ಹೆಚ್.ಡಿ ರೇವಣ್ಣಗೆ ಜಾಮೀನು ನಿರಾಕರಣೆ, ಮೇ 14 ರವರೆಗೆ ನ್ಯಾಯಾಂಗ ಬಂಧನ

ಬೆಂಗಳೂರು: ಮೈಸೂರು ಅಪಹರಣ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು ಮೇ 14 ರವರೆಗೆ ಹೆಚ್.ಡಿ.ರೇವಣ್ಣ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಮೈಸೂರು ಕಾನಪ್ಪಾಣೆ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ ಹಿನ್ನೆಲೆಯಲ್ಲಿ ಹೆಚ್‌ಡಿ ರೇವಣ್ಣ ಅವರನ್ನು ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಎಸ್‌ಐಟಿ ಪರ ವಾದ ಮಂಡಿಸಿದ ವಕೀಲರು ರೇವಣ್ಣ ಎಸ್‌ಐಟಿ ತನಿಖೆಗೆ ಸ್ಪಂದಿಸಿಲ್ಲ. ಬಹುತೇಕ ಪ್ರಶ್ನೆಗಳಿಗೆ ರೇವಣ್ಣ ಉತ್ತರ ನೀಡಿಲ್ಲ. ಜಾಮೀನು ನೀಡದೇ ನ್ಯಾಯಾಂಗ ಬಂಧನಕ್ಕೆ ನೀಡಿ ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ಮುಂದೂಡಿಕೆ

ಅಷ್ಟೇ ಅಲ್ಲದೇ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುತ್ತದೆ. ಹೊಳೆನರಸೀಪುರದಲ್ಲಿ ಮತ್ತೊಂದು ಕೇಸ್ ಇದೆ. ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.

ಆದರೆ ಎಸ್‌ಐಟಿ ಮನವಿಗೆ ರೇವಣ್ಣ ವಕೀಲರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ 2 ಕಡೆಯ ವಾದ ಪ್ರತಿವಾದಗಳನ್ನು ಪರಿಶೀಲಿಸಿದ ಕೋರ್ಟ್ ಹೆಚ್‌ಡಿ ರೇವಣ್ಣಗೆ 7 ದಿನಗಳ ನ್ಯಾಯಾಂಗ ಬಂಧನ ನೀಡಿದೆ.

ಇದನ್ನೂ ನೋಡಿ: ಪೆನ್ ಡ್ರೈವ್ ಹಂಚಿಕೆ ಪ್ರಕರಣ- ರಾಜಕೀಯ ಮೇಲಾಟ- ಹೆಣ್ಣಿನ ಘನತೆಯ ಜೊತೆ ಆಟ

Donate Janashakthi Media

Leave a Reply

Your email address will not be published. Required fields are marked *