ಕೋಲಾರ: ಬಂಗಾರಪೇಟೆಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ 3 ಅಂತಸ್ತಿನ ಕಟ್ಟಡ ಕುಸಿತವಾಗಿ ಭೀಕರ ಅವಘಡ ಸಂಭವಿಸಿದೆ. ಅಗ್ನಿ ಶಾಮಕದಳ ಸಿಬ್ಬಂದಿ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ಬಂಗಾರಪೇಟೆಯ ಕೆಇಬಿ ರಸ್ತೆಯಲ್ಲಿ ಬೂದಿಕೋಟೆ ರಾಜ್ ಕುಮಾರ್ ಎಂಬುವವರಿಗೆ ಸೇರಿದ 3 ಅಂತಸ್ತಿನ ಕಟ್ಟಡ ಇದೀಗ ಧರಾಶಾಹಿಯಾಗಿದೆ. ಕಟ್ಟಡದಲ್ಲಿದ್ದ ಮೂರು ಪ್ರತ್ಯೇಕ ಕುಟುಂಬದ ಸದಸ್ಯರು ಬಚಾವ್ ಆಗಿದ್ದಾರೆ.
ಇದನ್ನೂ ಓದಿ: ‘ಟೆಲಿಮನಸ್’ ಆಯಪ್ ಬಿಡುಗಡೆ ಮಾಡಲಿರುವ ರಾಜ್ಯ ಸರ್ಕಾರ
ಗೌಂಡ್ ಫ್ಲೋರ್ ಗೋಡೆ ರಿಪೇರಿ ವೇಳೆ ದಿಢೀರ್ ಮೇಲಿನ ಕಟ್ಟಡಗಳು ಕುಸಿತವಾಗಿದ್ದು, ದೊಡ್ಡ ಅನಾಹುತ ತಪ್ಪಿದೆ. ಮನೆ ಕಟ್ಟಡ ವಾಲಿದ್ದರೂ, ಮಾಲೀಕ ನಿರ್ಲಕ್ಷ್ಯ ವಹಿಸಿದ್ದೆ ದುರಂತಕ್ಕೆ ಪ್ರಮುಖ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ. ಅಗ್ನಿಶಾಮಕದಳ ಸಿಬ್ಬಂದಿ ಸೂಕ್ತ ಸಮಯಕ್ಕೆ ಸ್ಥಳಕ್ಕಾಗಮಿಸಿ ಅನಾಹುತ ತಪ್ಪಿಸಿದ್ದಾರೆ.
ಅಪಾಯದ ಮುನ್ಸೂಚನೆ ಅರಿತು ತ್ವರಿತವಾಗಿ ಸ್ಥಳಕ್ಕಾಗಮಿಸಿದ ಸಿಬ್ಬಂದಿ, ಮನೆಯಲ್ಲಿದ್ದ ಎಲ್ಲರನ್ನ ಹೊರಕ್ಕೆ ಕಳುಹಿಸಿದ್ದಾರೆ.ನಂತರ ಕಟ್ಟಡ ನೆಲಸಮವಾಗಿದೆ. ಕಟ್ಟಡ ಬಿದ್ದು ದಟ್ಟವಾದ ಧೂಳು ಆವರಿಸಿ, ಕಾರ್ಯಾಚರಣೆ ನಡೆಯುತ್ತಿರುವ ಕಾರಣ ಕೆಇಬಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಇದನ್ನೂ ನೋಡಿ: ಅನ್ನದಲ್ಲಿ ಹುಳು, ಕೊಳೆತ ತರಕಾರಿ ಇದನ್ನೆ ತಿನ್ರಿ ಅಂತಾರೆ ವಾರ್ಡ್‌ನ – ವಿದ್ಯಾರ್ಥಿಗಳ ಪ್ರತಿಭಟನೆJanashakthi Media