ಶಿವಮೊಗ್ಗ: ಶಿವಮೊಗ್ಗದಲ್ಲಿ ಹೋರಿ ಹಬ್ಬಕ್ಕೆ ಮತ್ತೊಂಬ್ಬ ಯುವಕ ಬಲಿಯಾಗಿದ್ದಾನೆ. ಹೋರಿ ತಿವಿದು ಯುವಕ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದ ಆಯೋಜಿಸಿದ್ದ ಹೋರಿ ಸ್ಪರ್ಧೆ ವೇಳೆ ನಡೆದಿದೆ.
ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ರಾಮು (26) ಹೋರಿ ತಿವಿದು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಣೆಗೆ ತೆರಳಿದ್ದ ವೇಳೆ ಹೋರಿ ಕುತ್ತಿಗೆಗೆ ತಿವಿದು ರಾಮು ಗಾಯಗೊಂಡಿದ್ದ. ಕೂಡಲೇ ಆತನನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಸ್ನೇಹಿತರು ಕರೆದೊಯ್ದಿದ್ದರು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಯುವಕ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದರಂತೆ. ಘಟನೆ ಸಂಬಂಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳೆದ ವರ್ಷ ಕೂಡ ಇದೇ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ವರ್ಧೆಯಲ್ಲಿ ಹೋರಿ ತಿವಿದು ಸಾವನ್ನಪ್ಪಿದ್ದ.
ಇದನ್ನು ಓದಿ : ಮೋದಿ ಪ್ರತಿ ಚುನಾವಣೆಗೆ ರಾಜಕೀಯ ಅಜೆಂಡಾ ಬದಲಾಯಿಸುತ್ತಾರೆ; ಶಶಿ ತರೂರ್
ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಥಳಿರಸ್ತೆಯಲ್ಲಿ ಮನೆಯಲ್ಲಿ ನಡೆದಿದೆ. 24 ವರ್ಷದ ವಿನಯ್ ಕುಮಾರ್ ಮೃತ ದುರ್ದೈವಿಯಾಗಿದ್ದು, ಯುವಕ ತನ್ನ ಕೈ ಹಾಗೂ ಕತ್ತುಕೊಯ್ದು ಕೊಂಡು ಬಳಿಕ ನೇಣಿಗೆ ಶರಣಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.
ಮೃತ ವಿನಯ್ ನಗರದ ಸರ್ಜಾಪುರ ಸಮೀಪದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸಾಯುವ ಮುನ್ನ ತನ್ನ ಮೊಬೈಲ್ ರೀ ಸ್ಟಾರ್ಟ್ ಮಾಡಿರುವ ಯುವಕ, ಸಿಮ್ ತೆಗೆದು ಬಿಸಾಡಿದ್ದಾನೆ. ಮೃತನಿಗೆ ಆನ್ಲೈನ್ ಗೇಮ್ ಆಡುವ ಚಟ ಹೊಂದಿದ್ದನಂತೆ, ಆನ್ಲೈನ್ ಗೇಮ್ ನಿಂದಾಗಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಯುವಕನ ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಇದನ್ನು ನೋಡಿ : ಏರುತ್ತಲೇ ಇದೆ ಅಪಘಾತಗಳ ಸಂಖ್ಯೆ! ಪ್ರತಿ ಗಂಟೆಗೆ 53 ಅಪಘಾತ, 19 ಸಾವು!! Janashakthi Media