ಗೋಹತ್ಯ ನಿಷೇಧ ಮಸೂದೆ ಅಂಗೀಕಾರಕ್ಕೆ ವ್ಯಾಪಕ ವಿರೋಧ

ಬೆಂಗಳೂರು : ಭಾರೀ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ  ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರವಾಗಿದೆ. ಕಾಂಗ್ರೆಸ್ ಸಧನವನ್ನು ಬಹಿಷ್ಕರಿಸಿದರೆ, ಜೆಡಿಎಸ್ ಸಭಾತ್ಯಾಗವನ್ನು ಮಾಡಿತು.  ಮಸೂದೆ ಅಂಗೀಕಾರಕ್ಕೆ ಬಿಜೆಪಿ, ವಿಶ್ವ ಹಿಂದುಪರಿಷತ್ ಸಂಭ್ರಮ ವ್ಯಕ್ತಪಡಿಸಿದ್ದರೆ,   ಗೋಹತ್ಯೆ ನಿಷೇಧವು ಆಹಾರದ ಹಕ್ಕಿನ ಮೇಲೆ ನಡೆಯುತ್ತಿರುವ ದಾಳಿ ಎಂದು ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.

ಗೋಹತ್ಯೆ ನಿಷೇಧ ಕುರುತಂತೆ ಹಲವು ವರ್ಷಗಳಿಂದ ಚರ್ಚೆಯಾಗುತ್ತಿತ್ತು.  2010 ರಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿ ಸರಕಾರ ಗೋ ಹತ್ಯೆ ನಿಷೇಧ ಮಸೂದೆಯನ್ನು ತರಲು ಪ್ರಯತ್ನವನ್ನು ನಡೆಸಿತ್ತು, ಆದರೆ ಅದು ಆಗಿರಲಿಲ್ಲ,  ಮೋಧಿಯವರು ಪ್ರಧಾನಿಯಾದ ತಕ್ಷಣವೆ ಗೋ ಹತ್ಯಾ ನಿಷೇಧ ಮಾಡುವ ಚರ್ಚೆಗಳು ಮತ್ತೇ ಜೀವವನ್ನು ಪಡೆದವು. ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಈಗ ಕರ್ನಾಟಕದಲ್ಲಿ ಗೋಹತ್ಯೆ  ನಿಷೇಧ ಮಸೂದೆಯನ್ನು ಅಂಗೀಕಾರ ಮಾಡಲಾಗಿದೆ.  ಈ ವಿಧೇಯಕದಲ್ಲಿ ಕಠಿಣ ನಿಯಮಗಳನ್ನು ಅಡಕ ಮಾಡಲಾಗಿದೆ. ವಿಧಾನಪರಿಷತ್ತಿನಲ್ಲಿಯೂ ಅಂಗೀಕಾರಗೊಂಡ ನಂತರ ಇದು ರಾಜ್ಯಪಾಲರ ಒಪ್ಪಿಗೆ ಬಳಿಕ ಕಾಯ್ದೆಯಾಗಿ ಜಾರಿಯಾಗಲಿದೆ.

ಸರಕಾರದ ಈ ನಿರ್ಧಾರಕ್ಕೆ ಕಾಂಗ್ರೇಸ್ ಆಕ್ರೋಶವನ್ನು ವ್ಯಕಪಡಿಸಿದೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಪ್ರತಿಕ್ರೀಯೆಯನ್ನು ನೀಡಿದ್ದು, ಸದನದಲ್ಲಿ ನಾವು ಸಾಕಷ್ಟು ವಿರೋಧ ಮಾಡಿದರೂ ನಮ್ಮ ಮಾತುಗಳಿಗೆ ಕಿವಿಗೊಡಲಿಲ್ಲ,  ಕರ್ನಾಟಕದ ಇತಿಹಾಸದಲ್ಲಿ  ಈ ರೀತಿ ನಡೆದಿಲ್ಲ, ಕಲಾಪದ ನಿಯಮಗಳನ್ನು ಗಾಳಿಗೆ ತೂರಿ ಮಸೂದೆಯನ್ನು ಅಂಗೀಕಾರ ಮಾಡಿದ್ದಾರೆ,  ನಾವು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

 

ಗೋ ಹತ್ಯೆ ನಿಷೇದಕ್ಕೆ ಮುಂದಾಗಿರುವ ಸರಕಾರದ ನಿಲುವನ್ನು  ನವೀನ್ ಸೂರಿಂಜೆ  ಪ್ರಶ್ನಿಸಿದ್ದು, ಹಾಲು ಕೊಡುವ ದನಗಳನ್ನು ಯಾರೂ ಮಾಂಸಕ್ಕಾಗಿ ಮಾರುವುದಿಲ್ಲ. ಆಹಾರಕ್ಕಾಗಿ ಶವವಾಗುವ ದನಗಳಿಗಿಂತ ಸರಕಾರದ ನೀತಿಗಳಿಂದ ಕೊಟ್ಟಿಗೆಯಲ್ಲಿ ಜೀವಂತ ಶವವಾಗುವ ದನಗಳ ಸಂಖ್ಯೆಯೇ ಹೆಚ್ಚು. ದನವೊಂದು ಬೆದೆಗೆ ಬಂದಾಗ ಸಂಗಾತಿಯೇ ಇಲ್ಲದಂತೆ ಮಾಡಿ ಉಪಕರಣದ ಮೂಲಕ ಕೃತಕ ಗರ್ಭಧಾರಣೆ ಮಾಡಿಸುವುದು ಹತ್ಯೆಗಿಂತಲೂ ಅಮಾನವೀಯ ಕ್ರಮ. ದನಗಳು ಬೆದೆಗೆ ಬಂದಾಗ ರೈತನ ಕಂಟ್ರೋಲ್ ಗೆ ಸಿಗದೇ ಇರುವಷ್ಟು ಹಾರಾಟ, ಓಡಾಟ ಪ್ರಾರಂಭಿಸುತ್ತದೆ. ದನದ ವರ್ತನೆಯೇ ದನ ಬೆದೆಗೆ ಬಂದಿರೋದರ ಮಾಹಿತಿ ನೀಡುತ್ತದೆ. ತಕ್ಷಣ ದನವನ್ನು ಹೋರಿ ಬಳಿ ಬಿಡಲಾಗುತ್ತಿತ್ತು. ಹೋರಿ ಮತ್ತು ದನ ಮಿಲನದ ಬಳಿಕ ಹಟ್ಟಿಗೆ ಮರಳಿ ತಂದು ಕಟ್ಟಲಾಗುತ್ತಿತ್ತು. ಪ್ರತೀ ಊರಲ್ಲೊಂದು ಹೋರಿ ಸಾಕೋ ಮನೆ ಇರುತ್ತಿತ್ತು. ದನ ಮತ್ತು ಹೋರಿ ಮಿಲನಕ್ಕಾಗಿ ವಿಶೇಷ ಸ್ಥಳವನ್ನು ಸಿದ್ದಗೊಳಿಸಲಾಗುತ್ತಿತ್ತು. ದನ ಮತ್ತು ಹೋರಿ ಮಿಲನಕ್ಕಾಗಿಯೇ ಆ ಮನೆಯವರು ಇಂತಿಷ್ಟು ದರವನ್ನು ಪಡೆಯುತ್ತಿದ್ದರು.

ಈಗ ಹಾಗಲ್ಲ. ಪಶುಸಂಗೋಪನಾ ಇಲಾಖೆಯಿಂದ ದನಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ದನಗಳಿಗೆ ಸಂಗಾತಿ ಎಂದರೇನು ಎಂಬುದಾಗಲೀ, ಲೈಂಗಿಕ ಸುಖ ಎಂಬುದಾಗಲೀ ಗೊತ್ತೇ ಇಲ್ಲ. ಜಾಸ್ತಿ ಹಾಲು ಕೊಡಬೇಕು ಎಂಬ ಕಾರಣಕ್ಕಾಗಿ ಹಸುವಿನ ಗರ್ಭಕೋಶದೊಳಗೆ ಸೂಕ್ತ ಉಪಕರಣಗಳ ಸಹಾಯದಿಂದ ವೀರ್ಯಾಣುಗಳನ್ನು ವರ್ಗಾಯಿಸಲಾಗುತ್ತದೆ. ಒಂದು ಜೀವಿಯ ಇಚ್ಚೆಗೆ ವಿರುದ್ದವಾಗಿ ಗರ್ಭಧಾರಣೆ ಮಾಡುವುದು ಅಮಾನವೀಯ. ಯಾವ ದೇವತೆ, ಜೀವಿಗೂ ಇಲ್ಲದ ಶಿಕ್ಷೆ ಗೋವಿಗೇಕೆ ?  ಗೋ ಹತ್ಯೆ ನಿಷೇಧ ಜಾರಿ ಬದಲು ಅಮಾನವೀಯ ಕೃತಕ ಗರ್ಭಧಾರಣೆ ನಿಷೇಧ ಜಾರಿಗೊಳಿಸಬೇಕಾಗಿದೆ‌ ಎಂದು ಪತ್ರಕರ್ತ ನವೀನ್ ಸೂರಿಂಜೆ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಗೋಹತ್ಯೆ ನಿಷೇಧದ ಮೂಲಕ ಬಿಜೆಪಿ ರಾಜಕೀಯ ಲಾಭಕ್ಕೆ ಮುಂದಾಗಿದೆ. ಆಹಾರದ ಹಕ್ಕಿನ ಮೇಲೆ ದಾಳಿ ನಡೆಸುತ್ತಿದೆ ಎಂದು ದಲಿತ ಸಂಘಟನೆಗಳು ಆರೋಪಿಸಿವೆ.

Donate Janashakthi Media

Leave a Reply

Your email address will not be published. Required fields are marked *