ಸಾರ್ವಜನಿಕ ವಿಶ್ವವಿದ್ಯಾಲಯಕ್ಕೆ ಏಕರೂಪದ ಶುಲ್ಕ | ರಾಜ್ಯ ಸರ್ಕಾರದಿಂದ ಅಂಗೀಕಾರ

ಬೆಂಗಳೂರು: ರಾಜ್ಯಾದ್ಯಂತ ಎಲ್ಲಾ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಏಕರೂಪದ ಶುಲ್ಕ ನಿಯಮ ರೂಪಿಸುವ ಬಗ್ಗೆ ಸರ್ಕಾರಕ್ಕೆ ನಿರ್ದೇಶಿಸಿ ತಜ್ಞರ ಸಮಿತಿ ನೀಡಿದ ವರದಿಯನ್ನು ಉನ್ನತ ಶಿಕ್ಷಣ ಇಲಾಖೆಯು ಅಂಗೀಕರಿಸಿದೆ. ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ (ಕೆಎಚ್‌ಇಸಿ)ಯ ವರದಿಯು ಅರ್ಜಿ, ಬೋಧನೆ, ಇನ್ವಿಜಿಲೇಷನ್ ಮತ್ತು ಮೌಲ್ಯಮಾಪನ ಶುಲ್ಕಗಳ ವಿಷಯದಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಏಕರೂಪದ ಶುಲ್ಕ ನಿಗದಿಪಡಿಸಿದೆ.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ಕೃಷಿ ವಿಜ್ಞಾನ ವಿಶ್ವವಿದ್ಯಾಲಯ (UAS) ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ನಂತಹ ವೃತ್ತಿಪರ ಕೋರ್ಸ್‌ಗಳನ್ನು ಬೋಧಿಸುವ ವಿಶ್ವವಿದ್ಯಾಲಯಗಳಿಗೆ ಹೊರತುಪಡಿಸಿ, ರಾಜ್ಯದ 32 ವಿಶ್ವವಿದ್ಯಾಲಯಗಳಿಗೆ ಈ ಸಾಮಾನ್ಯ ಶುಲ್ಕ ಅನ್ವಯಿಸಲಿದೆ. ಆದಾಗ್ಯೂ, ಸಮಿತಿಯು ಯಾವುದೇ ಶೈಕ್ಷಣಿಕ ವರ್ಷದಿಂದ ಈ ಶುಲ್ಕ ನಿಯಮವನ್ನು ಜಾರಿಗೊಳಿಸುವ ವಿವೇಚನೆಯನ್ನು ವಿಶ್ವವಿದ್ಯಾಲಯಗಳಿಗೆ ನೀಡಿದೆ. ಈ ನಿಟ್ಟಿನಲ್ಲಿ 2023ರ ಅಕ್ಟೋಬರ್ 16ರಂದು ಸರ್ಕಾರಿ ಆದೇಶ ಹೊರಡಿಸಲಾಗಿತ್ತು. ಸಾರ್ವಜನಿಕ ವಿಶ್ವವಿದ್ಯಾಲಯ

ಇದನ್ನೂ ಓದಿ: ಬಂಧನದ ಊಹಾಪೋಹ | ಕೇಜ್ರಿವಾಲ್ ನಿವಾಸದ ಹೊರಗೆ ಪೊಲೀಸ್ ಭದ್ರತೆ ಹೆಚ್ಚಳ

ಕೆಎಚ್‌ಇಸಿ ಉಪಾಧ್ಯಕ್ಷ ಡಾ.ವೈ.ಎಸ್. ಸಿದ್ದೇಗೌಡ ಅವರ ಅಧ್ಯಕ್ಷತೆಯಲ್ಲಿ ಸಿದ್ಧಪಡಿಸಲಾದ ವರದಿಯು ಪ್ರಸ್ತುತ ಪರೀಕ್ಷೆಯ ಮಾದರಿಗಳಲ್ಲಿ ಸುಧಾರಣೆಗಳನ್ನು ಸೂಚಿಸಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯದ ಉಪಕುಲಪತಿ ಲಿಂಗರಾಜ ಗಾಂಧಿ ನೇತೃತ್ವದ ಉಪಸಮಿತಿಯು ವಾರ್ಷಿಕವಾಗಿ 10% ಅಥವಾ ಪ್ರತಿ ಎರಡು ವರ್ಷಗಳಿಗೊಮ್ಮೆ 20-25% ದಷ್ಟು ಶುಲ್ಕವನ್ನು ಹೆಚ್ಚಿಸುವಂತೆ ಸೂಚಿಸಿದೆ.

ವಿವಿಧ ವಿಶ್ವವಿದ್ಯಾನಿಲಯಗಳು ತಮ್ಮದೇ ಆದ ಶುಲ್ಕವನ್ನು ವಿಧಿಸುತ್ತಿರುವುದರಿಂದ ಕೆಲವು ವಿದ್ಯಾರ್ಥಿಗಳಿಗೆ ಇದು ಅನಾನುಕೂಲತೆಯನ್ನು ಉಂಟುಮಾಡುವ ಹಿನ್ನೆಲೆಯಲ್ಲಿ ಶುಲ್ಕ ಏಕರೂಪತೆ ಅತ್ಯಗತ್ಯವಾಗಿದೆ ಎಂದು ವರದಿ ಉಲ್ಲೇಖಿಸಿದೆ. ವಸತಿ ಸೌಕರ್ಯದ ಕೊರತೆ, ಸ್ಥಳೀಯ ಸಾರಿಗೆ ವೆಚ್ಚಗಳು ಮತ್ತು ಮೌಲ್ಯಮಾಪನಕ್ಕಾಗಿ ಇತರ ವಿಶ್ವವಿದ್ಯಾಲಯಗಳಿಂದ ಅಧ್ಯಾಪಕರನ್ನು ನೇಮಿಸಿಕೊಳ್ಳುವುದು ಸೇರಿದಂತೆ ಇತರ ಅಂಶಗಳ ಜೊತೆಗೆ ವಾರ್ಷಿಕ ಶುಲ್ಕ ಹೆಚ್ಚಳವನ್ನು ಶಿಫಾರಸು ಮಾಡಲಾಗಿದೆ. ಸಾರ್ವಜನಿಕ ವಿಶ್ವವಿದ್ಯಾಲಯ

ಕಲಾ ಮತ್ತು ವಾಣಿಜ್ಯ ಕೋರ್ಸ್‌ಗಳಿಗೆ ಶಿಫಾರಸು ಮಾಡಲಾದ ಪರಿಷ್ಕೃತ ಶುಲ್ಕ:

ಬಿಎ – 11,700 ರೂ.
ಬಿಎ (ವಿಶೇಷ) – 16,200 ರೂ.
ಎಂಎ – 15,250 ರೂ.
ಬಿಕಾಂ – 19,700 ರೂ.
ಬಿಕಾಂ (ವಿಶೇಷ) – 24,700 ರೂ.
ಬಿಬಿಎ – 28,700 ರೂ.
ಬಿಬಿಎ (ವಿಶೇಷ) – 31,700 ರೂ.
ಎಂಕಾಮ್ – 19,750 ರೂ.
ಎಂಕಾಮ್ (ವಿಶೇಷ) – 64,750 ರೂ.

ಇದನ್ನೂ ಓದಿ: ವೈಎಸ್‌ಆರ್‌ ತೆಲಂಗಾಣ ಪಕ್ಷದ ಮುಖ್ಯಸ್ಥೆ ಶರ್ಮಿಳಾ ಕಾಂಗ್ರೆಸ್ ಸೇರ್ಪಡೆ

ವಿಜ್ಞಾನ ಕೋರ್ಸ್‌ನ ಪರಿಷ್ಕೃತ ಶುಲ್ಕ:

ಬಿಎಸ್ಸಿ – 21,700 ರೂ.
ಬಿಎಸ್ಸಿ (ವಿಶೇಷ) – 25,700 ರೂ.
ಬಿಸಿಎ – 30,700 ರೂ.
ಎಂಎಸ್ಸಿ ರೂ. – 17,750 ರೂ.
ಎಂಎಸ್ಸಿ (ಬಯೋ-ಟೆಕ್, ಮೈಕ್ರೋ-ಬಯಾಲಜಿ ಕೋರ್ಸ್‌ಗಳನ್ನು ಒಳಗೊಂಡಂತೆ) – 24,750 ರೂ.

ಇನ್ವಿಜಿಲೇಟರ್‌ಗಳ ಪಾವತಿ ಮಾದರಿ:

ಸಮಿತಿಯು ಎ, ಬಿ ಮತ್ತು ಸಿ ವರ್ಗದ ನಗರಗಳಲ್ಲಿನ ಸಂಸ್ಥೆಗಳನ್ನು ಅವಲಂಬಿಸಿ ಇನ್ವಿಜಿಲೇಟರ್‌ಗಳಿಗೆ ವಿಭಿನ್ನ ವೇತನ ಮಾದರಿಯನ್ನು ಶಿಫಾರಸು ಮಾಡಿದೆ. ಉದಾಹರಣೆಗೆ, ಎ ವರ್ಗದ ನಗರದಲ್ಲಿರುವ ಪರೀಕ್ಷಾ ಪರಿವೀಕ್ಷಕರು 1,000 ರೂ. ಮತ್ತು ಪ್ರಯಾಣ ಭತ್ಯೆಯನ್ನು ಪಡೆಯುತ್ತಾರೆ. ಬಿ ವರ್ಗದ ನಗರಗಳಲ್ಲಿ 900 ರೂ.  ಮತ್ತು ಸಿ ವರ್ಗದ ನಗರ ಇನ್ವಿಜಿಲೇಟರ್‌ಗಳು 800 ರೂ. ಪಡೆಯಲಿದ್ದಾರೆ. ಪ್ರಸ್ತುತ, ಈಗ ಎಲ್ಲಾ ಇನ್ವಿಜಿಲೇಟರ್‌ಗಳು 800 ರೂ. ಪಡೆಯುತ್ತಿದ್ದಾರೆ.

ವಿಡಿಯೊ ನೋಡಿ: ಬರಗಾಲದಿಂದ ರೈತರು ಕಂಗಾಲು : ರಾಮ ಭಜನೆಯಲ್ಲಿ ಕೇಂದ್ರ ಸರ್ಕಾರ, ನಿದ್ದೆಗೆ ಜಾರಿದ ರಾಜ್ಯ ಸರ್ಕಾರ

Donate Janashakthi Media

Leave a Reply

Your email address will not be published. Required fields are marked *