ಕೊಳೆತಿರುವ ಬಂಡವಾಳಶಾಹಿಗೊಂದು ಕಿಟಕಿ
ರಾಜಕೀಯ ಶಕ್ತಿ, ಕಾರ್ಪೊರೇಟ್ ಗಳು, ಹಣಕಾಸು ಸಂಸ್ಥೆಗಳು, ಶ್ರೀಮಂತರು ಮತ್ತು ಪ್ರಭಾವಿಗಳ ನಡುವಿನ ಹೊಸ ಮಾದರಿಯ “ನಂಟಿ”ನ ಕರಾಳ ಸತ್ಯಗಳ ಮೇಲೆ ಬೆಳಕು ಚೆಲ್ಲುವ ಎಪ್ಸ್ಟೀನ್ ಕಡತಗಳು ಬಂಡವಾಳಶಾಹಿಯ ನೈತಿಕ ದಿವಾಳಿಯ ವ್ಯವಹಾರಗಳಿಗೆ ಒಂದು ಕಿಟಕಿಯನ್ನು ತೆರೆಯುತ್ತವೆ. ಮಹಿಳೆಯರು ಮತ್ತು ಮಕ್ಕಳ ಲೈಂಗಿಕ ಬಳಕೆ ಎಂಬುದು ಲಾಭ ಮತ್ತು ಅಧಿಕಾರದ ಮೇಲೆ ನಿಂತಿರುವ ಈ ಒಟ್ಟು ವ್ಯವಹಾರದ ಭಾಗವಾಗಿದೆ. ಇವುಗಳಲ್ಲಿ ಎರಡು ಭಾರತೀಯ ಹೆಸರುಗಳೂ ಕಾಣಿಸಿಕೊಂಡಿವೆ. ? ಈ ಕುರಿತು ಚರ್ಚಿಸಲು ಸಂಸತ್ತಿಗೆ ಅವಕಾಶ ನೀಡಲಾಗಿಲ್ಲ. ಒಬ್ಬ ಭಾರತೀಯ ವ್ಯಾಪಾರಿ ದೇಶದ “ನಾಯಕತ್ವ’ದ ಹೆಸರು ಹೇಳಿಕೊಂಡು ಒಬ್ಬ ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿಯೊಂದಿಗೆ ವ್ಯವಹರಿಸುತ್ತಿದ್ದರೆ? ಅವರಿಗೆ ಈ ರೀತಿ ಮಾತನಾಡಲು ಅಧಿಕಾರ ನೀಡಲಾಗಿತ್ತೇ? ಆ ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿಯೊಂದಿಗೆ ತಿಳಿದೂ-ತಿಳಿದೂ ಸಂಪರ್ಕವನ್ನು ಇಟ್ಟುಕೊಳ್ಳುವ, ಸಾಲದ್ದಕ್ಕೆ ಅದನ್ನು ಸಮರ್ಥಿಸಿಕೊಳ್ಳುವ ಕೇಂದ್ರ ಮಂತ್ರಿ ಇನ್ನೂ ಹುದ್ದೆಯಲ್ಲಿ ಮುಂದುವರಿಯುವುದು ಪ್ರಧಾನ ಮಂತ್ರಿಯವರ ಅನುಮೋದನೆಯನ್ನು ಸೂಚಿಸುತ್ತದೆಯೇ? ಕಡತ
– ಕನ್ನಡಕ್ಕೆ: ಸಿಚಿ
ಎಪ್ಸ್ಟೀನ್ ಕಡತಗಳಿಂದ ಬಿಡುಗಡೆಯಾದ ದಾಖಲೆಗಳು ಒಬ್ಬ ವ್ಯಕ್ತಿಯ ನೀಚತನವನ್ನಷ್ಟೇ ಅಲ್ಲ, ಅದನ್ನೂ ಮೀರಿದ ಸಂಗತಿಗಳನ್ನು ಬಹಿರಂಗಪಡಿಸಿವೆ. ಈ ದಾಖಲೆಗಳು ರಾಜಕೀಯ ಶಕ್ತಿ, ಕಾರ್ಪೊರೇಟ್ ಗಳು, ಹಣಕಾಸು ಸಂಸ್ಥೆಗಳು, ಶ್ರೀಮಂತರು ಮತ್ತು ಪ್ರಭಾವಿಗಳ ನಡುವಿನ ಹೊಸ ಮಾದರಿಯ “ನಂಟಿ”ನ ಕರಾಳ ಸತ್ಯಗಳ ಮೇಲೆ ಬೆಳಕು ಚೆಲ್ಲುತ್ತವೆ. ಅಂತಹ ರಚನಾತ್ಮಕ ವರ್ಗ-ಆಧಾರಿತ ನಂಟಾಗಲೀ, ಇಂತಹ ಕ್ರಿಮಿನಲ್ ಕೃತ್ಯಗಳು, ಭಂಡತನ ತಮಗೆ ಸಹಜವೆಂಬಂತೆ ವರ್ತಿಸುವುದಾಗಲೀ ಹೊಸದೇನಲ್ಲ. ಆದರೆ, ಬಂಡವಾಳಶಾಹಿ ಸಮಾಜವು ಎಷ್ಟೊಂದು ಆಳದ ವರೆಗೆ ಕೊಳೆತುಹೋಗಿದೆ ಎಂಬುದನ್ನು ಈ ಕಡತಗಳು ಬಹಿರಂಗಪಡಿಸುತ್ತವೆ. ಖಾಸಗಿ ಲಾಭಕ್ಕೆ ಮೀಸಲಾಗಿರುವ ವ್ಯವಸ್ಥೆಗಳಲ್ಲಿ ನೈತಿಕತೆ ಎಂಬುದು ಹೆಸರಿಗಾದರೂ ಇಲ್ಲದಂತೆ ನಿರ್ನಾಮಗೊಂಡಿದೆ ಎಂಬುದನ್ನು ಈ ಕಡತಗಳು ತೋರಿಸುತ್ತವೆ.
ಜೆಫ್ರಿನ್ ಎಪ್ಸ್ಟೀನ್ ಒಬ್ಬ ಶಿಶುಕಾಮಿ ಮತ್ತು ಲೈಂಗಿಕ ಅಪರಾಧಕ್ಕಾಗಿ ಶಿಕ್ಷೆಗೊಳಗಾದಾತ ಎಂಬುದು ಆತನ ಹಲವು “ಅರ್ಹತೆ”ಗಳಲ್ಲಿ ಒಂದು. ಯಾವುದೇ ನಾಗರಿಕ ಸಮಾಜದಲ್ಲಿ ಅಂತಹ ವ್ಯಕ್ತಿಗೆ ಶಿಕ್ಷೆಯಾಗುತ್ತದೆ ಮತ್ತು ಸಾಮಾಜಿಕವಾಗಿ ಆತನನ್ನು ದೂರವಿಡಲಾಗುತ್ತದೆ ಎಂದು ಯಾರಾದರೂ ಭಾವಿಸಿರಬಹುದು. ಆದರೆ ಜಗತ್ತಿಗೆ ಪ್ರಜಾಪ್ರಭುತ್ವವನ್ನು ಬೋಧಿಸಲು ಪ್ರಯತ್ನಿಸುವ ದೇಶವಾದ ಅಮೆರಿಕದಲ್ಲಿ, ಆತನ ಮಟ್ಟಿಗೆ ವ್ಯಾಪಾರ ಸಂಬಂಧಗಳನ್ನು ಅಭಿವೃದ್ಧಿಪಡಿಸುವ ಜಾಗತೀಕರಣಗೊಂಡ ಒಂದು ನವೀನ ಮಾದರಿಯನ್ನು ರೂಪಿಸುವ ಗುಣಲಕ್ಷಣಗಳಲ್ಲಿ ಯುವತಿಯರು ಮತ್ತು ಮಕ್ಕಳ ಲೈಂಗಿಕ ಶೋಷಣೆ ಕೂಡ ಸೇರಿದೆ.
ಇದನ್ನೂ ಓದಿ: ದ್ವೇಷ ರಾಜಕೀಯದ ವಿರುದ್ಧ ಮಹಿಳಾ ಚಳುವಳಿಗಳು ಬಲಗೊಳ್ಳಬೇಕು: ತೀಸ್ತಾ ಸೆಟಲ್ವಾಡ್
ಅಮೆರಿಕದಲ್ಲಿ ಶ್ರೀಮಂತ ಬಿಳಿಯ ಪುರುಷರು, ಹಾಲಿ ಅಧ್ಯಕ್ಷರುಗಳು ಮತ್ತು ಮಾಜಿ ಅಧ್ಯಕ್ಷರುಗಳು, ರಷ್ಯಾ ಮತ್ತು ಯುರೋಪಿನ ಬ್ಯಾಂಕರ್ ಗಳು, ಪಶ್ಚಿಮ ಏಷ್ಯಾದ ಶೇಖ್‌ಗಳು ಮತ್ತು ಭಾರತದಲ್ಲಿನ ಸಂಪರ್ಕಗಳು-ಇವರೆಲ್ಲರ ಹೆಸರುಗಳೂ ಈ ಕಡತಗಳಲ್ಲಿ ಉಲ್ಲೇಖಗೊಂಡಿವೆ. ಉಲ್ಲೇಖಗೊಂಡಿರುವವರಲ್ಲಿ ಎಲ್ಲರೂ ಲೈಂಗಿಕ ಅಪರಾಧಗಳ “ನಂಟು” ಹೊಂದಿದವರೆಂದೇನಲ್ಲ. ಎಪ್ಸ್ಟೀನ್ ಒದಗಿಸಿದ ಸೇವೆಗಳು ಹಲವು ಮತ್ತು ವೈವಿಧ್ಯಮಯವಾಗಿದ್ದವು, ಅವೆಲ್ಲವೂ ಲೈಂಗಿಕ ಸ್ವಭಾವದ್ದಲ್ಲ. ಅವರ ಅಪರಾಧವೆಂದರೆ, ಅಧಿಕಾರದ ಸ್ಥಾನಗಳಲ್ಲಿರುವುದರಿಂದ, ಎಪ್ಸ್ಟೀನ್ ರೊಂದಿಗಿನ ಅವರ ನಿಕಟತೆ ಆತನ ನಂಟಿನ ಮಾದರಿಯನ್ನು ಸಾಮಾನ್ಯಗೊಳಿಸಿತು ಎಂಬುದು. ಕಡತ
ನೀಚತನ ಮತ್ತು ಶಾಮೀಲು
ಈ ಕಡತಗಳಲ್ಲಿ ಉಲ್ಲೇಖಿಸಲಾದ ಹಲವರು ಅಪ್ರಾಪ್ತವಯಸ್ಕರ ಸಾಗಾಣಿಕೆ ಮತ್ತು ಲೈಂಗಿಕ ದುರುಪಯೋಗದ ಅನುಭವಗಳನ್ನು ಹಂಚಿಕೊಂಡವರು.ಈ ರೀತಿ ಭಾಗವಹಿಸುವವರು ಪರಸ್ಪರ ಅವಲಂಬನೆಗೆ ಒಳಗಾಗುತ್ತಾರೆ, ಇವರನ್ನು ಒಟ್ಟಿಗೆ ಇಡುವ ಅಂಟು ಎಂದರೆ ರಹಸ್ಯ ವ್ಯವಹಾರ ಮತ್ತು ಶಾಮೀಲು. ಇಂಟರ್ನೆಟ್ ನಲ್ಲಿ ಈಗ ತುಂಬಿ ತುಳುಕುತ್ತಿರುವ ಇಮೇಲ್ ವಿನಿಮಯಗಳನ್ನು ಸ್ಥೂಲವಾಗಿ ನೋಡಿದರೂ, ದೊಡ್ಡ ವ್ಯವಹಾರ ಒಪ್ಪಂದಗಳು, ಹಣಕಾಸಿನ ವಹಿವಾಟುಗಳೊಂದಿಗೆ ಲೈಂಗಿಕ ನೀಚತನದ ಸಂಕೇತ ಭಾಷೆಗಳು ತಳುಕು ಹಾಕಿಕೊಂಡಿರುವುದು, ಬ್ಯಾಂಕುಗಳ ಎಚ್ಚರಿಕೆ ಸಂಕೇತಗಳನ್ನು ನಿರ್ಲಕ್ಷಿಸಿ, ರಾಜಕೀಯ ಮತ್ತು ಹಣಕಾಸು ಸಂಪರ್ಕಗಳನ್ನು ಗಳಿಸಿಕೊಳ್ಳಲಾಯಿತು ಎಂಬುದು ಮತ್ತು ಇವೆಲ್ಲಕ್ಕೆ ಎಪ್ಸ್ಟೀನ್ ಬ್ರೋಕರ್ ಮತ್ತು ಫೆಸಿಲಿಟೇಟರ್ ಆಗಿದ್ದುದು ಕಾಣ ಬರುತ್ತದೆ. ಎಪ್ಸ್ಟೀನ್ ಕಡತಗಳು ಬಂಡವಾಳಶಾಹಿಯ ನೈತಿಕವಾಗಿ ದಿವಾಳಿಯಾದ ವ್ಯವಹಾರಗಳಿಗೆ ಒಂದು ಕಿಟಕಿಯನ್ನು ತೆರೆಯುತ್ತವೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳ ಲೈಂಗಿಕ ಬಳಕೆ ಎಂಬುದು ಜಾಲರಚನೆ, ಲಾಭ ಮತ್ತು ಅಧಿಕಾರದ ಮೇಲೆ ನಿಂತಿರುವ ಒಟ್ಟು ವ್ಯವಹಾರದ ಭಾಗವಾಗಿದೆ.
ಅಪರಾಧದಲ್ಲಿ ಪಾಲು ವಿಭಿನ್ನ ಮಟ್ಟದಲ್ಲಿರಬಹುದು. ಕಾನೂನು ಚೌಕಟ್ಟುಗಳು ಅದರಲ್ಲಿ ನೇರ ಭಾಗವಹಿಸುವಿಕೆ ಮತ್ತು ಪ್ರಚೋದನೆಯಲ್ಲಿ ವ್ಯತ್ಯಾಸಗಳನ್ನು ತೋರಿಸಬಹುದು. ಪ್ರಚೋದನೆಯ ತೀವ್ರತೆಯೂ ವಿಭಿನ್ನ ಮಟ್ಟದ್ದಾಗಿರಬಹುದು. ಆದರೆ 2008 ರ ನಂತರ ಎಪ್ಸ್ಟೀನ್ ಜೊತೆ ಸಂಪರ್ಕದಲ್ಲಿದ್ದ ಯಾರೂ ಕೂಡ ಎಪ್ಸ್ಟೀನ್ ಅಪರಾಧಗಳ ಬಗ್ಗೆ ತಮಗೆ ತಿಳಿದೇ ಇರಲಿಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ.
ಎಪ್ಸ್ಟೀನ್ ವಿರುದ್ಧ ಮೊದಲ ದೂರುಗಳು 2005 ರಲ್ಲಿ ಬಂದವು. ಫ್ಲೋರಿಡಾದ ಪಾಮ್ ಬೀಚ್ ನಲ್ಲಿರುವ ಒಬ್ಬ ತಾಯಿ ತನ್ನ 14 ವರ್ಷದ ಮಗಳ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ದೂರು ನೀಡಿದಳು. ಈ ಬಗ್ಗೆ ಪೊಲಿಸ್ ತನಿಖೆ ನಡೆದಾಗ ಇನ್ನೂ ಕನಿಷ್ಠ ಒಂದು ಡಜನ್‌ಗೂ ಹೆಚ್ಚು ಮಕ್ಕಳು ಇಂತಹ ದೌರ್ಜನ್ಯಕ್ಕೆ ಒಳಗಾಗಿದ್ದರು ಎಂಬುದು ತಿಳಿದು ಬಂತು. ಈ ತನಿಖೆಯ ಆಧಾರದ ಮೇಲೆ ನಿರ್ಣಾಯಕ ಕ್ರಮ ತೆಗೆದುಕೊಳ್ಳುವ ಬದಲು, ಅಧ್ಯಕ್ಷ ಬುಷ್ ನೇತೃತ್ವದ ಫೆಡರಲ್ ಸರ್ಕಾರವು ಎಪ್ಸ್ಟೀನ್ ಅವರ ಪ್ರಭಾವಿ ವಕೀಲರು ಮುಂದೊತ್ತಿದ ಒಂದು ‘ಡೀಲ್’ನ್ನು ಸ್ವೀಕರಿಸಿತು.
ಅದು ವಿಚಾರಣೆ ಬೇಕಿಲ್ಲವೆಂದು ಪರಸ್ಪರ ಒಪ್ಪಿಕೊಂಡ ವ್ಯವಹಾರವಾಗಿತ್ತು. ಎಪ್ಸ್ಟೀನ್ “ಒಬ್ಬ ವೇಶ್ಯೆಯನ್ನು ಮತ್ತು ಒಬ್ಬ ಅಪ್ರಾಪ್ತ ವಯಸ್ಕಳನ್ನು ಕೋರಿದ್ದೆ” ಎಂದು ಆತ ಮಾಡಿರುವುದಾಗಿ ತಪ್ಪೊಪ್ಪಿಗೆ ಸಲ್ಲಿಸಿ, ಆತನಿಗೆ ಕೇವಲ 13 ತಿಂಗಳ ಶಿಕ್ಷೆ ವಿಧಿಸಲಾಯಿತು. ಆದರೆ ಆತ ನಿಜವಾಗಿ ಎಸಗಿದ್ದ ಅಪರಾಧ ಇದಕ್ಕಿಂತ ಬಹಳ ಗುರುತರವಾಗಿತ್ತು. ಈ ಹಗುರ ಶಿಕ್ಷೆಯನ್ನು ಅನುಭವಿಸಿದ ಅವಧಿಯಲ್ಲಿ ಕೂಡ ಆತನಿಗೆ ಪ್ರತಿದಿನ ಜೈಲಿನಿಂದ ಹೊರಬಂದು ತನ್ನಕಚೇರಿಯಲ್ಲಿ ಕೆಲಸ ಮಾಡಲು ಮತ್ತು ರಾತ್ರಿ ಜೈಲಿಗೆ ಮರಳಲು ಅವಕಾಶ ನೀಡಲಾಗಿತ್ತು. ನಂತರ ಬಂದ ಎಲ್ಲಾ ಸರ್ಕಾರಗಳು ಮತ್ತು ಪಕ್ಷಗಳು ಪೀಡಿತರ ದನಿಗಳನ್ನು ನಿರ್ಲಕ್ಷಿಸಿದವು. ಶಿಕ್ಷೆಯ ಭಯವಿಲ್ಲದೆ ಎಪ್ಸ್ಟೀನ್ ತನ್ನ ಚಟುವಟಿಕೆಗಳನ್ನು ಮುಂದುವರೆಸಿದ.
ಬದುಕುಳಿದವರ ಧೈರ್ಯ ಮತ್ತು ನಿರಂತರ ಹೋರಾಟದಿಂದಾಗಿಯೇ ಜುಲೈ 2019 ರಲ್ಲಿ ಎಪ್ಸ್ಟೀನ್ ನನ್ನು 2008 ರ ಒಪ್ಪಂದದ ವ್ಯಾಪ್ತಿಗೆ ಒಳಪಡದ ಆರೋಪಗಳ ಮೇಲೆ ಬಂಧಿಸಲಾಯಿತು. ವಿಚಾರಣೆಗೆ ಮುನ್ನ ಆ ವರ್ಷದ ಆಗಸ್ಟ್ ನಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಯಿತು. ಈಗ ಬಿಡುಗಡೆಯಾದ 2002 ರಿಂದ 2019 ರವರೆಗಿನ ಇಮೇಲ್‌ಗಳು ಮತ್ತು ದಾಖಲೆಗಳು ಭಾಗಿಯಾಗಿರುವವರ ಪುರಾವೆಗಳನ್ನು ಒದಗಿಸುತ್ತವೆ. ಆದರೂ ಹೆಸರುಗಳನ್ನು ಮರೆಮಾಚುವ ಮೂಲಕ, ಅಧ್ಯಕ್ಷ ಟ್ರಂಪ್ ತನ್ನ ಆಡಳಿತದ ನ್ಯಾಯಾಂಗ ಇಲಾಖೆಯ ಮೂಲಕ ಪ್ರಭಾವಿ ವ್ಯಕ್ತಿಗಳ ಗುರುತನ್ನು ರಕ್ಷಿಸಿದ್ದಾರೆ.. ಟ್ರಂಪ್ ಆಡಳಿತವು ಇತಿಹಾಸದಲ್ಲಿಯೇ ಒಂದು ಅತಿ ದೊಡ್ಡ ಮರೆಮಾಚುವ ಕಾರ್ಯಾಚರಣೆ ನಡೆಸಿದೆ ಎಂದು ಬದುಕುಳಿದ ಪೀಡಿತರು ಪದೇ ಪದೇ ಹೇಳಿದ್ದಾರೆ.
ಎಪ್ಸ್ಟೀನ್ ತಪ್ಪೊಪ್ಪಿಗೆ ಸಲ್ಲಿಸಿ, ಆತನಿಗೆ ಕೇವಲ 13 ತಿಂಗಳ ಶಿಕ್ಷೆ ವಿಧಿಸಲಾಯಿತು. ಆದರೆ ಆತ ನಿಜವಾಗಿ ಎಸಗಿದ್ದ ಅಪರಾಧ ಅದಕ್ಕಿಂತ ಬಹಳ ಗುರುತರವಾಗಿತ್ತು. ಈ ಹಗುರ ಶಿಕ್ಷೆಯನ್ನು ಅನುಭವಿಸಿದ ಅವಧಿಯಲ್ಲಿ ಕೂಡ ಆತನಿಗೆ ಪ್ರತಿದಿನ ಜೈಲಿನಿಂದ ಹೊರಬಂದು ತನ್ನಕಚೇರಿಯಲ್ಲಿ ಕೆಲಸ ಮಾಡಲು ಮತ್ತು ರಾತ್ರಿ ಜೈಲಿಗೆ ಮರಳಲು ಅವಕಾಶ ನೀಡಲಾಗಿತ್ತು. ನಂತರ ಬಂದ ಎಲ್ಲಾ ಸರ್ಕಾರಗಳು ಮತ್ತು ಪಕ್ಷಗಳು ಪೀಡಿತರ ದನಿಗಳನ್ನು ನಿರ್ಲಕ್ಷಿಸಿದವು. ಶಿಕ್ಷೆಯ ಭಯವಿಲ್ಲದೆ ಎಪ್ಸ್ಟೀನ್ ತನ್ನ ಚಟುವಟಿಕೆಗಳನ್ನು ಮುಂದುವರೆಸಿದ.

ಭಾರತೀಯ ನೋಟದಿಂದ
ತಮ್ಮ ಸಂಸ್ಥೆಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದು ಅಮೆರಿಕಾದ ಜನತೆಗೆ ಬಿಟ್ಟದ್ದು. ನಾವು ಭಾರತದಿಂದ, ನ್ಯಾಯ ಮತ್ತು ಹೊಣೆಗಾರಿಕೆ ಕೇಳುತ್ತಿರುವ ಧೀರ ಪೀಡಿತರಿಗೆ ನಮ್ಮ ಬೆಂಬಲ ಮತ್ತು ಸೌಹಾರ್ದವನ್ನು ವ್ಯಕ್ತಪಡಿಸುತ್ತೇವೆ. ಕಡತ
ಆದರೆ ಅದು ಇಲ್ಲಿಗೆ ಮುಗಿಯುವುದಿಲ್ಲ.
ಎರಡು ಭಾರತೀಯ ಹೆಸರುಗಳು ಇಮೇಲ್ ಗಳಲ್ಲಿ ಕಾಣಿಸಿಕೊಂಡಿವೆ. ಮೊದಲ ಹೆಸರು ಕೈಗಾರಿಕೋದ್ಯಮಿ ಅನಿಲ್ ಅಂಬಾನಿ- ಆಳುವ ಪಕ್ಷದ ನಾಯಕತ್ವಕ್ಕೆ ಹತ್ತಿರವಿರುವವವರು ಎಂದು ಹೇಳಲಾಗುತ್ತದೆ.. ಏಕೆಂದರೆ ರಫೇಲ್ ವಿಮಾನ ಒಪ್ಪಂದದಲ್ಲಿ ಅವರನ್ನು ಭಾರತೀಯ ಪಾಲುದಾರ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಎರಡನೆಯ ಹೆಸರು ಹರ್ದೀಪ್ ಪುರಿ. ಕಡತ
ಅನಿಲ್ ಅಂಬಾನಿ ಮತ್ತು ಎಪ್ಸ್ಟೀನ್ ನಡುವಿನ ಪತ್ರವ್ಯವಹಾರವು ಅವರಿಬ್ಬರು ಬಹಳ ಪರಿಚಿತರು ಎಂಬುದನ್ನು ಮತ್ತು ಮಹಿಳೆಯರ ಬಗ್ಗೆ ಲೈಂಗಿಕ ಮತ್ತು ಕೀಳುಭಾವನೆಯ ಭಾಷೆಯನ್ನು ಬಿಂಬಿಸುತ್ತದೆ. ಮುಖ್ಯವಾಗಿ ಇವು ರಾಜಕೀಯ ಅವಕಾಶಗಳಿಗೆ ಸಂಬಂಧಿಸಿದೆ. ಭಾರತದ ಪ್ರಧಾನ ಮಂತ್ರಿಯವರ ಅಮೆರಿಕ ಭೇಟಿಗೆ ಮುನ್ನ ಅಂಬಾನಿ ಎಪ್ಸ್ಟೀನ್‌ಗೆ ಹೀಗೆ ಬರೆಯುತ್ತಾರೆ:”ನಾಯಕತ್ವ ಜೇರೆಡ್ (ಟ್ರಂಪ್ ಅವರ ಅಳಿಯ) ಮತ್ತು ಬ್ಯಾನನ್ ರನ್ನು ಆದಷ್ಟು ಬೇಗ ಭೇಟಿಯಾಗಲು ನಿಮ್ಮ ಸಹಾಯವನ್ನು ಬಯಸುತ್ತದೆ…. ಮೇ ತಿಂಗಳಲ್ಲಿ ಡೊನಾಲ್ಡ್ ರನ್ನು ಭೇಟಿ ಮಾಡಲು ಪ್ರಧಾನಿ ಡಿಸಿಗೆ ಭೇಟಿ ನೀಡುವ ಸಾಧ್ಯತೆ ಇದೆ… ಅದಕ್ಕೂ ಸಹಾಯ ಬೇಕು.”
ಈ ಮೂಲಕ, ಪ್ರಧಾನ ಮಂತ್ರಿಯವರ ಭೇಟಿಗೆ ಸಂಬಂಧಿಸಿದಂತೆ ಅಂಬಾನಿ ತಮ್ಮನ್ನು ಅವರ ಪ್ರತಿನಿಧಿಯೆಂಬಂತೆ ಬಿಂಬಿಸಿಕೊಂಡು ಅಮೆರಿಕದ ಹಿರಿಯ ರಾಜಕೀಯ ವ್ಯಕ್ತಿಗಳೊಂದಿಗೆ ಭೇಟಿಗಳನ್ನು ಏರ್ಪಡಿಸಲು ಎಪ್ಸ್ಟೀನ್ ರ ಸಹಾಯವನ್ನು ಕೋರುತ್ತಾರೆ. ಇದು ಒಂದು ವೇಳೆ ನಿಜವಾಗಿದ್ದರೆ (ಅವುಗಳನ್ನು ಕಟ್ಟುಕಥೆ ಎಂದು ನಿರಾಕರಿಸಲಾಗಿಲ್ಲ) ಈ ಇಮೇಲ್ ಗಳು ಗಂಭೀರ ಆಡಳಿತ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಒಬ್ಬ ಭಾರತೀಯ ವ್ಯಾಪಾರಿ “ನಾಯಕತ್ವ’ದ ಹೆಸರು ಹೇಳಿಕೊಂಡು ಒಬ್ಬ ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿಯೊಂದಿಗೆ ವ್ಯವಹರಿಸುತ್ತಿದ್ದರೆ? ಅವರಿಗೆ ಈ ರೀತಿ ಮಾತನಾಡಲು ಅಧಿಕಾರ ನೀಡಲಾಗಿತ್ತೇ? ಈ ದಾವೆಗಳ ಬಗ್ಗೆ ಯಾವುದಾದರು ವಿಚಾರಣೆ ನಡೆದಿದೆಯೇ? ಕಡತ
ಈ ಇಮೇಲ್ ಗಳಲ್ಲಿ ಪ್ರಧಾನ ಮಂತ್ರಿಯವರನ್ನು ಕುರಿತ ಉಲ್ಲೇಖಗಳು “ಒಬ್ಬ ಶಿಕ್ಷೆಗೊಳಗಾದ ಅಪರಾಧಿಯ ಕಸದ ಬುಟ್ಟಿಗೆ ಎಸೆಯಬೇಕಾದ ಆಲೋಚನೆಗಳು “ ಎಂದು ಭಾರತದ ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ. ಆದರೆ ಇಲ್ಲಿರುವ ಪ್ರಶ್ನೆ ಎಪ್ಸ್ಟೀನ್ ಅವರ ವಿಶ್ವಾಸಾರ್ಹತೆಯ ಬಗ್ಗೆ ಅಲ್ಲ. ಇವು ಅಂಬಾನಿಯವರ ಮಾತುಗಳು. ಅವರ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ? ಅಥವಾ ಅವರು ನಿಜವಾಗಿಯೂ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದರೇ? ಸರ್ಕಾರ ಉತ್ತರಿಸಲೇಬೇಕು. ಕಡತ
ಪ್ರಧಾನ ಮಂತ್ರಿಯವರ ಭೇಟಿಗೆ ಸಂಬಂಧಿಸಿದಂತೆ ಅಂಬಾನಿ ತಮ್ಮನ್ನು ಅವರ ಪ್ರತಿನಿಧಿಯೆಂಬಂತೆ ಬಿಂಬಿಸಿಕೊಂಡು ಅಮೆರಿಕದ ಹಿರಿಯ ರಾಜಕೀಯ ವ್ಯಕ್ತಿಗಳೊಂದಿಗೆ ಭೇಟಿಗಳನ್ನು ಏರ್ಪಡಿಸಲು ಎಪ್ಸ್ಟೀನ್ ರ ಸಹಾಯವನ್ನು ಕೋರುತ್ತಾರೆ. ಇದು ಒಂದು ವೇಳೆ ನಿಜವಾಗಿದ್ದರೆ (ಅವುಗಳನ್ನು ಕಟ್ಟುಕಥೆ ಎಂದು ನಿರಾಕರಿಸಲಾಗಿಲ್ಲ) ಈ ಇಮೇಲ್ ಗಳು ಗಂಭೀರ ಆಡಳಿತ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಒಬ್ಬ ಭಾರತೀಯ ವ್ಯಾಪಾರಿ “ನಾಯಕತ್ವ’ದ ಹೆಸರು ಹೇಳಿಕೊಂಡು ಒಬ್ಬ ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿಯೊಂದಿಗೆ ವ್ಯವಹರಿಸುತ್ತಿದ್ದರೆ? ಅವರಿಗೆ ಈ ರೀತಿ ಮಾತನಾಡಲು ಅಧಿಕಾರ ನೀಡಲಾಗಿತ್ತೇ?
ಹರ್ದೀಪ್ ಪುರಿ ಪ್ರಸ್ತುತ ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದಾರೆ. ಸಂಸತ್ತಿನಲ್ಲಿ ಅವರನ್ನು ರಕ್ಷಿಸಲು ಸರ್ಕಾರ ಬಹಳ ಕಷ್ಪಪಟ್ಟಿತು. ಎಪ್ಸ್ಟೀನ್ ಫೈಲ್ ಗಳ ಮೇಲಿನ ಚರ್ಚೆಯನ್ನು ಮುಚ್ಚಿ ಹಾಕಲಾಯಿತು. ಪತ್ರಿಕಾಗೋಷ್ಠಿಯಲ್ಲಿ, ಪುರಿ ಅವರು ಎಪ್ಸ್ಟೀನ್ ನ ಚಟುವಟಿಕೆಗಳ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡು 2014 ರ ನಂತರದ ತಮ್ಮ ಮೇಲ್ ಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಅವರು ಎಪ್ಸ್ಟೀನ್ ನನ್ನು ಹಲವಾರು ಬಾರಿ ಭೇಟಿಯಾದರು ಎಂಬುದಕ್ಕೆ ಪುರಾವೆಗಳಿವೆ. ಅಷ್ಟೇ ಅಲ್ಲ, ಅವರ ಈ ಇಮೇಲ್ ನೋಡಿ: “ಪ್ರಿಯ ಜೆಫ್, ಶುಭಾಶಯಗಳು. ನೀವು ನಿಮ್ಮ ವಿಲಕ್ಷಣ ದ್ವೀಪದಿಂದ ಹಿಂತಿರುಗಿದಾಗ ದಯವಿಟ್ಟು ನನಗೆ ತಿಳಿಸಿ. ನಾನು ಒಂದು ಹರಟೆಗೆ ಬರಬೇಕೆಂದಿದ್ದೇನೆ …”
ನಂತರ ಇಮೇಲ್‌ನಲ್ಲಿ ಅವರು ಹೀಗೆ ಹೇಳುತ್ತಾರೆ: “ನೀವು ಹಿಂತಿರುಗಿದಾಗ ನನಗೊಂದು ಕೂಗು ಹಾಕಿ. ಮತ್ತು, ಮಜಾ ಮಾಡಿ.. ಅದಕ್ಕೆ ನಿಮಗೆ ಇತರರಿಂದ ಪ್ರೋತ್ಸಾಹವೇನೂ ಬೇಕಿಲ್ಲವಲ್ಲ.”
ಎಪ್ಸ್ಟೀನ್ ಬಗ್ಗೆ ತನಗೆ ತಿಳಿದಿರಲಿಲ್ಲ ಎಂಬ ಪುರಿ ಹೇಳಿಕೆಯನ್ನು ಇದು ತೋರಿಸುತ್ತದೆಯೇ?
ಪ್ರಶ್ನಾರ್ಹ ಸಮರ್ಥನೆ
ಅದೇ ಪತ್ರಿಕಾಗೋಷ್ಠಿಯಲ್ಲಿ, ಎಪ್ಸ್ಟೀನ್ ಅಪರಾಧಗಳು ಕ್ಷುಲ್ಲಕ ಎಂದು ಹೇಳಿದರು: “ಒಬ್ಬ ವೇಶ್ಯೆಯನ್ನು ಮತ್ತು ಅಪ್ರಾಪ್ತ ವಯಸ್ಸಿನ ಹೆಂಗಸನ್ನು ಅನುಚಿತ ಸಂಬಂಧಕ್ಕೆ ಆಹ್ವಾನಿಸಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದನು. ಅಷ್ಟೇ!” ಎನ್ನುತ್ತ ಪುರಿ ಆತ ಒಂದು ಕ್ಷುಲ್ಲಕ ಅಪರಾಧ ಮಾಡಿದ್ದನಷ್ಟೇ ಎಂದು ಬಿಂಬಿಸಲು ಪ್ರಯತ್ನಿಸಿದರು.
ನಿಜವಾಗಿಯೂ ಅಷ್ಟೇನಾ ಶ್ರೀಮಾನ್ ಪುರಿ? ಅಪ್ರಾಪ್ತ ವಯಸ್ಸಿನ ಒಂದು ಹೆಂಗಸು? ಅಂದರೆ ಒಂದು ಮಗು ಎಂದು ಹೇಳುತ್ತಿರುವಿರಾ? ಮತ್ತು ನಿಮಗೆ ಅದು ಎಪ್ಸ್ಟೀನ್ ಜೊತೆಗಿನ ಸಹಯೋಗವನ್ನು ಕಡಿದುಕೊಳ್ಳಲು ಸಾಕಾಗುವಷ್ಟು ಕಾರಣ ಅಲ್ಲ ಎನ್ನುತ್ತೀರಾ?
ಅವರು ಇನ್ನೂ ಮುಂದೆ ಹೋಗಿ, “ಒಬ್ಬ ಮಹಿಳಾ ಸಂಸತ್ ಸದಸ್ಯೆ” ಇತರರು ಅಸೂಯೆ ಪಟ್ಟಿದ್ದಾರೆಂದು ಹೇಳಿದರು ಎಂದು ನೆನಪಿಸಿಕೊಳ್ಳುತ್ತ, ಅದಕ್ಕೆ ಉತ್ತರವಾಗಿ ತಾನು, ಏನಾದರೂ ಸಂಭವಿಸಿದ್ದರೆ ಮಾತನಾಡುತ್ತೇನೆ ಎಂದಿರುವುದಾಗಿ ಹೇಳಿದರು. ಸ್ತ್ರೀದ್ವೇಷವನ್ನು ಒಂದು ತಮಾಷೆಯೆಂದು ಬಗೆಯುವುದರಲ್ಲಿ ಭಾಗಿಯಾದ ಆ ಮಹಿಳಾ ಸಂಸದ್ ಸದಸ್ಯೆ ಯಾರು? ಇದು ನಮ್ಮ ಸಂಸದರ ಮಟ್ಟದ ಬಗ್ಗೆ ಏನು ಹೇಳುತ್ತದೆ? ಸಚಿವರ ಮಾತಿನಲ್ಲೇ ಹೇಳುವುದಾದರೆ, ಅವರ ಮಟ್ಟಿಗೆ ಲೈಂಗಿಕ ಶೋಷಣೆಯ ಕುಖ್ಯಾತ ತಾಣವಾದ “ವಿಲಕ್ಷಣ ದ್ವೀಪ”ದಲ್ಲಿ ಕೃತ್ಯಗಳಲ್ಲಿ ಭಾಗವಹಿಸುವುದು ಅಸೂಯೆಪಡಬೇಕಾದ ಸಂಗತಿ! ಇವು ಬಾಯಿತಪ್ಪಿ ಹೇಳಿದ ಮಾತುಗಳಲ್ಲ. ಇವು ಲೈಂಗಿಕ ಅತ್ಯಾಚಾರದ ಸಂಸ್ಕೃತಿಗಳನ್ನು ಬಲಪಡಿಸುತ್ತಿರುವುದಕ್ಕೆ ಉದಾಹರಣೆಗಳು.
“ಒಬ್ಬ ವೇಶ್ಯೆಯನ್ನು ಮತ್ತು ಅಪ್ರಾಪ್ತ ವಯಸ್ಸಿನ ಹೆಂಗಸನ್ನು ಅನುಚಿತ ಸಂಬಂಧಕ್ಕೆ ಆಹ್ವಾನಿಸಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದನು. ಅಷ್ಟೇ!” ಎನ್ನುತ್ತ ಪುರಿ ಆತ ಒಂದು ಕ್ಷುಲ್ಲಕ ಅಪರಾಧ ಮಾಡಿದ್ದನಷ್ಟೇ ಎಂದು ಬಿಂಬಿಸಲು ಪ್ರಯತ್ನಿಸಿದರು.ನಿಜವಾಗಿಯೂ ಅಷ್ಟೇನಾ ಶ್ರೀಮಾನ್ ಪುರಿ? ಅಪ್ರಾಪ್ತ ವಯಸ್ಸಿನ ಒಂದು ಹೆಂಗಸು? ಅಂದರೆ ಒಂದು ಮಗು ಎಂದು ಹೇಳುತ್ತಿರುವಿರಾ? ಮತ್ತು ನಿಮಗೆ ಅದು ಎಪ್ಸ್ಟೀನ್ ಜೊತೆಗಿನ ಸಹಯೋಗವನ್ನು ಕಡಿದುಕೊಳ್ಳಲು ಸಾಕಾಗುವಷ್ಟು ಕಾರಣ ಅಲ್ಲ ಎನ್ನುತ್ತೀರಾ?
ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿಯೊಂದಿಗೆ ತಿಳಿದೂ ಸಂಪರ್ಕವನ್ನು ಇಟ್ಟುಕೊಳ್ಳುವ, ನಂತರ ಅದನ್ನು ಸಮರ್ಥಿಸಿಕೊಳ್ಳುವ ಕೇಂದ್ರ ಮಂತ್ರಿಯೊಬ್ಬನನ್ನು ಹೊಂದಿರುವುದು ಭಾರತಕ್ಕೆ ಅವಮಾನ ತರುವ ವಿಷಯ. ಅವರು ಅಧಿಕಾರದಲ್ಲಿ ಮುಂದುವರಿಯುವುದು ಪ್ರಧಾನ ಮಂತ್ರಿಯವರ ಅನುಮೋದನೆಯನ್ನು ಸೂಚಿಸುತ್ತದೆಯೇ?
ಎಪ್ಸ್ಟೀನ್ ಫೈಲ್ ಗಳ ಕುರಿತು ಚರ್ಚಿಸಲು ಸಂಸತ್ತಿಗೆ ಅವಕಾಶ ನೀಡಲಾಗಿಲ್ಲ. ಭಾರತದ ಜನರ ಮೇಲೆ ಅಂತಹ ಯಾವುದೇ ನಿಷೇಧವಿಲ್ಲ.
ಕೃಪೆ: ದಿ ಹಿಂದೂ
ಇದನ್ನೂ ನೋಡಿ: ಭೂ ಹಕ್ಕಿನ ಹೋರಾಟದ ಧ್ವನಿ | ಮರಕುಂಬಿ ಹೋರಾಟದ ರೂವಾರಿ ನಿತ್ಯಾನಂದ ಸ್ವಾಮಿ Janashakthi Media
