್ಯ ಕಾರಣಗಳಿಗೆ ಇದನ್ನು ಬಳಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿದೆ.

ಸಿ ಕೃಷ್ಣಯ್ಯ ಚೆಟ್ಟಿ ಆಂಡ್ ಸನ್ಸ್ ಚಿನ್ನಾಭರಣ ಮಳಿಗೆಯ ನಿರ್ದೇಶಕರಲ್ಲಿ ಒಬ್ಬರಾದ ಸಿ ಗಣೇಶ್ ನಾರಾಯಣ ಮತ್ತವರ ಪತ್ನಿ ವಿದ್ಯಾ ನಟರಾಜ್ ತಮ್ಮ ಮೇಲಿನ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದ ಹೈ ಕೋರ್ಟ್ ಪೆಪ್ಪರ್ ಸ್ಪ್ರೇ ಬಳಕೆ ಅಪಾಯಕಾರಿ ಆಯುಧ ಎಂದು ಹೇಳಿದೆ.

ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ : ಎರಡು ದಿನದಲ್ಲಿ ಪ್ರಕಟ?

ಶಿವಾಜಿನಗರದ ಸಿಕೆಸಿ ಆಂಡ್ ಸನ್ಸ್ ಮಣಿಗೆಯಲ್ಲಿ ಸೆಕ್ಯೂರಿಟಿ ಗಾರ್ಡ್ ರಣದೀಪ್ ದಾಸ್ ಎಂಬುವವರ ಮೇಲೆ ದಂಪತಿಗಳು ಪೆಪ್ಪರ್ ಸ್ಪ್ರೇ ಮೂಲಕ ದಾಳಿ ನಡೆಸಿದ್ದಾರೆ ಎಂಬ ಆರೋಪದಲ್ಲಿ ದಾಖಲಾದ ಕೇಸನ್ನು ರದ್ದುಗೊಳಿಸಬೇಕು ಎಂದು ಗಣೇಶ್ ನಾರಾಯಣ ದಂಪತಿ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ ಎಂ ನಾಗಪ್ರಸನ್ನ ಅವರಿದ್ದ ಪೀಠ ಪೆಪ್ಪ‌ರ್ ಸ್ಪ್ರೇ ಅನ್ನು ವೈಯಕ್ತಿಕ ಕಾರಣಕ್ಕೆ ಬಳಸುವಂತಿಲ್ಲ.

ಇದೊಂದು ಅಪಾಯಕಾರಿ ಆಯುಧವಾಗಿದ್ದು 2018ರಲ್ಲಿ ಪೀಪಲ್ ವರ್ಸಸ್ ಸ್ಯಾಂಡೇಜ್ ಪ್ರಕರಣದಲ್ಲಿ ಅಮೇರಿಕಾ ನ್ಯಾಯಾಲಯವು ಪೆಪ್ಪರ್ ಸ್ಪ್ರೇ ಹಾನಿಕಾರಕ ಮತ್ತು ಅಪಾಯಕಾರಿ ಎಂದು ತಿಳಿಸಿದೆ . ಅಲ್ಲದೇ ಈ ಪ್ರಕರಣದಲ್ಲಿ ಅರ್ಜಿದಾರರ ಪ್ರಾಣಕ್ಕೆ ಅಪಾಯವಿಲ್ಲದಿದ್ದರೂ ಪೆಪ್ಪರ್ ಸ್ಪ್ರೇ ಬಳಸಲಾಗಿದೆ ಹೀಗಾಗಿ ಪ್ರಕರಣ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಇದನ್ನೂ ನೋಡಿ: ಪೆನ್ ಡ್ರೈವ್ ಪ್ರಕರಣ : ಮಾಜಿ ಸಿಎಂ ಕುಮಾರಸ್ವಾಮಿ ಮಹತ್ವದ ಸುದ್ದಿಗೋಷ್ಠಿ

Donate Janashakthi Media

Leave a Reply

Your email address will not be published. Required fields are marked *