ಸೌಜನ್ಯ ಪರ ಹೋರಾಟಗಾರ ಮೇಲೆ ಸುಳ್ಳು ಕೇಸ್‌: ಮನವಿ ನೀಡಲು ಬಂದ ಯುವಕರು ಪೊಲೀಸ್‌ ವಶಕ್ಕೆ

ಬೆಳ್ತಂಗಡಿ: ತಹಶೀಲ್ದಾರ್‌ ರ ಮೂಲಕ ಸೌಜನ್ಯ ಪರ ಹೋರಾಟಗಾರ ಮೇಲೆ ಸುಳ್ಳು ಕೇಸ್‌ಗಳನ್ನು ಹಾಕಿ ದಮನ ಮಾಡುವ ಕಾರ್ಯ ಮಾಡುತ್ತಿರುವ ಬಗ್ಗೆ ಸರಕಾರಕ್ಕೆ ಮನವಿ ನೀಡಲು ಬಂದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ಸೌಜನ್ಯ ಪರ ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಮನವಿ ನೀಡಲು ಬಂದ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.

ಬಳಿಕ ಪ್ರಸನ್ನ ರವಿ ಹಾಗೂ ಸೌಜನ್ಯ ತಾಯಿ ಕುಸುಮಾವತಿ ನೇತೃತ್ವದಲ್ಲಿ ಮನವಿ ನೀಡಲು ತಾಲೂಕು ಕಚೇರಿಗೆ ತೆರಳಿದವರನ್ನು ಪೊಲೀಸರು ತಡೆದು ಮನವಿ ನೀಡಲು ಅವಕಾಶ ನೀಡುವುದಿಲ್ಲ ಎಂದರು. ಆ ವೇಳೆ ತಾಲೂಕು ಕಚೇರಿಯ ಮುಂದೆಯೇ ಅವರು ಕುಳಿತು ಮನವಿ ನೀಡಿದ ಬಳಿಕವೇ ಹಿಂತಿರುಗುವುದಾಗಿ ಪ್ರಕಟಿಸಿದರು. ಬಳಿಕ ಮೂವರಿಗೆ ತೆರಳಿ ಮನವಿ ಸಲ್ಲಿಸಲು ಅವಕಾಶ ನೀಡಲಾಯಿತು.

ತಾಲೂಕು ಕಚೇರಿಯ ಟಪಾಲು ವಿಭಾಗದಲ್ಲಿ ಪ್ರಸನ್ನ ರವಿ, ಕುಸುಮಾವತಿ ಹಾಗೂ ಮೋಹನ್ ಶೆಟ್ಟಿ ತೆರಳಿ ಮನವಿ ಸಲ್ಲಿಸಿದರು.

ಇದನ್ನೂ ಓದಿ: ಮಂಗಳೂರು | ಕಾರ್ಮಿಕ ನಾಯಕರನ್ನು ಬಂಧಿಸಿದ ರಾಜ್ಯ ಸರಕಾರದ ನಡೆಗೆ ಸಿಐಟಿಯು ತೀವ್ರ ಖಂಡನೆ

ಬಳಿಕ ಮಾತನಾಡಿದ ಪ್ರಸನ್ನ ರವಿ, ಪೊಲೀಸರು ಉದ್ದೇಶ ಪೂರ್ವಕವಾಗಿ ಮನವಿ ನೀಡಲು ಅವಕಾಶ ನೀಡದೆ, ತಡೆಯುವ ಮೂಲಕ ಮೂಲಭೂತ ಹಕ್ಕನ್ನೇ ಕಸಿಯುವ ಪ್ರಯತ್ನ ನಡೆಸಿದ್ದಾರೆ. ಯಾವುದೇ ಪ್ರತಿಭಟನೆ ನಡೆಸಿಲ್ಲ, ಯಾವುದೆ ಗಲಾಟೆ ಮಾಡಿಲ್ಲ‌. ಆದರೆ ಪೊಲೀಸರು ಮನವಿ ನೀಡಲು ಬಂದವರನ್ನು ತಡೆದಿದ್ದಾರೆ. ಬೆಳ್ತಂಗಡಿಯಲ್ಲಿ ಮಾತ್ರ ಹೊಸ ಕಾನೂನು ಏನಾದರೂ ಇದೆಯಾ ಎಂದು ಪ್ರಶ್ನಿಸಿದರು.

ಬೆಳ್ತಂಗಡಿ ಠಾಣೆಗೆ ನಾವು ದೂರು ನೀಡಿದರೆ ಕ್ರಮವೇ ಇಲ್ಲ. ಸೌಜನ್ಯ ಪರ ಹೋರಾಟಗಾರರ ಮೇಲೆ ಮಾತ್ರ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸುವ ದಮನ ಮಾಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮನವಿ ನೀಡಲು ಬಂದವರನ್ನು ತಡೆದ ಬೆನ್ನಲ್ಲಿಯೇ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ಜಮಾವಣೆಗೊಂಡಿದ್ದರು.

ಆರಂಭದಲ್ಲಿ ಮನವಿ ನೀಡಲು ತಾಲೂಕು ಕಚೇರಿಗೆ ಬಂದಿದ್ದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ತಡೆದಾಗ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ‌ನಡೆಯಿತು. ಈ ವೇಳೆ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಸಂಘಟನೆಯ ಮುಖಂಡರುಗಳಾದ ಪ್ರಜ್ವಲ್ ಗೌಡ ಕೆವಿ, ಪ್ರದೀಪ್, ರವೀಂದ್ರ ಶೆಟ್ಟಿ, ಶ್ರೀನಿವಾಸ, ಉದಯ ಕೊಯ್ಯೂರು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಳಿಕ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು |ಭೂ ಮಾಫಿಯಾ ವಿರುದ್ಧ ಹೋರಾಟ ಬಲಗೊಳ್ಳಲಿದೆ Janashakthi Media

Donate Janashakthi Media

Leave a Reply

Your email address will not be published. Required fields are marked *