ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳು, ವಾಹನಗಳ ಕೆಟ್ಟು ನಿಲ್ಲುವಿಕೆ ಹಾಗೂ ಸಂಚಾರ ವ್ಯತ್ಯಯಗಳಿಗೆ ತಕ್ಷಣ ಸ್ಪಂದಿಸುವ ಉದ್ದೇಶದಿಂದ, ಹೊಸದಾಗಿ ಪೂರ್ಣಗೊಂಡ ಹೆದ್ದಾರಿಗಳಲ್ಲಿ ಸಂಚಾರ ಆರಂಭಿಸುವ ಮುನ್ನ 24 ಗಂಟೆಯ ತುರ್ತು ನಿರ್ವಹಣಾ ವ್ಯವಸ್ಥೆ (Incident Management System – IMS) ಕಡ್ಡಾಯಗೊಳಿಸಲಾಗಿದೆ. ಆಂಬುಲೆನ್ಸ್, ವಾಹನಗಳನ್ನು ತೆರವುಗೊಳಿಸುವ ಕ್ರೇನ್, ಗಸ್ತು ವಾಹನ ಹಾಗೂ ತುರ್ತು ಸಹಾಯವಾಣಿ 1033ರ ಸಂಪರ್ಕ ವ್ಯವಸ್ಥೆ ಈ ಯೋಜನೆಯ ಭಾಗವಾಗಿರಲಿವೆ. ಹೊಸ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ, ಹೆದ್ದಾರಿಗಳಲ್ಲಿ ಸಂಚಾರ ಆರಂಭಿಸುವ ಮುನ್ನ ತುರ್ತು ನಿರ್ವಹಣಾ ವ್ಯವಸ್ಥೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಅಪಘಾತ ಅಥವಾ ವಾಹನ ಕೆಟ್ಟು ನಿಂತ ಸಂದರ್ಭದಲ್ಲಿ ಪ್ರಯಾಣಿಕರಿಗೆ ತಕ್ಷಣ ನೆರವು ನೀಡುವುದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು ಮತ್ತು ರಸ್ತೆ ಮೇಲಿನ ಅಡೆತಡೆಗಳನ್ನು ತೆರವುಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ವ್ಯವಸ್ಥೆಯಲ್ಲಿ ಆಂಬುಲೆನ್ಸ್‌ಗಳು, ವಾಹನಗಳನ್ನು ಎಳೆದುಕೊಂಡು ಹೋಗುವ ಟೋಯಿಂಗ್ ವಾಹನಗಳು ಹಾಗೂ ಗಸ್ತು ವಾಹನಗಳು ಇರಲಿವೆ. ಅಲ್ಲದೆ, 1033 ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿಯನ್ನು ಸ್ಥಳೀಯ ಪೊಲೀಸ್ ಠಾಣೆ, ಅಗ್ನಿಶಾಮಕ ಇಲಾಖೆ ಮತ್ತು ಆಸ್ಪತ್ರೆಗಳೊಂದಿಗೆ ಸಂಪರ್ಕಿಸುವ ಮೂಲಕ ತುರ್ತು ಸಂದರ್ಭಗಳಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗುತ್ತದೆ.
ಇದನ್ನೂ ಓದಿ : ಮೋದಿ ವಿರುದ್ಧದ ತನಿಖೆ ನಿಲ್ಲಿಸಿದ್ದು ನಮ್ಮವರೇ! ಈಗ ಕಾಂಗ್ರೆಸ್ ಬೆಲೆ ತೆರುತ್ತಿದೆ: ವೀರಪ್ಪ ಮೊಯ್ಲಿ ಸ್ಫೋಟಕ ಹೇಳಿ
ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಣೆ ಆರಂಭವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸದೆ ಈ ವ್ಯವಸ್ಥೆ ಕಡ್ಡಾಯವಾಗಿ ಜಾರಿಯಲ್ಲಿರಬೇಕು ಎಂದು ಎನ್‌ಎಚ್‌ಎಐ ಸ್ಪಷ್ಟಪಡಿಸಿದೆ. ಪೂರ್ಣಗೊಂಡ ಹೆದ್ದಾರಿ ಮಾರ್ಗಗಳಲ್ಲಿ ಸಂಚಾರಕ್ಕೆ ಅನುಮತಿ ನೀಡುವ ಮೊದಲು ತುರ್ತು ನಿರ್ವಹಣಾ ವ್ಯವಸ್ಥೆ ಸಿದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಅಪಘಾತ ಸಂಭವಿಸಿದ ಸ್ಥಳಕ್ಕೆ ರಕ್ಷಣಾ ಆಂಬುಲೆನ್ಸ್ ವ್ಯವಸ್ಥೆ ಮಾಡುವ ಜವಾಬ್ದಾರಿ ಎನ್‌ಎಚ್‌ಎಐಗೆ ವಹಿಸಲಾಗಿದೆ. ಹೆದ್ದಾರಿ ಪ್ರಯಾಣಿಕರ ಸುರಕ್ಷತೆ ಹಾಗೂ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತ್ವರಿತ ನೆರವು ಒದಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ನೋಡಿ : ಎಸ್‌ಐಆರ್ ಅಕ್ರಮಗಳ ವಿರುದ್ಧ ಜನಾಂದೋಲನ: ನವೆಂಬರ್ 26ರಿಂದ ಬೃಹತ್ ಹೋರಾಟJanashakthi Media
