ಕಲಬುರಗಿ : ತಲ್ವಾರ್ ಹಿಡಿದು ವಿಡಿಯೋ ಮಾಡಿದ ನಾಲ್ವರು ಯುವಕರ ವಿರುದ್ಧ ಇಲ್ಲಿನ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏರಿಯಾದಲ್ಲಿ ಹವಾ ಸೃಷ್ಟಿಸಲು ತಲ್ವಾರ್ ಹಿಡಿದು ವಿಡಿಯೋ ಮಾಡಿದ ನಾಲ್ವರು ಯುವಕರ ವಿರುದ್ಧ ಬಂಧಿಸಲಾಗಿದೆ.
ಇದನ್ನೂ ಓದಿ : ಹೂಲಿಹಳ್ಳಿ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಬಿಡುವಂತೆ ಆಗ್ರಹ: ವಿದ್ಯಾರ್ಥಿಗಳು ಊರಿನ ಗ್ರಾಮಸ್ಥರ ಪ್ರತಿಭಟನೆ
ಜೆ.ಆರ್.ನಗರದಲ್ಲಿ ಕೆಲವು ಯುವಕರು ಸಾರ್ವಜನಿಕವಾಗಿ ತಲ್ವಾರ್ ಪ್ರದರ್ಶಿಸಿದ್ದಾರೆ. ಅಲ್ಲದೆ, ಇದನ್ನು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಹಾಕಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಸದ್ಯ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈ ಪ್ರಕರಣದಲ್ಲೂ ಶಾಮೀಲಾಗಿರುವ ಮತ್ತು ಈಗಾಗಲೇ ಬೇರೊಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ದೇವನೂರ ಮಹಾದೇವ ಅವರಿಗೆ ವೈಕಂ ಪ್ರಶಸ್ತಿ: ವೈಕಂ ಸತ್ಯಾಗ್ರಹದ ಆಳ ಅಗಲ Janashakthi Media