ಗಾಲಿ ಜನಾರ್ಧನ ರೆಡ್ಡಿ ಬಿಜೆಪಿ ಮರುಸೇರ್ಪಡೆ ʼಯಾರಿಗೆʼ ಲಾಭವಾಗಲಿದೆ ..?

ವಿಶೇಷ ವರದಿ : ಸಂಧ್ಯಾ ಸೊರಬ
ಬೆಂಗಳೂರು: ಕಳೆದ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕಾಲ ಮೇಲೆಯೇ ತಾವೇ ಮಾಡಿಕೊಂಡ ಎಡವಟ್ಟಿನಿಂದ ಕಮಲದ ಮೇಲೆ ಚಪ್ಪಡಿ ಕಲ್ಲು ಹಾಕಿದ್ದಂತಹ ಬಿಜೆಪಿಗೆ, ಕಾಂಗ್ರೆಸ್‌ನ ಭರ್ಜರಿ ಗೆಲುವು ಒಂದುಕಡೆ ಸಖತ್‌ ಏಟು ಕೊಟ್ಟಿದೆ. ಇನ್ನೊಂದು ಕಡೆ ಕಮಲದ ದಳಗಳೇ ಉದುರವಂತೆ ಮಾಡಿದೆ. ಹೀಗಾಗಿ  ದಕ್ಷಿಣದ ಹೆಬ್ಬಾಗಿಲು ಕರ್ನಾಟಕದಲ್ಲಿ ಹೇಗಾದರೂ ಮಾಡಿ ಈ ಬಾರಿ ಕಮಲವನ್ನು ಹೆಚ್ಚಾಗಿ ಅರಳಿಸಬೇಕು ಎನ್ನುವ ಉದ್ದೇಶದಿಂದ ಬಿಜೆಪಿಯಿಂದ ಹಿಂದೆ ಸರಿದಿದ್ದವರನ್ನೆಲ್ಲಾ ಬರಮಾಡಿಕೊಳ್ಳುವ  ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತಿದ್ದಾರೆ. ಹೀಗಾಗಿ ಅಳಿದುಳಿದವರೆನ್ನೆಲ್ಲಾ ಒಟ್ಟುಗೂಡಿಸುವ ಕಸರತ್ತನ್ನು ಕಮಲ ಪಾಳಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ಬಳ್ಳಾರಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ‍ಶ್ರೀರಾಮುಲು ಅವರನ್ನು ಗೆಲ್ಲಿಸಲು, ಒಂದು ಟೈಮಲ್ಲಿ ಗಣಿಧಣಿ ಎಂದೇ (ಕು)ಖ್ಯಾತಿಯನ್ನು ಪಡೆದುಕೊಂಡಿದ್ದ ‍ಗಾಲಿ ಜನಾರ್ಧನ ರೆಡ್ಡಿಯನ್ನು ಬಿಜೆಪಿಗೆ ಸೇರಿಸಿಕೊಂಡಿದೆ. ಆದರೆ,  ಈ ಸೇರ್ಪಡೆಯಿಂದ  ಲಾಭವಾಗುವುದು ಗಾಲಿಜನಾರ್ಧನ ರೆಡ್ಡಿಗೆ ಹೊರತೂ, ಬಿಜೆಪಿಗೆ ಅಲ್ಲ, ಎನ್ನುತ್ತಿವೆ ಬಲ್ಲ ಮೂಲಗಳು. ಗಾಲಿ 

ಅಷ್ಟಕ್ಕೂ ಕಾರಣವೇನು ಎನ್ನುವುದನ್ನು ಹುಡುಕಲು ಹೊರಟಾಗ ಸಿಕ್ಕ ಮಾಹಿತಿ ಆಶ್ಚರ್ಯ ಮತ್ತು ತೀರಾ ಕುತೂಹಲ ಹುಟ್ಟಿಸುವುದಾಗಿದೆ. ಅದೂ ಜನಾರ್ಧನ ರೆಡ್ಡಿ, ಬಳಿ ಈಗ ಮೊದಲಿನಷ್ಟೂ ಸಂಪತ್ತು ಇಲ್ಲ ಎನ್ನುವುದು. ಅದೂ ಎಷ್ಟರ ಮಟ್ಟಿಗೆ ಅಂದರೆ, ಜನಾರ್ಧನರೆಡ್ಡಿಗೆ ಹಳೆಯ ಸಣ್ಣಪುಟ್ಟ್‌ ಚಾರ್ಮನ್ನು ಸಹ ಉಳಿಸಿಕೊಳ್ಳುವುದಕ್ಕೆ ಆಗದಷ್ಟೂ. ರೆಡ್ಡಿಯ ಆಪ್ತ ವಲಯದ ಮೂಲಗಳೇ ಹೇಳುವಂತೆ ರೆಡ್ಡಿಯ ಸುತ್ತ ಇದ್ದ ಬೌನ್ಸರ್‌ಗಳಿಗೂ ಸರಿಯಾಗಿ ಸಂಬಳ ಕೊಡಲು ಸಹ ರೆಡ್ಡಿಗೆ ಆಗತ್ತಿಲ್ಲ ಎನ್ನುವುದು. ಮೇಲ್ನೋಟಕ್ಕೆ ಜಬರ್ದಸ್ತ್‌ ಎಂದೂ ರೆಡ್ಡಿ, ತೋರಿಸಿಕೊಳ್ಳುವ ಹೊದಿಕೆ ಮಾತ್ರ ಹಾಕಿಕೊಂಡಿದ್ದಾರೆ ಎನ್ನುವುದು. ಯಾವುದ್ಯಾವುದೋ ಭರವಸೆಯನ್ನು ನೀಡಿ ಬಳ್ಳಾರಿಯಿಂದ ಸ್ಪರ್ಧಿಸಲು ಸಾಧ್ಯವಾಗದಿದ್ದಾಗ ಜನಾರ್ಧನ ರೆಡ್ಡಿ ಹುಡುಕಿದ್ದು “ಗಂಗಾವತಿ” ಕ್ಷೇತ್ರವನ್ನು. ಯಾವುದೇ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಲು ಸಾಧ್ಯವಾಗುತಿಲ್ಲ, ಅಲ್ಲದೇ ಬಳ್ಳಾರಿಯಲ್ಲಿ ಕಮಲ ಅರಳುವುದಿಲ್ಲ ಎನ್ನುವುದನ್ನುಗೊತ್ತುಮಾಡಿಕೊಂಡೆಯೇ ಜನಾರ್ಧನರೆಡ್ಡಿ ಗಂಗಾವತಿಗೆ ಹಾರಿದ್ದು. ಅದಕ್ಕೆ ಸ್ವಂತ ಪ್ರಾದೇಶಿಕ ಪಕ್ಷ ಎಂದು  “ಕಲ್ಯಾಣ ರಾಜ್ಯ ಪ್ರಗತಿ ಪಕ್ಷʼʼ  ಎನ್ನುತ್ತಲೇ ಗಂಗಾವತಿಗೆ ಜಂಪ್‌ ಮಾಡಿದ್ದ ರೆಡ್ಡಿ, ಅಲ್ಲಿ ಗೆದ್ದು ಶಾಸಕರಾಗಿ ಆಯಿತು. ಆದರೆ, ಗಮನಾರ್ಹವೆಂದರೆ, ಜನಾರ್ಧನರೆಡ್ಡಿಯನ್ನು ನಂಬಿ ಹಿಂಬಾಲಕರಾಗಿ ಕಮಲವನ್ನು ಬಿಟ್ಟು , ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಅನ್ನು ನಂಬಿಹೋಗಿದ್ದ ಬಿಜೆಪಿ ಕಾರ್ಯಕರ್ತರ ಗತಿ ಇದೀಗ ಅಧೋಗತಿ. ಅತ್ತವೂ ಇಲ್ಲದೇ, ಇತ್ತವೂ ಅಲ್ಲದೇ ತ್ರಿಶಂಕು ಸ್ಥಿತಿಯಂತಿದೆ ಕೆಆರ್‌ಪಿಪಿ. ಪಕ್ಷವನ್ನೇನೋ ಬಿಜೆಪಿಗೆ ಸೇರಿಸಿ ಆಯಿತು. ಆದರೆ, ಕಾರ್ಯಕರ್ತರು ಒಂದಾಗಬೇಕಲ್ಲವೇ? ಗಾಲಿ 

ಇದನ್ನೂ ಓದಿಗಾಲಿ ಜನಾರ್ದನ ರೆಡ್ಡಿಗಿಲ್ಲ ಬಳ್ಳಾರಿ ಪ್ರವೇಶ : ಸುಪ್ರೀಂಕೋರ್ಟ್

ಶಾಸಕರಾಗುವುದಕ್ಕೆ ರೆಡ್ಡಿ, ಮಾಡಿದ್ದ ಕಸರತ್ತು ಅಷ್ಟಿಷ್ಟೇನಲ್ಲ.ಗಣಿಹಗರಣದಿಂದ ಜೈಲುಪಾಲಾಗಿದ್ದ ರೆಡ್ಡಿಯನ್ನು ಬಿಜೆಪಿ ಕೈಬಿಟ್ಟಿತ್ತು. ಅಷ್ಟರಲ್ಲಿ ರೆಡ್ಡಿಯ ವರ್ಚಸ್ಸೂ ಕಡಿಮೆಯಾಯಿತು. ಅತ್ತ ಮತ್ತೆ ಗಣಿಧಣಿಯಾಗುವ ಕನಸು ಚೂರಾಯಿತು. ಅದಕ್ಕಾಗಿ ಮತ್ತೆ ರಾಜಕಾರಣದ ಅನಿವಾರ್ಯತೆಯ ದಾರಿ ಸೃಷ್ಟಿಯಾಯಿತು. ಎಲ್ಲಿಯೂ ಸಲ್ಲದಾಗ ಸ್ವಪಕ್ಷವನ್ನು ಕಟ್ಟಬೇಕಾಯಿತು. ರಾಜ್ಯಾದ್ಯಂತ ಸ್ವಂತ ಪಕ್ಷವೆಂಬ ಲೇಬಲ್‌ ಸಿಕ್ಕಿದರೂ ಒಂದಿಷ್ಟು ಮಂದಿ ಫಾಲೋವರ್‌ ಆದರು, ಬಿಜೆಪಿಯಿಂದ ರೆಡ್ಡಿ ಬೆನ್ನ ಹಿಂದೆ ಬಂದರು. ಆದರೆ, ಪಕ್ಷ ಕಟ್ಟಿದ್ದೂ ಬಿಟ್ಟರೆ ಜನಾರ್ಧನರೆಡ್ಡಿಗೆ ತಮ್ಮ ಬೆಂಬಲಿಗರನ್ನು ಬೆಳೆಸುವ ಬುದ್ಧಿ ಬರಲಿಲ್ಲ. ಸ್ವಹಿತಾಸಕ್ತಿಗಾಗಿ  ರೆಡ್ಡಿಯೇ ಸೃಷ್ಟಿಮಾಡಿದ್ದ ಕೆಆರ್‌ಪಿಪಿಯನ್ನು ನಂಬಿಹೋಗಿದ್ದವರೀಗ ಅತಂತ್ರ. ಅಷ್ಟಕ್ಕೂ ಜನಾರ್ಧನ ರೆಡ್ಡಿಯನ್ನು ಮತ್ತೆ ಬರಮಾಡಿಕೊಳ್ಳಲು ಅಮಿತ್‌ ಷಾ ಒಪ್ಪಿರಲಿಲ್ಲ. ಅದ್ಹೇಗೋ ಮಾಡಿ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರರನ್ನು ಕಾಡಿಬೇಡಿ ಕಮಲಕ್ಕೆ ಹಿಂತಿರುಗುವಂತಾಯಿತು. ಬಳ್ಳಾರಿಯಲ್ಲಿ ಶ್ರೀರಾಮುಲು ಗೆಲುವಿಗೆ ಇದು ಕಾರಣವಾಗಬಹುದೆಂಬ ಲೆಕ್ಕಾಚಾರದಿಂದ ಜನಾರ್ಧನರೆಡ್ಡಿಯನ್ನು ಬರಮಾಡಿಕೊಂಡಿದ್ದಾರೆಯಾದರೂ, ಅದರ ಲಾಭ ಮತ್ತೆ ರೆಡ್ಡಿಯ ರಾಜಕೀಯ ಪುನರ್ಜನಕ್ಕೆ ಹೊರತು ಶ್ರೀರಾಮುಲುವಿನ ಗೆಲುವಿಗಾಗಿ ಅಲ್ಲ, ಎನ್ನುತ್ತಿವೆ ಮೂಲಗಳು. ಗಾಲಿ

ಕಾರಣ, ಮೊದಲಿನಂತೆ ಬಳ್ಳಾರಿಯಲ್ಲಿ ಬಿಜೆಪಿ ಇಲ್ಲ. ಶ್ರೀರಾಮುಲು ಹಿಂದೂತ್ವದ ಹೆಸರಿನಲ್ಲಿ ವಾಲ್ಮೀಕಿನಾಯಕ ಜನಾಂಗವನ್ನು ಮಾತ್ರವೇ ನೋಡಿಕೊಳ್ಳುತ್ತಿದ್ದಾರಷ್ಟೇ, ಬೇರೆ ಇತರೆ ಸಮುದಾಯಗಳನ್ನಲ್ಲ. ಹೀಗಾಗಿಯೇ ಕಳೆದ ವಿಧಾನಸಭೆ ಚುನಾವಣೆಯಲ್ಲೂ ಇವರು ಸೋಲಬೇಕಾಯಿತು. ಆಗ ಜನಾರ್ಧನ ರೆಡ್ಡಿ ಹತ್ತಿರ ದುಡ್ಡಿನ ಬಲ ಇತ್ತು.  ಇದೇ ಭ್ರಮೆಯಲ್ಲಿನ್ನೂ ಬಿಜೆಪಿಯವರು ಇದ್ದಂತಿದೆ. ಆದರೆ, ಗಾಲಿಜನಾರ್ಧನರೆಡ್ಡಿ, ಮೈನ್ಸ್‌ ಬಿಸನೆಸ್‌ ಸೋ ಕಾಲ್ಡ್‌ ವ್ಯಾಪಾರಗಳು ಈಗ ಮೊದಲಿನಂತಿಲ್ಲ. ರೆಡ್ಡಿಯೆಂದರೆ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಯಾದಗಿರಿ ಈ ಭಾಗಗಳಲ್ಲಿ ಮತ ಬರುವ ಭ್ರಮೆಯಲ್ಲಿ ಬಿಜೆಪಿ ಇದೆ. ಆದರೆ, ಇಲ್ಲಿ ರೆಡ್ಡಿ ಮುಖಕ್ಕೆ ಮತಹಾಕುವವರೇ ಇಲ್ಲ. ಅವರ ಬಳಿಯಿರೋ ಹಣ ಬಂಗಾರವೆಲ್ಲ ಕಳೆದ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಇಟ್ಟು ಹರಸಾಹಸಪಟ್ಟು ಗೆದ್ದದ್ದಾಯಿತು. ಬಿಜೆಪಿ ಸೇರಿದ್ದಕ್ಕೆ ಮತ್ತೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಕ್ಕಿದೆ .ಆದರೆ, ಕೆ.ಆರ್.ಪಿಪಿಯಿಂದ ರೆಡ್ಡಿಯನ್ನುಬೆಂಬಲಿಸಿ ಸ್ಪರ್ಧಿಸುವವರೆಲ್ಲಾ ಬಹುತೇಕರು ಬೀದಿಗೆ ಬಂದಿದ್ದಾರೆ. ಎಲ್ಲರನ್ನೂ ನಂಬಿಸಿ ಕೈ ಕೊಟ್ಟು ಜನಾರ್ಧನರೆಡ್ಡಿ ತಾನಷ್ಟೇ ಗೆದ್ದು, ಈಗ ಮತ್ತೆ ಕಮಲದತ್ತ ಮುಖ ಮಾಡಿದ್ದಾರೆ .ಉದಾಹರಣೆಗೆ ರೆಡ್ಡಿಯನ್ನು ಆರಾಧಿಸಿ ಬೆನ್ನುಹಿಡಿದು ಸ್ಪರ್ಧಿಸಿ ಸೋತು ಎಲ್ಲವನ್ನೂ ಕಳೆದುಕೊಂಡ ಪ್ರವೀಣ್‌ ಹಿರೇಮಠ್‌ ಎನ್ನುವವರನ್ನು ಉಲ್ಲೇಖಿಸುತ್ತಾರೆ ರೆಡ್ಡಿಯ ಬಲ್ಲಮೂಲಗಳು. ಮತ್ತೆ ಬಿಜೆಪಿಗೆ ರೆಡ್ಡಿಯ ಈ ಸೇರ್ಪಡೆ ಮರುಭೂಮಿಯಲ್ಲಿ ಓಯಾಸಿಸ್‌ ಸಿಕ್ಕಂತೆ ಜನಾರ್ಧನ ರೆಡ್ಡಿಗೆ ಆಗಿದೆಯೇ ಹೊರತು. ಬಿಜೆಪಿಗಲ್ಲ. ಜನಾರ್ಧನರೆಡ್ಡಿಯ ಸೇರ್ಪಡೆ ಶ್ರೀರಾಮುಲುಗೆ ಲಾಭ ಎಂದು ಲೆಕ್ಕಾಚಾರ ಹಾಕುವುದಕ್ಕಿಂತ ಎಲ್ಲವೂ ಉಲ್ಟಾ ಆಗುವುದು ನಿಚ್ಚಳ ಎನ್ನಲಾಗುತ್ತಿದೆ. ಗಾಲಿ 

ವಿಡಿಯೋ ನೋಡಿJNU ವಿದ್ಯಾರ್ಥಿ ಸಂಘದ ಚುನಾವಣೆ : ಎಡ ವಿದ್ಯಾರ್ಥಿ ಸಂಘಟನೆಗಳಿಗೆ ಭರ್ಜರಿ ಗೆಲುವು Janashakthi Media

 

Donate Janashakthi Media

Leave a Reply

Your email address will not be published. Required fields are marked *