ಬೆಂಗಳೂರು: ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಕಾರಣಕ್ಕಾಗಿ 18 ಬಿಜೆಪಿ ಶಾಸಕರನ್ನು ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ.
ಸ್ಪೀಕರ್ ಪೀಠಕ್ಕೆ ಅಮಾನತು ಮಾಡಿದ ಹಿನ್ನೆಲೆ 18 ಬಿಜೆಪಿ ಶಾಸಕರನ್ನು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರು ಅಮಾನತುಗೊಳಿಸಿದ್ದಾರೆ. ಈ ಮೂಲಕ ಆರು ತಿಂಗಳುಗಳ ಕಾಲ ಅವರು ಅಮಾನತುಗೊಂಡಿದ್ದಾರೆ.
ಅಮಾನತುಗೊಂಡ ಶಾಸಕರಲ್ಲಿ ಡಾ. ಸಿಎನ್ಅಶ್ವತ್ಥ ನಾರಾಯಣ, ಸುನೀಲ್ ಕುಮಾರ್, ಆರ್ ಅಶೋಕ್, ವೇದವ್ಯಾಸ ಸೇರಿದಂತೆ ಇತರರು ಸೇರಿದ್ದಾರೆ.
ಇದನ್ನು ಓದಿ: 9 ತಿಂಗಳ ಬಾಹ್ಯಾಕಾಶ ವಾಸ: ಸುನಿತಾ ವಿಲಿಯಮ್ಸ್ ಪಡೆಯುವ ಸಂಬಳ ಎಷ್ಟು?
ಈ ಘಟನೆ ವಿಧಾನಸಭೆಯ ಶಿಸ್ತಿನ ನಿಯಮಗಳನ್ನು ಪ್ರಶ್ನಿಸುವಂತಾಗಿದೆ. ಶಾಸಕರ ಈ ರೀತಿಯ ವರ್ತನೆ ಸದನದ ಗೌರವಕ್ಕೆ ಧಕ್ಕೆ ತರುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಮಾನತು ನಿರ್ಧಾರವು ಶಾಸಕರಿಗೆ ಶಿಸ್ತಿನ ಪಾಠವಾಗಲಿದೆ ಎಂಬ ನಿರೀಕ್ಷೆ ಇದೆ.
ಇದರಿಂದ ಮುಂದಿನ ಅಧಿವೇಶನಗಳಲ್ಲಿ ಶಾಸಕರು ಸದನದ ನಿಯಮಗಳನ್ನು ಪಾಲಿಸಲು ಹೆಚ್ಚು ಗಮನ ಹರಿಸುವ ಅಗತ್ಯವಿದೆ. ಸ್ಪೀಕರ್ ಪೀಠದ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಶಾಸಕರ ಜವಾಬ್ದಾರಿಯಾಗಿದೆ. ಅದರಿಂದಲೇ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯುತ್ತವೆ.
ಅಮಾನತುಗೊಂಡ ಶಾಸಕರು:
- ಸಿ ಎನ್ ಅಶ್ವಥ್ ನಾರಾಯಣ್
- ಉಮಾನಾಥ್ ಕೋಟ್ಯಾನ್
- ಸಿ ಕೆ ರಾಮಮೂರ್ತಿ
- ದೊಡ್ಡಣ್ಣ ಗೌಡ್ ಪಾಟೀಲ್
- ಬೈರತಿ ಬಸವರಾಜ್
- ಎಸ್ ಆರ್ ವಿಶ್ವನಾಥ್
- ಚನ್ನಬಸಪ್ಪ
- ಬೀ ಸುರೇಶ್ ಗೌಡ
- ಶರಣು ಸಲಗರ್
- ಭರತ್ ಶೆಟ್ಟಿ
- ಮುನಿರತ್ನ
- ಯಶ್ ಪಾಲ್ ಸುವರ್ಣ
- ಹರೀಶ್ ಬಿಪಿ
- ಶೈಲೇಂದ್ರ ಬೆಲ್ದಾಳೆ
- ಬಸವರಾಜ್ ಮತ್ತಿ ಮೋಡ್
- ಡಾಕ್ಟರ್ ಚಂದ್ರು ಲಮಾಣಿ
- ಧೀರಜ್ ಮುನಿರಾಜು
- ಎಂ ಆರ್ ಪಾಟೀಲ್
ಇದನ್ನು ಓದಿ:ಬಜೆಟ್ ಅಂಗೀಕಾರದ ಮುನ್ಸೂಚನೆ: ಬಿಜೆಪಿಯಿಂದ ಸಂಸದರಿಗೆ ಮೂರು ಸಾಲಿನ ವಿಪ್!
ಷರತ್ತುಗಳು:
1. ಅವರುಗಳು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿಲ್ಲ.
2. ಅವರು ಸದಸ್ಯರಾಗಿರುವ ವಿಧಾನಮಂಡಲದ/ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿಯೂ ಭಾಗವಹಿಸುವಂತಿಲ್ಲ.
3. ವಿಧಾನ ಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡತಕ್ಕದಲ್ಲ.
4. ಅಮಾನತ್ತಿನ ಅವಧಿಯಲ್ಲಿ ಅವರುಗಳು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ.
5. ಅಮಾನತ್ತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಅವರುಗಳು ಮತದಾನ ಮಾಡುವಂತಿಲ್ಲ.
6. ಅಮಾನತ್ತಿನ ಅವಧಿಯಲ್ಲಿ ಅವರುಗಳು ಯಾವುದೇ ದಿನಭತ್ಯೆಯನ್ನು ಪಡೆಯಲು ಅರ್ಹರಿರುವುದಿಲ್ಲ.
18 ಶಾಸಕರನ್ನು ಅಮಾನತು ಮಾಡಿದರೂ ಬಿಜೆಪಿ ಸದಸ್ಯರು ಸದನದಲ್ಲಿ ಧರಣಿ ಮುಂದುವರಿಸಿದರು.