ಹಸಿಗಾಯದ ವಾಸನೆ

– ಕವಿರಾಜ್ ಚಿತ್ರ ಸಾಹಿತಿ

ಪ್ರೀತಿಸಿದಳು
ಎಂಬ ಕಾರಣಕ್ಕೆ
ಹೆತ್ತ ತಂದೆ ತಾಯಿ
ಒಡ ಹುಟ್ಟಿದ
ಅಣ್ಣ ತಮ್ಮಂದಿರೇ
ಕೊಂದು ಬಿಸಾಡುವುದು
ನಿತ್ಯದ ಸುದ್ದಿ ಇಲ್ಲಿ

ಪ್ರೀತಿಸಿ ಮರೆತಳು ಎಂದು
ವಿಕೃತ ಭಗ್ನ ಪ್ರೇಮಿಗಳು
ಆಸಿಡ್ ಎರಚಿ ಸುಟ್ಟುಕೊಂದ
ಹಸಿಗಾಯದ ವಾಸನೆಯೂ
ಆಗಾಗ ಮೂಗಿಗೆ ರಾಚುತ್ತಿರುತ್ತದೆ

ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ
ನರ ರಾಕ್ಷಸರು
ಬೀದಿಯಲ್ಲಿ
ಇರಿದಿರಿದು ಕೊಂದಾಗ
ಮೊಂಬತ್ತಿ ಹಚ್ಚಿ
ಸಂತಾಪ ಸೂಚಿಸೋದು
ನಿನಗೀಗ ಮಾಮೂಲಿಯೇ

ಇದನ್ನೂ ಓದಿ:ಕರ್ನಾಟಕ ರಾಷ್ಟ್ರೀಯ ಅಂತರರಾಷ್ಟ್ರೀಯ ಇತರೆ ವಿದ್ಯಮಾನ ಪ್ರಚಾರದ ವೇಳೆ ಮಸೀದಿಯತ್ತ ಬಾಣದ ಸನ್ನೆ : ಬಿಜೆಪಿ ಅಭ್ಯರ್ಥಿಯಿಂದ ವಿವಾದ ಸೃಷ್ಟಿ

ಪ್ರೀತಿಸಿದರು
ಪ್ರೀತಿಸಿ ಮರೆತರು
ಪ್ರೀತಿಸದಿದ್ದರು
ಕೊಲ್ಲಲ್ಪಡುವುದು
ನಿನಗಷ್ಟೇ ದೊರೆತ
ಎಕ್ಸ್ಕ್ಲೂಸಿವ್ ಸೌಭಾಗ್ಯ ಇಲ್ಲಿ

ಓ ಹೆಣ್ಣೇ …
ಜಗದ ಅಷ್ಟೂ ಜನಕ್ಕೂ
ಪ್ರಾಣ ಕೊಡುವ
ನಿನ್ನ ಪ್ರಾಣ ತೆಗೆಯುವುದು
ಸೊಳ್ಳೆ ಹೊಡೆದು
ರಕ್ತವೊರೆಸಿಕೊಂಡಷ್ಟೇ
ಸುಲಭವಾಗಿ ಹೋಯಿತಲ್ಲೇ

ಬಹುಶಃ
ತಪ್ಪು ನಿನ್ನದೇ
ನೀನೇ ಅಲ್ಲವೇ
ಇಂತವರೆಲ್ಲರಿಗೂ
ಜನ್ಮ ಕೊಟ್ಟವಳು

ಇದನ್ನೂ ನೋಡಿ: ‘ಮೋದಿ ಗ್ಯಾರಂಟಿಗಳ’ ಮರೆಮೋಸದ ವಿವರಗಳು ಗೊತ್ತೇ? Janashakthi Media

Donate Janashakthi Media

Leave a Reply

Your email address will not be published. Required fields are marked *