ಬೆಂಗಳೂರು: ‘ಸಿ.ಡಿ. ಪ್ರಕರಣದ ಸಂತ್ರಸ್ತೆ ವಿಡಿಯೊವನ್ನು ಸಂಸ್ಥೆ ಅಧಿಕಾರಿಗಳೇ ಚಿತ್ರೀಕರಣ ಮಾಡಿ ಮಾಧ್ಯಮಕ್ಕೆ ಸೋರಿಕೆ ಮಾಡಿದ್ದಾರೆ’ ಎಂದು ಯುವತಿ ಪರ ವಕೀಲ ಕೆ.ಎನ್. ಜಗದೀಶ್‌ಕುಮಾರ್ ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ನೇರಪ್ರಸಾರದಲ್ಲಿ ಮಾತನಾಡಿದ ಅವರು, ‘ಪೊಲೀಸರು ಸಂತ್ರಸ್ತೆ ವಿಡಿಯೊ ಚಿತ್ರೀಕರಣ ಮಾಡಿ, ನಿರ್ಭಯಾ ಪ್ರಕರಣದಲ್ಲಿ ರೂಪಿಸಲಾದ ನಿಯಮಗಳನ್ನು ಉಲ್ಲಂಘಿಸಿದ್ದಾರೆ’ ಎಂದರು.
‘ಕಮಿಷನರ್, ಎಸ್‌ಐಟಿ ಅಧಿಕಾರಿಗಳ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಲು ಅನುಮತಿ ನೀಡಲು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು’ ಎಂದರು.
2010 ರಿಂದಲೂ ನಾನು ಹೋರಾಟಗಾರನಾಗಿ ಸಮಾಜದಲ್ಲಿ ತೊಡಗಿಕೊಂಡಿರುವೆ. ‘ನನ್ನ ಮೇಲಿನ ಹಿಂದಿನ ಪ್ರಕರಣಗಳನ್ನು ಎಸ್‌ಐಟಿ ಕೆದಕುತ್ತಿದೆ ಎಂದು ಫೆಸ್ಬುಕ್ ಲೈವ್ ನಲ್ಲಿ ಮಾತನಾಡಿರುವ ಜಗದೀಶ್ ಆರೋಪಿಸಿದ್ದಾರೆ.
ಹಿಂದಿನ ಪ್ರಕರಂದ ಆಧಾರದ ಮೇಲೆ ಯಾಕೆ ನನ್ನನ್ನು ಏಕೆ ರೌಡಿಶೀಟರ್ ಮಾಡಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು, ಇನ್‌ಸ್ಪೆಕ್ಟರೊಬ್ಬರನ್ನು ತಮ್ಮ ಕಚೇರಿಗೆ ಕರೆಸಿ ಕೇಳಿದ್ದಾರೆ. ಆ ಅಧಿಕಾರಿ ಈ ರೀತಿ ಮಾಡಿದ್ದು ಎಷ್ಟು ಸರಿ. ನಾನು ನಂದಿಯಲ್ಲ, ಜಗದೀಶ. ನಿಮ್ಮ ಜಾತಕ ನನ್ನ ಬಳಿ ಇದೆ. ಬನ್ನಿ ಕಾನೂನು ಹೋರಾಟ ಮಾಡೋಣ ಬನ್ನಿ ಎಂದು ಎಸ್ಐಟಿ ಅಧಿಕಾರಿಗಳಿಗೆ ಆಹ್ವಾನ ನೀಡಿದ್ದಾರೆ.
ಇದನ್ನೂ ನೋಡಿ : ಸಂತ್ರಸ್ತ ಯುವತಿ ಪರ ವಕೀಲ ಜಗದೀಶ್ ರವರ ಫೆಸ್ಬುಕ್ ಲೈವ್
ಬಿಜೆಪಿ ಪರ ಇನ್‌ಸ್ಪೆಕ್ಟರ್ ಪುನೀತ್ ಕೆರೆಹಳ್ಳಿ ಕೆಲಸ: ‘ಸಿಸಿಬಿ ಇನ್‌ಸ್ಪೆಕ್ಟರ್ ಪುನೀತ್ ಕೆರೆಹಳ್ಳಿ ಬಿಜೆಪಿ ಪರ ಬಕೆಟ್ ಹಿಡಿದು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕಾನೂನಿನ ಮೂಲಕವೇ ತಕ್ಕ ಪಾಠ ಕಲಿಸುತ್ತೇನೆ’ ಎಂದರು.
‘ಇನ್‌ಸ್ಪೆಕ್ಟರ್ ಪುನೀತ್ ಅವರೇ ಸಂತ್ರಸ್ತೆ ಹಾಗೂ ಅವರ ಜೊತೆಗಿದ್ದವರ ವಿಡಿಯೊ ಚಿತ್ರೀಕರಣ ಮಾಡಿ ಮಾಧ್ಯಮದವರಿಗೆ ಕೊಟ್ಟಿದ್ದಾರೆ’ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ಇದನ್ನೂ ಓದಿ : ನ್ಯಾಯಾಲಯದತ್ತ ಯುವತಿ – ಕೋಲ್ಹಾಪುರದತ್ತ ರಮೇಶ್ ಜಾರಕಿಹೊಳಿ!!
ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿ. ಕಕ್ಷಿದಾರರ ಫೋಟೊ ಹಾಗೂ ವಿಡಿಯೊ ತೆಗೆದಿದ್ದು ಯಾರು. ಸಂತ್ರಸ್ತೆ ಟ್ರಾವೆಲ್ ಹಿಸ್ಟರಿ ಹುಡುಕುತ್ತಿರಲ್ಲ. ನಿಮ್ಮ ಪೊಲೀಸರ ಮೊಬೈಲ್ ನೋಡಿ ಮೊದಲು’ ಎಂದು ಎಸ್ಐಟಿ ಮುಖ್ಯಸ್ಥರಿಗೆ ಹೇಳಿದ್ದಾರೆ.
‘ನ್ಯಾಯಾಧೀಶರೇ ಗೌಪ್ಯವಾಗಿ ಯುವತಿ ಹೇಳಿಕೆ ಪಡೆದಿದ್ದಾರೆ. ಅಂಥ ಜಾಗದಲ್ಲೇ ಯುವತಿ ಹಾಗೂ ಅವರ ಜೊತೆಗಿದ್ದ ವಕೀಲ ಸೂರ್ಯ ಮುಕುಂದರಾಜ್ ಅವರ ವಿಡಿಯೊವನ್ನು ಮಾಡಿದ್ದಾರೆ. ಇದು ನಿಯಮ ಉಲ್ಲಂಘನೆ’ ಎಂದು ಜಗದೀಶ್ ಆರೋಪಿಸಿದ್ದಾರೆ.