ಯುವ ಸಂಪತ್ತಿನಿಂದ ಮಾತ್ರ ದೇಶದ ಅಭಿವೃದ್ಧಿ – ಜಸ್ಟೀಸ್‌ ನಾಗಮೋಹನ್‌ ದಾಸ್

ಕೋಲಾರ : ಭಾರತ ದೇಶದ ಯುವ ಸಂಪತ್ತನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನಿವೃತ್ತ ನ್ಯಾಯಾಧೀಶ ಎಚ್.ಎನ್ ನಾಗಮೋಹನ್ ದಾಸ್ ಅಭಿಪ್ರಾಯ ಪಟ್ಟರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕರ್ನಾಟಕ ಯುವ ಮುನ್ನಡೆ ತಂಡದಿಂದ ಶನಿವಾರ 2021 ಯುವಜನ ಹಕ್ಕಿನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವಜನರಿಗೆ ವಿಶ್ವದಲ್ಲಿ ಅತಿ ಹೆಚ್ಚು ಯುವಜನ ಹೊಂದಿರುವ ದೇಶ ಭಾರತ ಅವರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗದ ಜೊತೆ ನೈತಿಕತೆಯ ಕಟ್ಟಿಕೊಡುವ ವ್ಯವಸ್ಥೆಯನ್ನು ಸರಕಾರಗಳು ಮಾಡಿದ ಮಾತ್ರ ಯುವಶಕ್ತಿ ಮುಂದುವರೆಯಲು ಸಾಧ್ಯವಾಗುತ್ತದೆ ಎಂದರು

ಭಾರತದ ಪ್ರತಿಯೊಬ್ಬ ಪ್ರಜೆಗೂ ಗುಣಾತ್ಮಕ ಮತ್ತು ಸಮಾನವಾದ ಶಿಕ್ಷಣ ಒದಗಿಸಬೇಕು ಸರಕಾರಗಳು ವಿಭಿನ್ನ ರೀತಿಯ ಶಿಕ್ಷಣ ನೀಡುವ ಮೂಲಕ ಅಸಮಾನತೆಯನ್ನು ಜೀವಂತಗೊಳಿಸುತ್ತಾ ಇದ್ದು ಆಧ್ಯತೆಯ ಮೇಲೆ ಸಮಾನವಾದ ಶಿಕ್ಷಣ ಎಲ್ಲರಿಗೂ ಕೊಡಬೇಕು ಎಂಬುದು ಯುವಜನರ ಬೇಡಿಕೆಯಲ್ಲಿ ಮೂಲಭೂತ ಹಕ್ಕಾಗಬೇಕು ಶಿಕ್ಷಣ ಮತ್ತು ಉನ್ನತ ಶಿಕ್ಷಣ ಪರಿಣಾಮವಾಗಿ ದೇಶವು ಇತರೆ ಕ್ಷೇತ್ರಗಳು ದಿವಾಳಿಯಾಗುತ್ತಾ ಇದೆ ಎಂದರು.

ಇದನ್ನೂ ಓದಿ : ದಲಿತರಿಗೆ ಮೀಸಲಿಟ್ಟ ಹಣ ‘ ಇತರ ಯೋಜನೆಗೆ’ ಬಳಕೆ : ನ್ಯಾ. ನಾಗಮೋಹನ ದಾಸ್ ಕಳವಳ

ಯುವಜನರಿಗೆ ಉದ್ಯೋಗ ನೀಡುವ ನೀತಿಗಳು ಸಮರ್ಪಕವಾಗಿ ಜಾರಿಯಾಗುತ್ತಾ ಇಲ್ಲ ನಿರುದ್ಯೋಗ ಸಮಸ್ಯೆಯಿಂದ ಸಮಾಜಘಾತುಕ ಕೃತ್ಯಗಳಲ್ಲಿ‌ ಭಾಗವಹಿಸುತ್ತಾ ಇದ್ದಾರೆ ಇದರ ಬಗ್ಗೆ ಸರಕಾರಗಳು ಗಂಭೀರವಾಗಿ ಆಲೋಚನೆ ಮಾಡಬೇಕು ಯುವಜನರು ದೇಶ ಕಟ್ಟುಲು ಬಳಕೆಯಾಗದೇ ದುಷ್ಟ ಶಕ್ತಿಗಳ ಜೊತೆ ಕೋಮುವಾದ ಮೂಲಭೂತವಾದ ಅಪರಾಧದ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ದೇಶದ ದುರಂತವಾಗಿದೆ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಉದ್ಯೋಗ ಮೂಲಭೂತ ಹಕ್ಕಾಗಿ ನೀತಿ ನಿಯಮಗಳನ್ನು ಮಾಡುವುದು ಸರಕಾರದ ಜವಾಬ್ದಾರಿಯಾಗುವಂತೆ ಒತ್ತಾಯಿಸಬೇಕಾಗಿದೆ ಎಂದರು.

ದೇಶದ ಶಿಕ್ಷಣ ನೈತಿಕತೆಯನ್ನು ಕಳೆದುಕೊಳ್ಳುತ್ತಾ ಇದೆ ಸಾಂಸ್ಕೃತಿಕ ದಿವಾಳಿತನ ನೋಡುತ್ತಾ ಇದ್ದು ಸಮಾಜವು ಪರಿವರ್ತಿಸುವ ಮೌಲ್ಯಗಳನ್ನು ಕಟ್ಟಿಕೊಡಬೇಕಾಗಿದೆ ಜಿಲ್ಲೆ ಬರಡು ಭೂಮಿ ಮತ್ತು ಬಡತನದಲ್ಲಿ ಇದ್ದರು ಜನಪರ ಜಿಲ್ಲೆಯಾಗಿದೆ ಯುವಜನರನ್ನು ಸಂಘಟಿಸಿ ಸಮಸ್ಯೆಗಳ ವಿರುದ್ದ ಧ್ವನಿಯಾಗಬೇಕು ಸಂವಿಧಾನದ ಆಶಯಗಳನ್ನು ಉಳಿಸುವ ಮತ್ತು ಪ್ರತಿಯೊಬ್ಬರಿಗೂ ಓದಿಸುವ ನಿಟ್ಟಿನಲ್ಲಿ ಯುವಜನರು ಮುಂದೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ ಟಿ.ಡಿ ಕೆಂಪರಾಜು ಮಾತನಾಡಿ ಜಾಗತೀಕರಣ ಯುಗದಲ್ಲಿ ಅಯಾ ಕಾಲಕ್ಕೆ ತಕ್ಕಂತೆ ಬದಲಾವಣೆಯಾಗಬೇಕು ಹಕ್ಕೊತ್ತಾಯಗಳು ನಿರಂತರವಾಗಿ ನಡೆದರೆ ಮಾತ್ರ ಜಾರಿ ಮಾಡಲು ಸಾಧ್ಯ ಯುವಜನರ ಕೈಗಳು ಸರಿಯಾದ ರೀತಿಯಲ್ಲಿ ಬಳಕೆಯಾಗುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದರು

ಕಾರ್ಯಕ್ರಮದಲ್ಲಿ ಜಿಲ್ಲಾ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎನ್ ಮಂಜುನಾಥ್ ಮಾತನಾಡಿದರು, ಬೆಂಗಳೂರು ಉತ್ತರ ವಿವಿ ಪ್ರೊ ಗುಂಡಪ್ಪ ಸಂವಿಧಾನದ ಪ್ರತಿಜ್ಞೆ ವಿಧಿ ಬೋಧಿಸಿದರು, ಯುವ ಮುನ್ನಡೆ ತಂಡದ ಸದಸ್ಯರಾದ ಆರ್.ರಾಮಕ್ಕ, ಪವಿತ್ರ, ದಿಲೀಪ್, ಸಂಜನಾ ಸುನಿತಾ ಶಶಿರಾಜ್ ಅನಿತಾರತ್ನ ಮುಂತಾದವರು ಇದ್ದು ಜಿಲ್ಲೆಯ ಪ್ರತಿಭೆ ವೈ.ಜಿ ಉಮಾ ಮತ್ತು ಚಂದ್ರು ತಂಡದಿಂದ ಕ್ರಾಂತಿಗೀತೆಗಳನ್ನು ಹಾಡಿದರು

Donate Janashakthi Media

Leave a Reply

Your email address will not be published. Required fields are marked *