ಬೆಂಗಳೂರು: ಭಾನುವಾರ ಬೆಂಗಳೂರಿನಲ್ಲಿ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಕಾರಿನಲ್ಲಿ ಒಬ್ಬರು ಮೃತಪಟ್ಟರೆ ಮತ್ತೊಬ್ಬರು ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದು, ಶವವಾಗಿ ಪತ್ತೆಯಾದ ಧಾರುಣ ಘಟನೆ ನಡೆದಿದೆ.
ನಗರದಲ್ಲಿ ಮಧಾಹ್ನ 3 ಗಂಟೆ ಸುಮಾರಿಗೆ ಸುರಿದ ಆಲಿಕಲ್ಲು ಮಳೆಯಿಂದ ರಸ್ತೆ ತುಂಬೆಲ್ಲಾ ನೀರು ತುಂಬಿಕೊಂಡಿತ್ತು. ಕೆಆರ್ ವೃತ್ತದ ಬಳಿ ಇರುವ ಅಂಡರ್‌ಪಾಸ್ (ಕೆಳಸೇತುವೆ) ಸಂಪೂರ್ಣ ನೀರು ತುಂಬಿತ್ತು. ಆ ಮೂಲಕ ತೆರಳಿದ ಕಾರು ಮಳೆಗೆ ಮುಳುಗಡೆಯಾಗಿದ್ದು, ಆ ಕಾರಿನಲ್ಲಿದ್ದ ಕುಟುಂಬಸ್ಥರು ಸಿಲುಕಿಕೊಂಡಿರು. ಕೂಡಲೇ ಅಲ್ಲಿದ್ದ ಆಟೋ ಚಾಲಕರು ಗಮನಿಸಿ ರಕ್ಷಣೆಗೆ ಮುಂದಾಗಿದ್ದು, ಆ ಕಾರಿನಲ್ಲಿದ್ದ ಆರು ಜನರ ಪೈಕಿ ಒಬ್ಬಳು ಯುವತಿ ಸಾವಿಗೀಡಾಗಿದ್ದಳು. ಮೃತ ಭಾನು ರೇಖಾ (22) ಇನ್ಫೋಸಿಸ್ ಉದ್ಯೋಗಿ ಆಗಿದ್ದು, ವೀಕೆಂಡ್ ಹಿನ್ನಲೆ ಕುಟುಂಬಸ್ಥರ ಜೊತೆ ಸುತ್ತಾಡಲು ಹೋಗಿದ್ರು. ಏಕಾಏಕಿ ಬಂದ ಮಳೆಗೆ ಯುವತಿ ಸೇರಿ 6 ಮಂದಿ ಕುಟುಂಬಸ್ಥರು ಮಳೆಯಲ್ಲಿ ಅಂಡರ್ಪಾಸ್ನಲ್ಲಿ ಸಿಲುಕಿದ್ರು.
ಇದನ್ನೂ ಓದಿ : ಜಲಾವೃತಗೊಂಡ ಕೆಆರ್ ಸರ್ಕಲ್ : ಅಂಡರ್ ಪಾಸ್ ನಲ್ಲಿ ಸಿಲುಕಿದ್ದ ಮಹಿಳೆ ಸಾವು
ಬ್ಯಾಟರಾಯನಪುರದಲ್ಲಿ ಮಳೆ ಬಂದ ಸಂದರ್ಭದಲ್ಲಿ ರಾಜಕಾಲುವೆಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದರು. ಈ ಕುರಿತು ನಿರಂತರ ಶೋಧ ಕಾರ್ಯ ನಡೆಸಿದ ಬಳಿಕ ಇಂದು ಸೋಮವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ಆತನನ್ನು ಲೋಕೇಶ್ ಎಂದು ಗುರುತಿಸಲಾಗಿದೆ. ಲೋಕೇಶ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆ ರವಾನೆ ಮಾಡಲಾಗಿದೆ.
ಭಾನುರೇಖಾ ಹಾಗೂ ಲೋಕೇಶ್ ಕುಟುಂಬಸ್ಥರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ. ಮುಂಗಾರು ಮಳೆ ಆರಂಭಕ್ಕೂ ಇನ್ನು ವಾರಗಳು ಬಾಕಿ ಇವೆ. ಪೂರ್ವ ಮುಂಗಾರು ಮಳೆ ಅಬ್ಬರಕ್ಕೆ ಬೆಂಗಳೂರಿನಲ್ಲಿ ಒಂದೇ ದಿನ ಇಬ್ಬರು ಮೃತಪಟ್ಟರುವುದು ಬೆಂಗಳೂರು ಜನರನ್ನು ಬೆಚ್ಚಿ ಬೀಳಿಸಿದೆ.