ಮಾರ್ಗಸೂಚಿ ಪ್ರಕಾರ ಕಾರ್ಯ ನಿರ್ವಹಿಸದೆ ಇರುವ 14 ಪಿಜಿಗಳಿಗೆ ಬೀಗ

ಬೆಂಗಳೂರು: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾರ್ಗಸೂಚಿ ಪ್ರಕಾರ ಕಾರ್ಯ ನಿರ್ವಹಿಸದೆ ಇರುವ  14 ಪಿಜಿಗಳಿಗೆ ಬೀಗ ಜಡಿಯಲಾಗಿದೆ ಎಂದು ಆಯುಕ್ತ ಡಿ.ಎಸ್‌‍.ರಮೇಶ್‌ ತಿಳಿಸಿದ್ದಾರೆ.

ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆಯದೇ ಎಸ್‌‍.ಒ.ಪಿ ಮಾನದಂಡಗಳನ್ನು ಉಲ್ಲಂಘಿಸಿ, ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಪಿಜಿ ಗಳ ವಿರುದ್ಧ ಕಾರ್ಯಾಚರಣೆ ಹಾಗೂ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಡೆಸುವಂತೆ ಆರೋಗ್ಯ ವಿಭಾಗ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಮಾರ್ಗಸೂಚಿ

ನಿಯಮಬಾಹಿರವಾಗಿ ಮತ್ತು ಜಿಬಿಎ ಕಾಯ್ದೆ, 2024ರ ಅನ್ವಯ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳನ್ನು ಪಾಲಿಸದೆ ಕಾರ್ಯನಿರ್ವಹಿಸುತ್ತಿರುವ 14 ಪೇಯಿಂಗ್‌ ಗೆಸ್ಟ್‌ಗಳನ್ನು ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್‌ ಸುಧಾಕರ್‌ ಮಾರ್ಗದರ್ಶನದಲ್ಲಿ,ಆರೋಗ್ಯಾಧಿಕಾರಿ ಡಾ. ಸವಿತಾ ನೇತೃತ್ವದ ಆರೋಗ್ಯ ವೈದ್ಯಾಧಿಕಾರಿಗಳ ತಂಡ ಈ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ಮಾರ್ಗಸೂಚಿ

ಇದನ್ನೂ ಓದಿ: ರಾಮದುರ್ಗ | ದೇಶದಲ್ಲಿ ಸೌಹಾರ್ದತೆ ಉಳಿಸಲು ಗಾಂಧೀಜಿ ಜೀವನಪೂರ್ತಿ ಹೋರಾಡಿದರು – ಚಿಂತಕ ದಿನೇಶ್‌ ಅಮ್ಮೀನಮಟ್ಟು

ನಮ ವ್ಯಾಪ್ತಿಯಲ್ಲಿ ನ.10 ರಿಂದ 15ರ ವರೆಗೆ ನಡೆಸಲಾಗಿದ್ದ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನದಲ್ಲಿ 17 ವಾರ್ಡ್‌ಗಳ ವ್ಯಾಪ್ತಿಯಲ್ಲಿ 466 ಉದ್ದಿಮೆದಾರರು ಏಕ ಗವಾಕ್ಷಿ ಅಡಿಯಲ್ಲಿ ಒಟ್ಟು 25,52,800 ಶುಲ್ಕ ಪಾವತಿಸಿ, ಎಲ್ಲ ಅಗತ್ಯ ದಾಖಲೆಗಳನ್ನು ಮಧ್ಯವರ್ತಿಗಳ ಯಾವುದೇ ಹಸ್ತಕ್ಷೇಪವಿಲ್ಲದೇ ಅರ್ಜಿ ಸಲ್ಲಿಸಿದ ದಿನದಂದೇ ಉದ್ದಿಮೆ ಪರವಾನಗಿಯನ್ನು ಪಡೆದುಕೊಂಡರು ಎಂದು ಆಯುಕ್ತರು ತಿಳಿಸಿದರು.

ಅರ್ಜಿ ಸಲ್ಲಿಸಿದ ದಿನವೇ ಉದ್ದಿಮೆದಾರರಿಗೆ ಪರವಾನಗಿ ಅಗತ್ಯ ದಾಖಲೆಗಳಾದ ವಾಣಿಜ್ಯ ಮಳಿಗೆ ಕರಾರು ಪತ್ರ ಹಾಗೂ ವಿದ್ಯುತ್‌ ಬಿಲ್‌‍ ಸಲ್ಲಿಸಿದ ದಿನವೇ ಉದ್ದಿಮೆದಾರರಿಗೆ ಉದ್ದಿಮೆ ಪರವಾನಗಿ ನೀಡಲು ಪೂರ್ವ ನಗರ ಪಾಲಿಕೆಯು ವ್ಯವಸ್ಥೆಯನ್ನು ಕಲ್ಪಿಸಿದ್ದು,17 ವಾರ್ಡ್‌ಗಳೊಂದಿಗೆ ವಾಣಿಜ್ಯ ಪ್ರದೇಶಗಳಲ್ಲೂ ವಿಶೇಷ ಶಿಬಿರ ಏರ್ಪಡಿಸುವ ಮೂಲಕ ಪಾರದರ್ಶಕವಾಗಿ, ವೇಗವಾಗಿ ಮತ್ತು ನಾಗರಿಕ ಸ್ನೇಹಿ ಉದ್ದಿಮೆ ಪರವಾಗಿ ಸೇವೆಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ಮಹದೇವಪುರ ಹಾಗೂ ಕೃಷ್ಣರಾಜಪುರ ವಿಭಾಗಗಳ ಆರೋಗ್ಯ ವೈದ್ಯಾಧಿಕಾರಿಗಳು, ಆರೋಗ್ಯ ಮೇಲ್ವಿಚಾರಕರು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳು ತಂಡಗಳು ಅನಧಿಕೃತ ಪಿಜಿ ಕಾರ್ಯಾಚರಣೆ ಹಾಗೂ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ಕಾರ್ಯದಲ್ಲಿ ಪ್ರವೃತ್ತರಾಗಿರು ತ್ತಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದರು.

ಇದನ್ನೂ ನೋಡಿ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಕೆಪಿಎಸ್ ವ್ಯವಸ್ಥೆ ಪರಿಹಾರವೋ? ಶಾಪವೋ? Janashakthi Media

Donate Janashakthi Media

Leave a Reply

Your email address will not be published. Required fields are marked *