ಶಿವಮೊಗ್ಗ: ಮತದಾನ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಬಿಸಿಲಿನ ತಾಪಮಾನದಿಂದ ರಕ್ಷಿಸಲು ಶಾಮಿಯಾನ ಕೂಡ ಹಾಕಲಾಗಿದೆ. ಆದರೆ, ಇಲ್ಲೊಂದು ಕಡೆ ಅವೈಜ್ಞಾನಿಕವಾಗಿ ಶಾಮಿಯಾನ ಹಾಕಿದ್ದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದ ಪಿಎಸ್ ನಂ.278ರಲ್ಲಿ ಅವೈಜ್ಞಾನಿಕವಾಗಿ ಶಾಮಿಯಾನ ಹಾಕಿದ್ದಕ್ಕೆ ಮತದಾರರು ಆಕ್ಷೇಪ ವ್ಯಕ್ತಪಡಿಸಿದರು. ಬಿಸಲು ಹೆಚ್ಚಿದ್ದರಿಂದ ಮತದಾರರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವೈಜ್ಞಾನಿಕವಾಗಿ ಶಾಮಿಯಾನ ಹಾಕಿದ್ದರೆ ಬಿಸಿಲಿನ ತಾಪದಿಂದ ಬಚಾವ್ ಆಗಬಹುದಿತ್ತು. ಹೀಗೆ ವೈಜ್ಞಾನಿಕವಾಗಿ ಶಾಮಿಯಾನ ಹಾಕಿದ್ದರಿಂದ ಯಾರಿಗೂ ಪ್ರಯೋಜನ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನು ಓದಿ : ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಸರ್ಕಾರದಲ್ಲಿ ಬದಲಾವಣೆ: ಕುಮಾರ ಬಂಗಾರಪ್ಪ
ಅವೈಜ್ಞಾನಿಕ ಶಾಮಿಯಾನದಿಂದ ಕೆಲ ಹೊತ್ತು ಮತದಾರರು ಅಧಿಕಾರಿಗಳ ಹಾಗೂ ಪೊಲೀಸರ ನಡುವೆ ವಾಗ್ದಾದ ನಡೆಸಿದರು. ಮತದಾರರ ಮನವೊಲಿಕೆಗೆ ಅಧಿಕಾರಿಗಳು ಮುಂದಾದರು.
ಇದನ್ನು ನೋಡಿ : ಪೆನ್ ಡ್ರೈವ್ ಪ್ರಕರಣದ ರೂವಾರಿ ಡಿಕೆಶಿ ಎಂದ ಬಿಜೆಪಿ, ಇದು ಬಿಜೆಪಿ – ಜೆಡಿಎಸ್ ಷಡ್ಯಂತ್ರ ಎಂದ ಡಿಕೆಶಿ