ಬಲೂಚಿಸ್ತಾನದಲ್ಲಿ 3,778 ಶಾಲೆಗಳು ಪುನಾರಂಭ; 7.17 ಲಕ್ಷ ಮಕ್ಕಳು ದಾಖಲು

ಕ್ವೆಟ್ಟಾ: ಬಲೂಚಿಸ್ತಾನದಾದ್ಯಂತ ಮುಚ್ಚಿಹೋಗಿದ್ದ ಸುಮಾರು 3,778 ಶಾಲೆಗಳನ್ನು ಅಭಿವೃದ್ಧಿಪಡಿಸಿ, ಮತ್ತೆ ಆರಂಭಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 7.17 ಲಕ್ಷ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ ಎಂದು ಬಲೂಚಿಸ್ತಾನ ಮುಖ್ಯಮಂತ್ರಿ ಮೀರ್ ಸರ್ಫರಾಜ್ ಬುಗ್ತಿ ತಿಳಿಸಿದ್ದಾರೆ. ಶಾಲೆಗಳು

ಸುಧಾರಣಾ ಕ್ರಮಗಳ ಪರಿಣಾಮವಾಗಿ, ದಾಖಲಾತಿ ಪ್ರಮಾಣ ಶೇ 11ರಷ್ಟು ಹೆಚ್ಚಾಗಿದೆ. ಹಾಗೆಯೇ, ಮಕ್ಕಳು ಅರ್ಧದಲ್ಲೇ ಶಾಲೆ ಬಿಡುವ ಪ್ರಮಾಣ ಶೇ 5ರಷ್ಟು ಕಡಿಮೆಯಾಗಿದೆ. ಇದು ಸರ್ಕಾರದ ನೀತಿಗಳು ಮತ್ತು ಸಾರ್ವಜನಿಕ ಶಿಕ್ಷಣದ ಮೇಲೆ ಜನರ ವಿಶ್ವಾಸ ಹೆಚ್ಚುತ್ತಿರುವುದರ ಸಂಕೇತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಶಾಲೆಗಳು

ಇದನ್ನೂ ಓದಿ: ಕಲಬುರಗಿಯಲ್ಲಿ ನೀಟ್ ವಿದ್ಯಾರ್ಥಿನಿ ಆತ್ಮಹತ್ಯೆ

ಬಲೂಚಿಸ್ತಾನದಾದ್ಯಂತ ಮುಚ್ಚಿಹೋಗಿದ್ದ ಸುಮಾರು 3,778 ಶಾಲೆಗಳನ್ನು ಅಭಿವೃದ್ಧಿಪಡಿಸಿ, ಮತ್ತೆ ಆರಂಭಿಸಲಾಗಿದೆ. ದೂರದ ಊರುಗಳ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಪ್ರದೇಶಗಳ ಸಾವಿರಾರು ಮಕ್ಕಳು ಶಾಲೆಗಳಿಗೆ ಮರಳಲು, ಶಿಕ್ಷಣ ಮುಂದುವರಿಸಲು ಇದರಿಂದ ಅವಕಾಶ ದೊರೆತಂತಾಗಿದೆ ಎಂದು ಬುಗ್ತಿ ತಿಳಿಸಿರುವುದಾಗಿ ‘Balochistan Pulse’ ವರದಿ ಮಾಡಿದೆ.

ಬಲೂಚಿಸ್ತಾನ ಹಿಂದುಳಿದಿದೆ ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಲು, ಮುಂದಿನ ತಲೆಮಾರಿನ ಸುಸ್ಥಿರ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವುದು ನಿರ್ಣಾಯಕವಾಗಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿನ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ಅದಕ್ಷತೆಯನ್ನು ತೊಡೆದುಹಾಕಲು ಸರ್ಕಾರ ಬದ್ಧವಾಗಿದೆ ಎಂದು ಬುಗ್ತಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ನೋಡಿ: ಗ್ರಾಮದ ನೀರು ವ್ಯವಸ್ಥೆ ಹೊತ್ತವರ ಬದುಕೇ ಅಸ್ಥಿರ; ನೀರಗಂಟಿಗಳ ಸಂಕಷ್ಟ Janashakthi Media

Donate Janashakthi Media

Leave a Reply

Your email address will not be published. Required fields are marked *