ತುಮಕೂರು| ಸೈಬರ್ ವಂಚಕರಿಂದ ಗಾರೆ ಕೆಲಸದವರಿಗೆ 10 ಲಕ್ಷ ರೂ ವಂಚನೆ

ತುಮಕೂರು: ಸೈಬರ್ ವಂಚಕರು ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳನ್ನು ಹಾಗೂ ಉದ್ಯಮಿಗಳನ್ನು ಅಲ್ಲದೆ ಸರ್ಕಾರಿ ನೌಕರರನ್ನು ಗುರಿಯಾಗಿಸಿಕೊಂಡು ಸಾಮಾನ್ಯವಾಗಿ ವಂಚನೆ ಮಾಡುತ್ತಾರೆ. ಆದರೆ ಹುಟ್ಟಿದ ಊರನ್ನು ಬಿಟ್ಟು ಕೆಲಸ ಅರಿಸಿಕೊಂಡು ಬೇರೆ ಊರಿಗೆ ಬಂದಂತಹ ಗಾರೆ ಕೆಲಸದವರನ್ನು ಬಿಡದೆ ವಂಚಕರು 10 ಲಕ್ಷ ಪೀಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಸೈಬರ್

ತುಮಕೂರು ನಗರದ ಜಯನಗರದಲ್ಲಿ ಯಾದಗಿರಿ ಜಿಲ್ಲೆಯ ಹತ್ತಾರು ಯುವಕರು ಗಾರೆ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದಾರೆ. ಇದೀಗ ಸೈಬ‌ರ್ ವಂಚಕರ ಬಲೆಗೆ ಬಿದ್ದು 10 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡು ಮೋಸ ಹೋಗಿದ್ದಾರೆ ಎಂದು ವರದಿಯಾಗಿದೆ.

ಮೊದಲ ಬಾರಿಗೆ ₹9,800 ಜಮಾ ಮಾಡಿದ್ದು, ನನ್ನ ಖಾತೆಗೆ ₹11 ಸಾವಿರ ವಾಪಸ್ ಹಾಕಿದ್ದರು. ಇದನ್ನು ನಂಬಿ ಬೇರೆಯವರಿಂದ ಹಣ ಪಡೆದು ₹5.18 ಲಕ್ಷ ಹಣವನ್ನು COSTA ಆಯಪ್‌ನಲ್ಲಿ ಜಮಾ ಮಾಡಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್ ನಲ್ಲಿ ಬೆಂಗಳೂರಿನ ಪ್ರಮುಖ ಯೋಜನೆಗಳಿಗೆ ಅನುದಾನ ನೀಡಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪತ್ರ

ನನ್ನ ಜತೆಗೆ ಕೆಲಸ ಮಾಡುತ್ತಿರುವ ಅಂಬರೀಶ್, ಶರಣಗೌಡ, ಆನಂದ, ಶಾಂತಪ್ಪ ಇತರರು ಸುಮಾರು 10 ಲಕ್ಷ ಹಣ ವರ್ಗಾಯಿಸಿದ್ದಾರೆ. ಇದೀಗ ಆಯಪ್ ತೆರೆದುಕೊಳ್ಳುತ್ತಿಲ್ಲ. ಹಣ ಪಡೆದು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಮ್ಮ ಊರಿನ ಸಂಗಮೇಶ್ ಎಂಬುವರು COSTA ಲಿಂಕ್ ಕಳುಹಿಸಿ ಇನ್‌ಸ್ಟಾಲ್ ಮಾಡಿಕೊಂಡು ಹಣ ಹೂಡಿಕೆ ಮಾಡಿದರೆ, ದುಪ್ಪಟ್ಟು ಲಾಭ ಪಡೆಯಬಹುದು ಎಂದು ತಿಳಿಸಿದ್ದರು. ಅದರಂತೆ ಹಣ ಹಾಕಿ 10 ಲಕ್ಷ ಕಳೆದುಕೊಂಡಿದ್ದೇವೆ ಎಂದು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ತಿಪ್ಪಣ್ಣ ಸೈಬ‌ರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ನೋಡಿ: ಕುರ್ಚಿಗಾಗಿನ ಜಗಳ ಬಿಡಿ – ಕೊರಗರ ಉದ್ದಾರಕ್ಕೆ ಗಮನ ಕೊಡಿ – ಬೃಂದಾ ಕಾರಟ್ Janashakthi Media

Donate Janashakthi Media

Leave a Reply

Your email address will not be published. Required fields are marked *