ಎಸ್‌ಐಆರ್‌ ಪ್ರಕ್ರಿಯೆ: 4ನೇ ಬಿಎಲ್‌ಒ ಸಾವು – ಟಿಎಂಸಿ ನಾಯಕರು ಆಕ್ರೋಎಸ್‌ಐಆರ್‌ ಪ್ರಕ್ರಿಯೆ: 4ನೇ ಬಿಎಲ್‌ಒ ಸಾವು – ಟಿಎಂಸಿ ನಾಯಕರು ಆಕ್ರೋಶ

ಕೋಲ್ಕತಾ: ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಯಲ್ಲಿ ತೊಡಗಿದ್ದ ಬೂತ್‌ ಮಟ್ಟದ ಅಧಿಕಾರಿ (ಬಿಎಲ್‌ಒ) ಒಬ್ಬರು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ನಡೆದಿದ್ದು, ಇದರಿಂದ ಬಂಗಾಲದಲ್ಲಿ ಬಿಎಲ್‌ಒ ಸಾವಿನ ಸಂಖ್ಯೆ 4ಕ್ಕೆ ಏರಿರುವುದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಮೃತ ಬಿಎಲ್‌ಒನನ್ನು ಝಾಕಿರ್‌ ಹುಸೇನ್‌ ಎಂದು ಗುರುತಿಸಿದ್ದು, ನವೆಂಬರ್‌ 27ರ ಮಧ್ಯಾಹ್ನ ಎದೆನೋವಿನಿಂದ ಮೃತಪಟ್ಟಿದ್ದಾರೆ. ಆದರೆ ಕುಟುಂಬಸ್ಥರು ಕೆಲಸದ ಒತ್ತಡದಿಂದ ಮೃತಪಟ್ಟಿದ್ದಾರೆಂದು ಆರೋಪಿಸಿದ್ದಾರೆ. ಎಸ್‌ಐಆರ್‌

ಇದನ್ನೂ ಓದಿ: ನಾವಿಬ್ಬರು ಒಂದಾಗಿದ್ದೇವೆ, ಹೈಕಮಾಂಡ್‌ ಹೇಳಿದಂತೆ ಕೇಳುತ್ತೇವೆ | ಸಿಎಂ -ಡಿಸಿಎಂ ಒಗ್ಗಟಿನ ಸಂದೇಶ

ಸಿಎಂ ಮಮತಾ ಬ್ಯಾನರ್ಜಿ ಸೇರಿ ಟಿಎಂಸಿ ನಾಯಕರು ಚುನಾವಣ ಆಯೋಗ ಹಾಗೂ ಕೇಂದ್ರ ಸರಕಾರ ಬಿಎಲ್‌ಒಗಳ ಮೇಲೆ ಅಮಾನವೀಯ, ಯೋಜಿತವಲ್ಲದ ಕೆಲಸದ ಒತ್ತಡ ಹೇರುತ್ತಿದೆ ಎಂದಿದ್ದಾರೆ.

ಚುನಾವಣ ಆಯೋಗದ ಜತೆ ಟಿಎಂಸಿ ಮಾತುಕತೆ

ರಾಜ್ಯಸಭೆ ಸದಸ್ಯ ಡೆರೆಕ್‌ ಒಬ್ರಿಯಾನ್‌ ನೇತೃತ್ವದ, ಮಹುವಾ ಸೇರಿ ಟಿಎಂಸಿಯ 10 ಸದಸ್ಯರಿರುವ ನಿಯೋಗ ಚುನಾವಣ ಆಯೋಗ ಪೀಠವನ್ನು ಭೇಟಿ ಮಾಡಿತು.

ಇದನ್ನೂ ನೋಡಿ: ರೈತ – ಕಾರ್ಮಿಕರ ಧರಣಿ | ಧರಣಿ ಸ್ಥಳಕ್ಕೆ ಆಗಮಿಸಿದ ಸಚಿವ ಎಚ್‌.ಸಿ. ಮಹದೇವಪ್ಪ

Donate Janashakthi Media

Leave a Reply

Your email address will not be published. Required fields are marked *