ಬಾಗೇಪಲ್ಲಿ: ʼಸಂವಿಧಾನʼ ಭಾರತದ ಹೃದಯವಾಗಿದ್ದು, ದೇಶದ ಈ ಹೃದಯವನ್ನೇ ಬಿಜೆಪಿ ಬದಲಾಯಿಸಲು ಹೊರಟಿದ್ದು, ಇದರಿಂದ ಮತದರರು ಎಚ್ಚೆತ್ತುಕೊಳ್ಳಬೇಕು. ಬಿಜೆಪಿಯವರು ದೇಶದ ಜನರನು ಸೌಹಾರ್ಧತೆಯಿಂದ, ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ, ಹಿಂದೂತ್ವ ರಾಷ್ಟ್ರನಿರ್ಮಾಣಕ್ಕಾಗಿ ಕೋಮುಗಲಭೆ, ಘರ್ಷಣೆಗಳನ್ನು ನಡೆಸುತ್ತಿದ್ದಾರೆ. ಇಂತವರನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂದು ಸಿಪಿಐಎಂ ಪೊಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಕರೆ ನೀಡಿದರು.
ಬಾಗೇಪಲ್ಲಿಯಲ್ಲಿ ಸಿಪಿಐಎಂ ಅಭ್ಯರ್ಥ ಮುನಿವೆಂಕಟಪ್ಪ ಪರ ಮತಯಾಚಿಸಿದ ಬೃಂದಾ ಕಾರಟ್, ಬಳಿಕ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿ ಸರ್ಕಾರದಿಂದಾದ ಅನ್ಯಾಯದ ಸಾಕಷ್ಟು ಅನುಭವವನ್ನು ಕಳೆದ 10 ವರ್ಷಗಳಲ್ಲಿ ಜನರು ನೋಡಿದ್ದಾರೆ. ಅಂತೆಯೇ ಕಾಂಗ್ರೆಸ್ ಸರ್ಕಾರದ ಅನುಭವವನ್ನು ನೋಡಿದ್ದೀರಿ. ಸಂವಿಧಾನದ ಉಳಿಯುವಿಕೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಈ ಲೋಕಸಭಾ ಚುನಾವಣೆಯು ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ. ಸಂವಿಧಾನ ಮುಖ್ಯ ಆಶಯವೆಂದರೆ, ಅದು ಜಾತ್ಯಾತೀತತೆಯನ್ನು ನಿರ್ಮಾಣ ಮಾಡುವುದು. ಆದರೆ, ಇಂದು ಜಾತ್ಯಾತೀತ ಮೌಲ್ಯಗಳಿಗೆ ಕೊಡಲಿಪೆಟ್ಟು ಬೀಳುತ್ತಿದೆ. ನಾವು ಅಂದುಕೊಂಡಂತೆ ಬದುಕಲು ನಮಗೆ ಸಂವಿಧಾನ ಹಕ್ಕು ಕೊಟ್ಟಿದೆ. ಆದರೆ ಬಿಜೆಪಿ 10 ವರ್ಷದ ಆಡಳಿತದ ಅವಧಿಯಲ್ಲಿ ಆ ಹಕ್ಕನ್ನು ಕಿತ್ತುಕೊಂಡಿದೆ ಎಂದು ಬೃಂದಾ ಕಾರಟ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕ್ಷೇತ್ರದ ಬಿಜೆಪಿ ಸಂಸದರು ‘ಕಪ್ಪವನ್ನು’ ನೀಡಿ ಟಿಕೆಟ್ ಪಡೆದವರು, ಹಣ ಹಂಚಿ ಗೆದ್ದವರು. ಹಾಗಾಗಿ ಅವರಿಂದ ಈ ಕ್ಷೇತ್ರ ಅಭಿವೃದ್ಧಿಯಾಗಲೇ ಇಲ್ಲ. ಅವರದು ಕಪ್ಪೆ ರಾಜಕಾಣ. ಮೊದಲಿಗೆ ಜೆಡಿಎಸ್, ನಂತರ ಕಾಂಗ್ರೆಸ್, ಆಮೇಲೆ ಬಿಜೆಪಿ, ಈಗ ಕಾಂಗ್ರೆಸ್ ಗೆ ಕಪ್ಪೆ ಜಿಗಿದಂತೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಆಧೀಕಾರಕ್ಕಾಗಿ ಜಂಪ್ ಆದವರು. ಇಂತವರಿಗೆ ಟಿಕೆಟ್ ನೀಡಿದ್ದ ಬಿಜೆಪಿಯದ್ದು ಎಂತಹ ಜಾಯಮಾನ ಎಂದು ಬೃಂದಾ ಕಾರಟ್ ಲೇವಡಿ ಮಾಡಿದರು.
ಇದನ್ನು ಓದಿ : ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿ ಮಾಡಿದೆ, ಆದ್ರೂ ಕಣ್ಣೀರು ಯಾಕೆ ಹಾಕುತ್ತಿದ್ದಾರೋ ಗೊತ್ತಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್
ರಾಮ ಸೇರಿದಂತೆ ದೇವರ ಹೆಸರಿನಲ್ಲಿ ಓಟು ಕೇಳುವಂತಹ ಕೆಟ್ಟ ರಾಜಕೀಯ ಈ ದೇಶದಲ್ಲಿ ಹಿಂದೆಂದು ನಡೆದಿಲ್ಲ, ಚುನಾವಣೆಗಗಿ ದೇವರನ್ನು ಬಳಸಿಕೊಂಡು ಜನರ ಭಾವನೆಗಳನ್ನು ಕೆರಳಿಸಿ ಒಡೆದಾಳುವ ನೀತಿಯನ್ನು ಬಿಜೆಪಿ ಮಾಡುತ್ತಿದೆ. ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಬಿಜೆಪಿಗೆ ಎಷ್ಟೊಂದು ದ್ವೇಷವಿದೆ ಎಂಬುದು ಮೋದಿಯವರ ಭಾಷಣದಿಂದಲೇ ಸ್ಪಷ್ಟವಾಗುತ್ತದೆ. ಇದರ ವಿರುದ್ಧ ಸಿಪಿಐಎಂ ಪಕ್ಷ ಚುನಾವಣಾ ಆಯೋಕ್ಕೆ ಮೋದಿ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದು, ಆದಷ್ಟು ಬೇಗ ಮೋದಿ ವಿರುದ್ಧ ಕ್ರಮ ಜರುಗಿಸಿ ಬಂಧಿಸಬೇಕು ಎಂದು ಮತ್ತೊಮ್ಮೆ ಬೃಂದಾ ಕಾರಟ್ ಆಗ್ರಹಿಸಿದರು.
ಹತ್ತು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ಜನರು ಬಹಳಷ್ಟು ಹಿನ್ನಡೆ ಅನುಭವಿಸಿದ್ದಾರೆ. ಕಾರ್ಮಿಕರು, ರೈತರು, ಕೂಲಿಕಾರರು, ದಲಿತರು ಸಂಕಷ್ಟದಲ್ಲಿ ಜೀವನ ಕಳೆಯುವಂತಾಗಿದೆ. ಹಾಗಾಗಿ ದೇಶದಲ್ಲಿನ ಮಹತ್ತರ ಉತ್ತಮ ಜನಪರ ಬದಲಾವಣೆಗಾಗಿ ಸಿಪಿಐಎಂ ಗೆ ಮತ ನೀಡಿ, ಮುನಿವೆಂಕಟಪ್ಪರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಕೂಡ ಬಿಜೆಪಿಗಿಂತ ಏನೂ ಭಿನ್ನವಾಗಿಲ್ಲ. ಅದು ಸಹ ಕಾರ್ಪೊರೇಟರ್ಗಳಿಗೆ ತಕ್ಕಂತೆ, ಅದರ ಮಾಲೀಕರಿಗೆ ತಕ್ಕಂತೆ ಕುಣಿಯುತ್ತಿದೆ. ಸಂವಿಧಾನ ಮೇಲೆ ದಾಳಿ ನಡೆದಾಗ, ಕಾರ್ಮಿಕ, ರೈತ, ದಲಿತ, ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದಾಗ ಬಿಜೆಪಿ ಮೌನ ವಹಿಸುತ್ತದೆ. ಜತ್ಯಾತೀತತೆಯ ಮುಖವಾಡ ಧರಿಸಿರುವ ಕಾಂಗ್ರೆಸ್ ನವ ಉದಾರವಾದ ನೀತಿಗಳ ಜಾರಿ ಮಾಡುತ್ತಿದೆ ಎಂಬ ಅಪಾಯವನ್ನು ಮತದಾರರು ಅರಿಯಬೇಕು. ದುಡಿಯವ ಜನರ ಸಂಕಷ್ಟಗಳ ಪರಿಹಾರಕ್ಕಾಗಿ ಸಿಪಿಐಎಂ ಅಭ್ಯರ್ಥಿಗಳು ಗೆಲ್ಲಬೇಕಿದೆ. ಜನರ ಆರ್ಥಿಕತೆಯನ್ನು ಬಲಪಡಿಸುವ ಯೋಜನೆಗಳಾದ ಮನರೇಗಾ, ಪಡಿತರ ಆಹಾರ, ಆರೋಗ್ಯ, ಶಿಕ್ಷಣದ ಖಾಸಗೀಕರಣ ತಡೆಯಲು ಸಿಪಿಐಎಂ ಪಕ್ಷ ಅತಿ ಮುಖ್ಯವಾಗಿದೆ. ಸರ್ವಜನಿಕ ವ್ಯವಸ್ಥೆ ಉಳಿದಿದ್ದರೆ ಅದು ಸಿಪಿಐಎಂ ಸಂಸತ್ತಿನಲ್ಲಿ ನಡೆಸಿದ ಹೋರಾಟದ ಫಲ. ಹಾಗಾಗಿ ಸಿಪಿಐಎಂ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಬೃಂದಾ ಕಾರಟ್ ಕರೆ ನೀಡಿ ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ಕೇಂದ್ರ ಸಮಿತಿ ಸದಸ್ಯ ಕೆ.ಎನ್ ಉಮೇಶ್, ಅಭ್ಯರ್ಥಿ ಮುನಿವೆಂಕಟಪ್ಪ, ಮುಖಂಡರಾದ ಸಿದ್ದಗಂಗಪ್ಪ, ಸಾವಿತ್ರಮ್ಮ, ಡಾ. ಅನೀಲ್, ಮುನಿಕೃಷ್ಣಪ್ಪ, ಜಯರಾಮರೆಡ್ಡಿ, ರಘುರಾಮರೆಡ್ಡಿ, ಓಬಳೇಶ್ ರಾಜು, ಚಂದ್ರ ತೇಜಸ್ವಿ, ನಾಗರಾಜ, ಎಸ್.ವೈ ಗುರುಶಾಂತ ಸೇರಿದಂತೆ ಮತ್ತಿತ್ತರರಿದ್ದರು.
ಇದನ್ನೂ ನೋಡಿ: ಕೋಮುವಾದಿಗಳನ್ನು ಸೋಲಿಸುವುದು ಜಾಗೃತ ನಾಗರಿಕರ ಜವಾಬ್ದಾರಿ – ಬಂಜಗೆರೆ ಜಯಪ್ರಕಾಶ್ Janashakthi Media