ಮೈಸೂರು: ಮೌಖಿಕ ಒಪ್ಪಿಗೆಯನ್ನು ರಾಜ್ಯ ಸರ್ಕಾರ ಈಗಾಗಲೇ ನೀಡಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಸರ್ಕಾರದ ಹಸಿರು ನಿಶಾನೆ ಅಗತ್ಯವಿತ್ತು. ಬಿಸಿಸಿಐಗೆ (BCCI) ಮನವಿ ಮಾಡಿದ್ದೇವೆ ಶೀಘ್ರದಲ್ಲಿಯೇ ಲಿಖಿತ ಅನುಮತಿ ದೊರೆಯಲಿದೆ’ ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದರು.
ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಳಗಾವಿ ವಿಧಾನಮಂಡಲ ಅಧಿವೇಶನದ ನಂತರ ಗೃಹ ಸಚಿವ ಜಿ.ಪರಮೇಶ್ವರ ಅವರೊಂದಿಗೆ ಮಾತನಾಡಲಾಗುವುದು’ ಎಂದರು.
ಇದನ್ನೂ ಓದಿ: ಸುಡಾನ್: ಎರಡುವರೆ ವರ್ಷಗಳಿಂದ ಭೀಕರ ಯುದ್ಧವೇಕೆ ? ಶಾಂತಿಯ ಸಾಧ್ಯತೆಗಳೇನು?
ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಉಂಟಾದ ಕಾಲ್ತುಳಿತ ಪ್ರಕರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ಮತ್ತೆ ಆಯೋಜಿಸುವ ವಾತಾವರಣ ನಿರ್ಮಿಸುವುದು ಸುಲಭವಿರಲಿಲ್ಲ. ‘ಆರ್‌ಸಿಬಿ ಚಾಂಪಿಯನ್ ಆಗಿರುವುದರಿಂದ ತವರು ನೆಲದಲ್ಲಿಯೇ ಉದ್ಘಾಟನಾ ಪಂದ್ಯ ನಡೆಯಬೇಕು. ರಾಜ್ಯ ಸರ್ಕಾರದ ಬೆಂಬಲ ಅಗತ್ಯವಿತ್ತು. ಈ ಬಗ್ಗೆ ಬಿಸಿಸಿಐ ಜೊತೆಯೂ ಮಾತನಾಡಲಾಗಿದೆ’ ಎಂದು ಹೇಳಿದರು.
‘ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆಡಲಿದ್ದು, ಆಲೂರಿನ ಮೂರು ಕ್ರೀಡಾಂಗಣ ಹಾಗೂ ಚಿನ್ನಸ್ವಾಮಿಯಲ್ಲೂ ಪಂದ್ಯಗಳು ನಡೆಯಲಿವೆ. ಕೊಹ್ಲಿ ಎಲ್ಲಿ ಆಡಲಿದ್ದಾರೆ ಎಂಬುದು ಖಚಿತವಾಗಿಲ್ಲ’ ಎಂದರು.
ಇದನ್ನೂ ನೋಡಿ : ’ಕಸ ನಿರ್ವಹಣೆ–ಜನರಿಗೂ ಇದೆ ಹೊಣೆ’ Janashakthi Media
